ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದ, ಪಡೆಯದ ಎರಡು ವರ್ಗಗಳಿಗೂ ಡೆಲ್ಟಾ ಹರಡಬಲ್ಲದು; ಅಧ್ಯಯನ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 19: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಲಸಿಕೆ ಪಡೆದುಕೊಂಡವರಲ್ಲೂ ಮತ್ತೆ ಸೋಂಕು ಪತ್ತೆಯಾಗುತ್ತಿದೆ.

ಚೆನ್ನೈನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಈ ಕುರಿತು ಅಧ್ಯಯನವೊಂದನ್ನು ನಡೆಸಿದ್ದು, ಕೊರೊನಾ ಲಸಿಕೆ ಪಡೆದವರು ಹಾಗೂ ಲಸಿಕೆ ಪಡೆಯದವರು ಈ ಎರಡು ವರ್ಗಕ್ಕೂ ತಾಗಬಲ್ಲಷ್ಟು ಡೆಲ್ಟಾ ರೂಪಾಂತರ ಸೋಂಕು ಬಲಿಷ್ಠವಾಗಿದೆ ಎಂದು ತಿಳಿಸಿದೆ.

ಲಸಿಕೆ ಪಡೆದವರಿಗೂ ಡೆಲ್ಟಾ ರೂಪಾಂತರ ಸೋಂಕು ತಗುಲಿದ ಹಲವು ಉದಾಹರಣೆಗಳು ದೊರೆತಿವೆ ಎಂದು ಸಂಶೋಧನೆ ತಿಳಿಸಿದೆ. ಆದರೆ ಲಸಿಕೆ ಪಡೆದವರಲ್ಲಿ ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದೆ.

Delta Variant Infects Both Vaccinated And Unvaccinated Says ICMR Study In Chennai

ಈ ಅಧ್ಯಯನವನ್ನು ಚೆನ್ನೈನ ಐಸಿಎಂಆರ್- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಸಾಂಸ್ಥಿಕ ನೈತಿಕ ಸಮಿತಿ ಅಂಗೀಕರಿಸಿದೆ. ಆಗಸ್ಟ್ 17ರ "ಜರ್ನಲ್ ಆಫ್ ಇನ್ಫೆಕ್ಷನ್‌"ನಲ್ಲಿ ಪ್ರಕಟಿಸಿದೆ.

ಡೆಲ್ಟಾ ರೂಪಾಂತರ ಅಥವಾ B.1.617.2 ರೂಪಾಂತರದ ಹರಡುವಿಕೆ ಲಸಿಕೆ ಪಡೆದವರ ಹಾಗೂ ಪಡೆಯದ ಜನರಲ್ಲಿ ಭಿನ್ನವಾಗಿರುವುದಿಲ್ಲ ಎಂದು ಈ ಸಂಶೋಧನೆ ಸೂಚಿಸಿದೆ. ಅತಿ ವೇಗವಾಗಿ ಹರಡಬಲ್ಲ ಡೆಲ್ಟಾ ರೂಪಾಂತರ ವಿಶ್ವಾದ್ಯಂತ ವ್ಯಾಪಿಸುತ್ತಿರುವ ಪ್ರಬಲ ತಳಿ ಎಂದು ಗುರುತಿಸಿಕೊಂಡಿದೆ. ಭಾರತದಲ್ಲಿ ಕೊರೊನಾ ಎರಡನೇ ಅಲೆ ಭೀಕರತೆಗೆ ಸಾಕ್ಷಿ ಎನ್ನಲಾಗಿದೆ.

ಡೆಲ್ಟಾ ರೂಪಾಂತರ ಸೋಂಕಿನ ನಂತರ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಸೋಂಕು ತಟಸ್ಥಗೊಂಡಿರುವುದರ ಕುರಿತು ಇತರೆ ಅಧ್ಯಯನಗಳ ಮಾಹಿತಿಯನ್ನು ಉಲ್ಲೇಖಿಸಿದೆ. ಸಂಪೂರ್ಣ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಕಂಡುಬರುವ ಸೋಂಕಿಗೆ ಕಾರಣಗಳನ್ನು ಕಲೆಹಾಕಲಾಗುತ್ತಿದೆ.

