ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ "ಡೆಲ್ಟಾ ಪ್ಲಸ್" ರೂಪಾಂತರ ವೈರಸ್ ಬಗ್ಗೆ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜೂನ್ 23: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ತಳಿಯನ್ನು ಕೇಂದ್ರ ಸರ್ಕಾರ ಕಾಳಜಿಯ ರೂಪಾಂತರ ಎಂದು ಘೋಷಿಸಿದೆ. ಹೊಸ ರೂಪಾಂತರ ವೈರಸ್ ಪತ್ತೆ ಆಗಿರುವ ಮೂರು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ನಿಯಮಗಳ ಪಾಲನೆಗೆ ಸಲಹೆ ನೀಡಲಾಗಿದೆ.

ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶದಲ್ಲಿ 22 ಮಂದಿ ಕೊರೊನಾವೈರಸ್ ಸೋಂಕಿತರಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿದೆ. ಈ ಹಿನ್ನೆಲೆ ಹೊಸ ರೂಪಾಂತರ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ಪ್ರತ್ಯೇಕಿಸಬೇಕು ಹಾಗೂ ರೂಪಾಂತರ ವೈರಸ್ ಹರಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಮೂರನೇ ಅಲೆಗೆ ಪ್ರಚೋದನೆಯೇ ಮೂರನೇ ಅಲೆಗೆ ಪ್ರಚೋದನೆಯೇ "ಡೆಲ್ಟಾ ಪ್ಲಸ್"? ಇದರ ಲಕ್ಷಣಗಳೇನು?

ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿರುವ ರಾಜ್ಯಗಳಲ್ಲಿ ಯಾವ ರೀತಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಲಹೆ-ಸೂಚನೆಗಳನ್ನು ನೀಡಿದೆ.

ಡೆಲ್ಬಾ ಪ್ಲಸ್ ಸೋಂಕು ಹರಡದಂತೆ ಕಣ್ಗಾವಲಿಗೆ ಸೂಚನೆ

ಡೆಲ್ಬಾ ಪ್ಲಸ್ ಸೋಂಕು ಹರಡದಂತೆ ಕಣ್ಗಾವಲಿಗೆ ಸೂಚನೆ

ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯು ಪತ್ತೆ ಆಗಿರುವ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು. ಸೋಂಕು ಪತ್ತೆ ಆಗಿರುವ ಸ್ಥಳದಲ್ಲಿ ಕಣ್ಗಾವಲು ಇರಿಸಬೇಕು. ಜನ ಸಂದಣಿ ನಿಯಂತ್ರಣ, ಹೆಚ್ಚು ಜನ ಸೇರುವುದಕ್ಕೆ ನಿಯಂತ್ರಣ ಹಾಕುವುದರ ಜೊತೆಗೆ ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ.

ಲಸಿಕೆ ವಿರತಣೆ ಜೊತೆಗೆ ರೂಪಾಂತರ ವೈರಸ್ ಪತ್ತೆಗೆ ಆದ್ಯತೆ

ಲಸಿಕೆ ವಿರತಣೆ ಜೊತೆಗೆ ರೂಪಾಂತರ ವೈರಸ್ ಪತ್ತೆಗೆ ಆದ್ಯತೆ

ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಪತ್ತೆಗೆ ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು ನಡೆಸುವುದು. ಆದ್ಯತೆ ಮೇರೆಗೆ ಕೊವಿಡ್-19 ಲಸಿಕೆ ವಿತರಣೆ ಜೊತೆಗೆ ರೂಪಾಂತರ ತಳಿ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಇದರ ಜೊತೆಗೆ ಸಾಂಕ್ರಾಮಿಕ ರೋಗದ ನಡುವಿನ ವೈದ್ಯಕೀಯ ಸಂಬಂಧವನ್ನು ಪತ್ತೆ ಮಾಡುವುದಕ್ಕಾಗಿ ಸೋಂಕು ತಗುಲಿದ ವ್ಯಕ್ತಿಗಳ ಮಾದರಿಯನ್ನು INSACOG ಪ್ರಯೋಗಾಲಯಗಳಿಗೆ ಕಳುಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

