ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಅಲೆಗೆ ಪ್ರಚೋದನೆಯೇ "ಡೆಲ್ಟಾ ಪ್ಲಸ್"? ಇದರ ಲಕ್ಷಣಗಳೇನು?

|
Google Oneindia Kannada News

ನವದೆಹಲಿ, ಜೂನ್ 22: ದೇಶದಲ್ಲಿ ಈಚೆಗೆ ಪತ್ತೆಯಾಗಿರುವ "ಡೆಲ್ಟಾ ಪ್ಲಸ್" ರೂಪಾಂತರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊಸ ಸವಾಲನ್ನು ಒಡ್ಡುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Recommended Video

ಎಚ್ಚರಿಕೆ! ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್:ರಾಜ್ಯದಲ್ಲಿ 2 ಕೇಸ್ ಪತ್ತೆ | Oneindia Kannada

ದೇಶದಲ್ಲಿ ಮಂಗಳವಾರದವರಗೆ ಒಟ್ಟು 22 ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಮಹಾರಾಷ್ಟ್ರ ಒಂದರಲ್ಲಿಯೇ 16 ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಈ ಡೆಲ್ಟಾ ಪ್ಲಸ್ ರೂಪಾಂತರ ಕೊರೊನಾ ಮೂರನೇ ಅಲೆಗೆ ಕಾರಣವಾಗಬಹುದು ಎಂದು ರಾಜ್ಯ ಆರೋಗ್ಯ ಇಲಾಖೆ ತಜ್ಞರು ಈ ಮುನ್ನವೇ ಎಚ್ಚರಿಕೆ ನೀಡಿದ್ದರು. ಇದೀಗ ದೇಶದಲ್ಲೇ ಕೊರೊನಾ ಮೂರನೇ ಅಲೆ ಸೃಷ್ಟಿಗೆ ಈ ರೂಪಾಂತರ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಲಾಗುತ್ತಿದೆ. "ಡೆಲ್ಟಾ ಪ್ಲಸ್" ರೂಪಾಂತರ ಎಂದರೇನು? ಎಲ್ಲೆಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇದರ ಲಕ್ಷಣಗಳೇನು? ಮುಂದೆ ಓದಿ...

 ಡೆಲ್ಟಾ ಪ್ಲಸ್ 35-60% ಹೆಚ್ಚು ವೇಗವಾಗಿ ಹರಡಬಲ್ಲದು

ಡೆಲ್ಟಾ ಪ್ಲಸ್ 35-60% ಹೆಚ್ಚು ವೇಗವಾಗಿ ಹರಡಬಲ್ಲದು

ದೇಶದಲ್ಲಿ ಕೊರೊನಾ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರದಿಂದ "ಡೆಲ್ಟಾ ಪ್ಲಸ್" ಅಥವಾ AY.1 ರೂಪಾಂತರ ಸೃಷ್ಟಿಯಾಗಿದ್ದು, ಈ ಸೋಂಕು ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಿದೆ. ದೇಶದಲ್ಲಿ 22 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. "ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್‌ನ 15-20 ಪ್ರಕರಣಗಳು ಪತ್ತೆಯಾಗಿವೆ. ಈಗಲೇ ನಿಗಾ ವಹಿಸುವುದು ಅವಶ್ಯಕವಾಗಿದೆ. ಡೆಲ್ಟಾ ಪ್ಲಸ್ ಇನ್ನಷ್ಟು ಅಪಾಯಕಾರಿಯಾಗುವ ಸಾಧ್ಯತೆಯಿದೆ" ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ. ಸುಜೀತ್ ಸಿಂಗ್ ತಿಳಿಸಿದ್ದಾರೆ.

ಎಚ್ಚರಿಕೆ ನಡುವೆಯೇ ಎಚ್ಚರಿಕೆ ನಡುವೆಯೇ "ಡೆಲ್ಟಾ ಪ್ಲಸ್" ಪ್ರಕರಣಗಳ ಸಂಖ್ಯೆ ಏರಿಕೆ

ಆಲ್ಫಾ ಸೋಂಕಿಗೆ ಹೋಲಿಸಿದರೆ ಈ ಸೋಂಕು 35-60% ಹೆಚ್ಚು ವೇಗವಾಗಿ ಹರಡಬಲ್ಲದು. ಆದರೆ ಸೋಂಕಿನ ಪ್ರಕರಣಗಳು ಕಡಿಮೆ ಇರುವುದರಿಂದ ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ಏಮ್ಸ್‌ ಸಹಾಯಕ ಪ್ರಾಧ್ಯಾಪಕ ಡಾ. ಸುಬ್ರದೀಪ್ ಕರ್ಮಾಕರ್ ಹೇಳಿದ್ದಾರೆ.

