ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ನಂತರ ಭಾರತದಲ್ಲಿ ಮತ್ತೊಂದು ಹೊಸ ರೂಪಾಂತರ ಪತ್ತೆ

|
Google Oneindia Kannada News

ನವದೆಹಲಿ, ಜೂನ್ 15: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಭೀಕರತೆಗೆ ಕಾರಣ ಎನ್ನಲಾದ ಡೆಲ್ಟಾ ರೂಪಾಂತರದ ನಂತರ ಇದೀಗ ಮತ್ತೊಂದು ರೂಪಾಂತರ ಸೋಂಕು ಪತ್ತೆಯಾಗಿದೆ. ಈ ರೂಪಾಂತರಕ್ಕೆ "ಡೆಲ್ಟಾ ಪ್ಲಸ್" ಎಂದು ಹೆಸರಿಸಲಾಗಿದೆ.

ಮೇ ತಿಂಗಳಿನಲ್ಲಿ ಭಾರತದಲ್ಲಿ ಪತ್ತೆಯಾದ B.1.617.2 ಕೊರೊನಾ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಡೆಲ್ಟಾ ರೂಪಾಂತರ ಎಂದು ಕರೆದಿತ್ತು. ಈ ವರ್ಷಾರಂಭದಲ್ಲಿ ಭಾರತದಲ್ಲಿ ಕೊರೊನಾ ಎರಡನೇ ಅಲೆಯಲ್ಲಿನ ಅವಘಡಗಳಿಗೆ ಈ ರೂಪಾಂತರವೇ ಕಾರಣ ಎಂದು ಗುರುತಿಸಲಾಗಿತ್ತು.

ಇದೀಗ ಆ ಡೆಲ್ಟಾ ಮತ್ತೊಂದು ರೂಪಾಂತರ ಸೃಷ್ಟಿಸಿದ್ದು, ಅದನ್ನು ಡೆಲ್ಟಾ ಪ್ಲಸ್ ಅಥವಾ AY.1 ರೂಪಾಂತರ ಎಂದು ಗುರುತಿಸಲಾಗಿದೆ. "ಇದು ಡೆಲ್ಟಾ ರೂಪಾಂತರವೇ ಆದ್ದರಿಂದ ಇದು ಕೂಡ ವೇಗವಾಗಿ ಪಸರಿಸಬಹುದು ಹಾಗೂ ಇದರಲ್ಲಿಯೂ ಮಾನವನ ಜೀವಕೋಶಕ್ಕೆ ಹಾನಿತರುವ ಲಕ್ಷಣಗಳು ಕಂಡುಬಂದಿವೆ," ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್‌ಸ್ಟಿಟ್ಯೂಟ್ ತಜ್ಞ ವಿನೋದ್ ಸ್ಕಾರಿಯಾ ತಿಳಿಸಿದ್ದಾರೆ.

Delta Plus Variant Identified In India

"ಜೂನ್ 7ರಿಂದ ಭಾರತದಲ್ಲಿ ಆರು ಜೆನೋಮ್‌ನಲ್ಲಿ ಈ ಡೆಲ್ಟಾ ಪ್ಲಸ್ ರೂಪಾಂತರವನ್ನು ಗುರುತಿಸಲಾಗಿದೆ," ಎಂದು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ತನ್ನ ಈಚಿನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಸದ್ಯಕ್ಕೆ ಈ ರೂಪಾಂತರ ಕಡಿಮೆ ಪ್ರಮಾಣದಲ್ಲಿರುವುದರಿಂದ ಈ ಕುರಿತು ಆತಂಕ, ಭಯ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ರೂಪಾಂತರ ದ್ವಿಗುಣಗೊಳ್ಳುವುದನ್ನು ಹಾಗೂ ಮತ್ತೊಂದು ರೂಪಾಂತರ ಸೃಷ್ಟಿಸುವುದನ್ನು ತಡೆಯುವ ಅಗತ್ಯ ಹಿಂದಿನದಕ್ಕಿಂತ ಹೆಚ್ಚಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

English summary
The 'Delta' variant has further mutated to form the 'Delta plus' or 'AY.1' variant in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X