"ದೇಶದ 28 ಕಡೆಗಳಲ್ಲಿ INSACOG ಪ್ರಯೋಗಾಲಯಗಳಿದ್ದು, ಹೊಸ ತಳಿಯ ಹರಡುವಿಕೆ ವೇಗ, ಶ್ವಾಸಕೋಶದ ಮೇಲೆ ಬೀರುವ ಪ್ರಭಾವ, ಮೊನೊಕ್ಲೋನಲ್ ಪ್ರತಿಕಾಯ ವ್ಯವಸ್ಥೆ ಇಳಿಮುಖಗೊಳಿಸುವಲ್ಲಿ ಹೊಸ ವೈರಸ್ ಪಾತ್ರದ ಬಗ್ಗೆ ಪರಿಶೋಧನೆ ನಡೆಸಲಾಗುತ್ತದೆ," ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.

3 ರಾಜ್ಯಗಳ 6 ಜಿಲ್ಲೆಗಳಲ್ಲಿ 22 ಡೆಲ್ಟಾ ಪ್ಲಸ್ ಪ್ರಕರಣ

3 ರಾಜ್ಯಗಳ 6 ಜಿಲ್ಲೆಗಳಲ್ಲಿ 22 ಡೆಲ್ಟಾ ಪ್ಲಸ್ ಪ್ರಕರಣ

ಭಾರತದಲ್ಲಿ ಇದುವರೆಗೂ ಮೂರು ರಾಜ್ಯಗಳ ಆರು ಜಿಲ್ಲೆಗಳಲ್ಲಿ ಒಟ್ಟು 22 ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದ ರತ್ನಗಿರಿ ಮತ್ತು ಜಲಗಾವ್ ಜಿಲ್ಲೆಗಳಲ್ಲಿ ಒಟ್ಟು 16 ಪ್ರಕರಣಗಳು ಪತ್ತೆಯಾಗಿದ್ದು, ಕೇರಳದ ಪಲಕ್ಕದ್, ಪಥಮಥಿಟ್ಟ ಜಿಲ್ಲೆ ಹಾಗೂ ಮಧ್ಯಪ್ರದೇಶದ ಭೋಪಾಲ್, ಶಿವಪುರಿ ಜಿಲ್ಲೆಗಳಲ್ಲಿ 6 ಸೋಂಕಿತ ಪ್ರಕರಣಗಳು ವರದಿಯಾಗಿವೆ.

"ಮಹಾರಾಷ್ಟ್ರದ ಎಷ್ಟು ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್?"

"ಕೇಂದ್ರ ಆರೋಗ್ಯ ಸಚಿವಾಲಯವು ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಮಾತ್ರ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿದೆ ಎಂದು ಉಲ್ಲೇಖಿಸಿದೆ. ಆದರೆ ರಾಜ್ಯದ 6 ರಿಂದ 7 ಜಿಲ್ಲೆಗಳಲ್ಲಿ ಹೊಸ ರೂಪಾಂತರ ವೈರಸ್ ಪತ್ತೆಯಾಗಿದೆ," ಎಂದು ಆರೋಗ್ಯ ಸಚಿವ ರಾಜೇಶ್ ತೊಪೆ ಹೇಳಿದ್ದಾರೆ.

9 ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್

9 ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್

ವಿಶ್ವದ 9 ರಾಷ್ಟ್ರಗಳಲ್ಲಿ ಕೊರೊನಾವೈರಸ್ ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿ ಪತ್ತೆಯಾಗಿದೆ. ಭಾರತವನ್ನು ಹೊರತುಪಡಿಸಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಇಂಗ್ಲೆಂಡ್, ಪೊರ್ಚುಗಲ್, ಸ್ವಿಡ್ಜರ್ ಲ್ಯಾಂಡ್, ಜಪಾನ್, ಪೊಲ್ಯಾಂಡ್, ಚೀನಾ ಮತ್ತು ರಷ್ಯಾದಲ್ಲಿ ಹೊಸ ತಳಿಯು ಪತ್ತೆಯಾಗಿವೆ.

English summary
Delta Plus: Central Govt Alert To States To Strictly Isolate Covid Cases With New Strain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X