ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2000 ನೋಟು ನಿಷೇಧಕ್ಕೆ ಚಂದ್ರಬಾಬು ನಾಯ್ಡು ಆಗ್ರಹ

By Mahesh
|
Google Oneindia Kannada News

ಅಮರಾವತಿ, ಸೆಪ್ಟೆಂಬರ್ 06: ಅಪನಗದೀಕರಣ ಅಥವಾ ನೋಟ್ ನಿಷೇಧ ಯೋಜನೆ, ಮೋದಿ ಸರ್ಕಾರದ ದೊಡ್ಡ 'ದುರಂತ' ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದ ಕಾರ್ಯಕರ್ತರ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು 2000 ನೋಟುಗಳನ್ನು ಕೂಡಲೆ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಎನ್‌ಡಿಎ ಮೈತ್ರಿಕೂಟ ಸೇರುವ ಬಗ್ಗೆ ಚಂದ್ರಬಾಬು ನಾಯ್ಡು ಹೇಳಿದ್ದೇನು?ಎನ್‌ಡಿಎ ಮೈತ್ರಿಕೂಟ ಸೇರುವ ಬಗ್ಗೆ ಚಂದ್ರಬಾಬು ನಾಯ್ಡು ಹೇಳಿದ್ದೇನು?

ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡುವ ಸರ್ಕಾರ ಇನ್ನೊಂದೆಡೆ ಕರೆನ್ಸಿ ನೋಟುಗಳ ಬಳಕೆ ಹೆಚ್ಚಿಸುತ್ತಿದೆ. ಡಿಜಿಟಲ್ ಕರೆನ್ಸಿ, ಪೇಮೆಂಟ್ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ವಿಸ್ತೃತಗೊಳ್ಳಬೇಕಿದೆ ಎಂದರು.

Demonetisation A Disaster, Discard Rs. 2,000 Notes: Chandrababu Naidu

ಅಮರಾವತಿ ನಗರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಅವರು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ಕೂಡ ನೀಡದೆ ಕೇಂದ್ರ ಸಮಸ್ಯೆಯುಂಟು ಮಾಡುತ್ತಿದೆ ಕೇಂದ್ರ ಸಾಕಷ್ಟು ಹಣಕಾಸು ಒದಗಿಸದೆ ಅಡ್ಡಿಯಾಗುತ್ತಿದೆ. ನಗರ ನಿರ್ಮಿಸುವ ಕಾರ್ಯ ವೇಗದಿಂದ ನಡೆಯುತ್ತಿದ್ದು, ಹೈಕೋರ್ಟ್ ಕಟ್ಟಡಗಳು ಈ ವರ್ಷ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.

ಮತ್ತೆ ದ್ರೋಹ ಬಗೆದ ಮೋದಿ: ಚಂದ್ರಬಾಬು ನಾಯ್ಡು ಆರೋಪ ಮತ್ತೆ ದ್ರೋಹ ಬಗೆದ ಮೋದಿ: ಚಂದ್ರಬಾಬು ನಾಯ್ಡು ಆರೋಪ

ರಾಜ್ಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು 10 ಲಕ್ಷ ಕೆರೆಗಳನ್ನು ನಿರ್ಮಿಸಲಾಗಿದೆ. ಹತ್ತು ನೀರಾವರಿ ಯೋಜನೆಗಳೂ ಪೂರ್ಣಗೊಂಡಿದ್ದು, ಇನ್ನೂ 10-16 ಯೋಜನೆಗಳು ಜಾರಿಗೊಳ್ಳಲಿವೆ. ಕೃಷಿ, ತೋಟಗಾರಿಕೆ ಮತ್ತು ಮತ್ಸ್ಯಕೃಷಿಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಂದರು.

English summary
Andhra Pradesh Chief Minister Chandrababu Naidu called demonetisation a disaster and demanded abolition of Rs. 2,000 currency note. He said, making digital currency is much cost effective than physical currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X