 ಡೆಲ್ಟಾ ಪ್ಲಸ್ ಲಕ್ಷಣಗಳೇನು?

ಡೆಲ್ಟಾ ಪ್ಲಸ್ ಲಕ್ಷಣಗಳೇನು?

ಪ್ರಾಥಮಿಕ ಅಧ್ಯಯನದಿಂದ ಈ ಹೊಸ ರೂಪಾಂತರದ ಕೆಲವು ಲಕ್ಷಣಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಕೆಮ್ಮು, ಜ್ವರ, ಸುಸ್ತಿನಂಥ ಲಕ್ಷಣಗಳ ಹೊರತಾಗಿ ಹೊಟ್ಟೆ ನೋವು, ಹಸಿವಾಗದಿರುವುದು, ವಾಂತಿ, ಕೀಲು ನೋವು, ಕಿವಿ ಕೇಳಿಸದಿರುವುದು ಇಂಥ ಲಕ್ಷಣಗಳಿಂದ ಸೋಂಕನ್ನು ಗುರುತಿಸಬಹುದು ಎಂದು ತಿಳಿಸಿದ್ದಾರೆ.

"ಇದು ಡೆಲ್ಟಾ ರೂಪಾಂತರವೇ ಆದ್ದರಿಂದ ಇದು ಕೂಡ ವೇಗವಾಗಿ ಪಸರಿಸಬಹುದು ಹಾಗೂ ಇದರಲ್ಲಿಯೂ ಮಾನವನ ಜೀವಕೋಶಕ್ಕೆ ಹಾನಿ ತರುವ ಲಕ್ಷಣಗಳು ಕಂಡುಬಂದಿವೆ," ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್‌ಸ್ಟಿಟ್ಯೂಟ್ ತಜ್ಞ ವಿನೋದ್ ಸ್ಕಾರಿಯಾ ತಿಳಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಹೆಚ್ಚಳ

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಹೆಚ್ಚಳ

ದೇಶದಲ್ಲಿ ಜೂನ್ 7ರಿಂದ ಡೆಲ್ಟಾ ಪ್ಲಸ್ ಸೋಂಕಿನ ಪ್ರಕರಣಗಳು ಇದುವರೆಗೂ 22ಕ್ಕೆ ಏರಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಅಂದರೆ 16 ಪ್ರಕರಣಗಳು ಪತ್ತೆಯಾಗಿವೆ. ಈ ರೂಪಾಂತರ ಸೋಂಕಿನಿಂದ ಮಹಾರಾಷ್ಟ್ರದಲ್ಲಿ ನಿರೀಕ್ಷೆಗಿಂತ ಅತಿ ಬೇಗನೇ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಪರೀಕ್ಷೆಗಳನ್ನು ಚುರುಕುಗೊಳಿಸಲಾಗಿದೆ.

 ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

ರಾಜ್ಯ ಸರ್ಕಾರಗಳಿಗೆ ಕೇಂದ್ರದ ಸೂಚನೆ

ಡೆಲ್ಟಾ ಪ್ಲಸ್ ರೂಪಾಂತರದ ಕುರಿತು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. "ಈ ಸಣ್ಣ ಸಮಸ್ಯೆ ದೊಡ್ಡ ಸ್ವರೂಪ ಪಡೆಯುವುದಕ್ಕೆ ಅವಕಾಶ ಮಾಡಿಕೊಡಬಾರದು. ಹೀಗಾಗಿ ಈಗಲೇ ಈ ಹೊಸ ರೂಪಾಂತರದ ಕುರಿತು ನಿಗಾ ವಹಿಸಿ" ಎಂದು ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಜನದಟ್ಟಣೆಯಿರುವ ಬೆಂಗಳೂರು, ಹೈದರಾಬಾದ್, ನವದೆಹಲಿ ಹಾಗೂ ಪುಣೆಗೆ ಈ ರೂಪಾಂತರ ಸೋಂಕಿನ ಜೆನೋಮ್ ಸಂಬಂಧ ಬುಲೆಟಿನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 ಎಲ್ಲೆಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳಿವೆ?

ಎಲ್ಲೆಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳಿವೆ?

ಭಾರತ ಹೊರತುಪಡಿಸಿ ಬ್ರಿಟನ್, ಪೋಲ್ಯಾಂಡ್, ಸ್ವಿಟ್ಜರ್ಲೆಂಡ್, ಜಪಾನ್, ನೇಪಾಳ, ಚೀನಾ, ರಷ್ಯಾದಲ್ಲೂ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿದೆ. ಭಾರತದಲ್ಲಿ ಮಹಾರಾಷ್ಟ್ರ, ಕೇರಳ, ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

English summary
The ‘Delta Plus’ variant of the Covid-19 virus is highly contagious and may trigger 3rd wave, warns experts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X