ತಗ್ಗಿದ ಸೋಂಕಿನ 'R' ದರ; ದೇಶದಲ್ಲಿ ಕೊರೊನಾ ಕಡಿಮೆಯಾಗುವ ಸೂಚನೆ ತಗ್ಗಿದ ಸೋಂಕಿನ 'R' ದರ; ದೇಶದಲ್ಲಿ ಕೊರೊನಾ ಕಡಿಮೆಯಾಗುವ ಸೂಚನೆ

'ಅಧ್ಯಯನಕ್ಕೆ ಒಳಪಡಿಸಿದ್ದ ಮಾದರಿಗಳ ಸಂಖ್ಯೆ ಕಡಿಮೆ ಇರುವುದರಿಂದ ಮರು ಸೋಂಕಿನ ಪ್ರಮಾಣವನ್ನು ಸೇರಿಸಲಾಗಿಲ್ಲ. ಇದರೊಂದಿಗೆ, ಲಸಿಕೆ ಪಡೆದ ನಂತರ ಮರು ಸೋಂಕಿಗೆ ಒಳಗಾದವರು ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೇ ಅಥವಾ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದಿದ್ದರೇ ಎಂಬುದನ್ನು ವರ್ಗೀಕರಿಸಿಲ್ಲ' ಎಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ವಿಜ್ಞಾನಿ ಜೆರೋಮ್ ತಂಗರಾಜ್ ಮಾಹಿತಿ ನೀಡಿದ್ದಾರೆ.

ಆದರೆ ಲಸಿಕೆ ತೆಗೆದುಕೊಂಡಿದ್ದ ರೋಗಿಗಳಲ್ಲಿ ತೀವ್ರ ಅನಾರೋಗ್ಯ ಅಥವಾ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

Delta Variant Infects Both Vaccinated And Unvaccinated Says ICMR Study In Chennai

ಮಧ್ಯಮ ಹಾಗೂ ತೀವ್ರ ಅನಾರೋಗ್ಯ ಹೊಂದಿರುವ ರೋಗಿಗಳ ಪ್ರಮಾಣವು ಲಸಿಕೆ ಹಾಕದ ಜನರಿಗಿಂತ ಸಂಪೂರ್ಣ ಲಸಿಕೆ ಪಡೆದ ಜನರಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಸಂಪೂರ್ಣ ಲಸಿಕೆ ಪಡೆದ ಜನರಲ್ಲಿ ಮರಣ ಪ್ರಮಾಣ ಅತಿ ಕಡಿಮೆಯಿದೆ ಎಂಬುದನ್ನು ಅಧ್ಯಯನ ಒತ್ತಿಹೇಳಿದೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭ ಭೀಕರ ಪರಿಸ್ಥಿತಿ ಕಂಡ ನಗರಗಳಲ್ಲಿ ಚೆನ್ನೈ ಕೂಡ ಒಂದಾಗಿತ್ತು. 2021 ಮೇ 1ರ ಮೊದಲ ಮೂರು ವಾರಗಳಲ್ಲಿ ಪ್ರತಿದಿನ ಸುಮಾರು ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಅಕ್ಟೋಬರ್- ನವೆಂಬರ್ 2020ರ ಅವಧಿಯಲ್ಲಿ ಅಂದಾಜು 45% ಸೆರೊಪ್ರಿವೆಲೆನ್ಸ್ ಇದ್ದರೂ ಸೋಂಕಿನ ಪ್ರಮಾಣ ಅತಿ ಹೆಚ್ಚಿತ್ತು.

ಆದರೆ ಲಸಿಕೆಗಳು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿವೆ. ಜೊತೆಗೆ ನಾವು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಸೂಕ್ತ ನಡವಳಿಕೆಗಳನ್ನು ಅನುಸರಿಸಬೇಕಿದೆ. ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕಿದೆ ಎಂದು ಅಧ್ಯಯನ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೋವಿಡ್ 19: ದೈನಂದಿನ ಪಾಸಿಟಿವಿಟಿ ದರ 1.96%ಕ್ಕೆ ಇಳಿಕೆಕೋವಿಡ್ 19: ದೈನಂದಿನ ಪಾಸಿಟಿವಿಟಿ ದರ 1.96%ಕ್ಕೆ ಇಳಿಕೆ

ಭಾರತದ ಕೊರೊನಾ ಪ್ರಕರಣ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 36,401 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಂದು ದಿನದಲ್ಲಿ 39,157 ಮಂದಿ ಗುಣಮುಖರಾಗಿದ್ದು, 530 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಒಟ್ಟು ಗುಣಮುಖರಾದವರ ಸಂಖ್ಯೆ: 3,15,25,080 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ: 3,64,129 ಆಗಿದೆ.

English summary
Indian Council of Medical Research (ICMR) study conducted in Chennai has found that the Delta variant of the Covid-19 virus has the potential to infect both vaccinated and unvaccinated people,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X