ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರದಲ್ಲಿ ಯಾವುದು ಡೇಂಜರ್!?

|
Google Oneindia Kannada News

ನವದೆಹಲಿ, ಆಗಸ್ಟ್ 14: ಮುಂಬೈನಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ 63 ವರ್ಷದ ವೃದ್ಧೆಯ ಸಾವು ದೇಶದಲ್ಲಿ ಹೊಸ ಆತಂಕವನ್ನು ಸೃಷ್ಟಿಸಿದೆ. ಕೊವಿಡ್-19 ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರ ತಳಿಯು ಮಹಿಳೆಯ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ನಿಂದಾಗಿ ಈವರೆಗೂ ಮೂವರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಡೆಲ್ಟಾ ರೂಪಾಂತರ ವೈರಸ್ ಅಟ್ಟಹಾಸ ತೋರಿದ್ದು ಆಗಿದೆ. ದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯು ಮೂರನೇ ಅಲೆಗೆ ಮುಖ್ಯ ಕಾರಣವಾಗಲಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ತಜ್ಞವೈದ್ಯರ ಎಚ್ಚರಿಕೆ ನಡುವೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿನಿಂದ ಸಾವಿನ ಮನೆ ಸೇರುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಲಸಿಕೆ ಹಾಕಿಸಿಕೊಂಡ 40,000 ಜನರಿಗೆ ಕೊರೊನಾವೈರಸ್ ಸೋಂಕು! ಲಸಿಕೆ ಹಾಕಿಸಿಕೊಂಡ 40,000 ಜನರಿಗೆ ಕೊರೊನಾವೈರಸ್ ಸೋಂಕು!

ಕಳೆದ ತಿಂಗಳು ರಾಯಗಢದಲ್ಲಿ 69 ವರ್ಷದ ವೃದ್ಧರೊಬ್ಬರು ಇದೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು. ಅದಾಗಿ ಕೆಲವೇ ದಿನಗಳಲ್ಲಿ 80 ವರ್ಷದ ವೃದ್ಧೆಯು ರತ್ನಗಿರಿಯಲ್ಲಿ ಅಸುನೀಗಿದ್ದರು. ಇದರ ಮಧ್ಯೆ ದೇಶದಲ್ಲಿ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪೈಕಿ ಯಾವ ರೂಪಾಂತರ ವೈರಸ್ ಹೆಚ್ಚು ಅಪಾಯಕಾರಿ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಎರಡು ರೂಪಾಂತರ ತಳಿಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಕೊರೊನಾವೈರಸ್ ರೂಪಾಂತರ ಸೃಷ್ಟಿಸಿದ ದುರಂತ

ಕೊರೊನಾವೈರಸ್ ರೂಪಾಂತರ ಸೃಷ್ಟಿಸಿದ ದುರಂತ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಿಂದಿನ ಕಾರಣವೇ ಡೆಲ್ಟಾ ರೂಪಾಂತರ ವೈರಸ್ ಎಂಬುದನ್ನು ಗುರುತಿಸಲಾಗಿತ್ತು. ಅದೇ ಡೆಲ್ಟಾ ವೈರಸ್ ಜಗತ್ತಿನ 84 ರಾಷ್ಟ್ರಗಳಿಗೆ ಹರಡಿದ್ದು, ಈಗ ಹಳೆಯ ಸುದ್ದಿ. ಡೆಲ್ಟಾ ರೂಪಾಂತರ ವೈರಸ್ ಬೆನ್ನಲ್ಲೇ ಡೆಲ್ಟಾ ಪ್ಲಸ್ ರೂಪಾಂತರವನ್ನು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಭಾರತ ಸೇರಿದಂತೆ ವಿಶ್ವದ 11 ರಾಷ್ಟ್ರಗಳಲ್ಲಿ ಇದೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಕಾಣಿಸಿಕೊಂಡಿದೆ. ದೇಶದ ಮಟ್ಟಿಗೆ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ.

ಡೆಲ್ಟಾ ಬಗ್ಗೆ ತಜ್ಞವೈದ್ಯರ ಅವಲೋಕನ:

ಭಾರತದ ಡೆಲ್ಟಾ ಪ್ಲಸ್ ರೂಪಾಂತರವನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೊಸ ರೂಪಾಂತರದ ಮೇಲೆ ಲಸಿಕೆ ಪರಿಣಾಮವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಡೆಲ್ಟಾ ರೂಪಾಂತರಕ್ಕಿಂತ ಹಗೆಚ್ಚು ಪ್ರಮಾಣದಲ್ಲಿ ಹರಡುವುದಿಲ್ಲ ಎಂಬುದನ್ನು ತಜ್ಞವೈದ್ಯರು ಕಂಡುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಏರಿಕೆ; ಸೋಂಕಿಗೆ ಮೂರನೇ ಬಲಿಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಏರಿಕೆ; ಸೋಂಕಿಗೆ ಮೂರನೇ ಬಲಿ

ಎರಡು ಡೆಲ್ಟಾ ರೂಪಾಂತರ ವೈರಸ್ ನಡುವಿನ ಅಂತರ

ಎರಡು ಡೆಲ್ಟಾ ರೂಪಾಂತರ ವೈರಸ್ ನಡುವಿನ ಅಂತರ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಹಿಂದೆ ಇದೇ ಡೆಲ್ಟಾ ರೂಪಾಂತರ ವೈರಸ್ ಇರುವುದನ್ನು ಪತ್ತೆ ಮಾಡಲಾಗಿತ್ತು. ಡೆಲ್ಟಾ ಪ್ಲಸ್ ಅದರ ರೂಪಾಂತರಗೊಂಡ ರೂಪವಾಗಿದ್ದು, ಇದು ಜಾಗತಿಕ ಕಾಳಜಿಯ ಒಂದು ರೂಪಾಂತರವೆಂದು ಕರೆಯಲ್ಪಡುತ್ತದೆ. ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ತಳಿ ಹಾಗೂ ಬೀಟಾ ತಳಿಯಿಂದ ರೂಪಾಂತರ ಪಡೆದಿರುವುದನ್ನು ತೋರಿಸುತ್ತದೆ. ಬೀಟಾ ತಳಿಯು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿತ್ತು. ಡೆಲ್ಟಾ ತಳಿಯ ಪ್ರೋಟೀನ್‌ನಲ್ಲಿ K417N ಎಂಬ ರೂಪಾಂತರ ಸೇರಿದ ಪರಿಣಾಮವಾಗಿ ಡೆಲ್ಟಾ ಪ್ಲಸ್ ರೂಪುಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹೆಸರಿಸಿದಂತೆ B.1.617.2 ತಳಿ ಅಥವಾ ಡೆಲ್ಟಾ ರೂಪಾಂತರದ ಹೊಸ ರೂಪಾಂತರವು ಎರಡು ಶ್ರೇಣೀಕೃತ ರೂಪಾಂತರಗಳಾದ L452R ಮತ್ತು P871R ಎಂದು ಕಂಡುಬಂದಿದೆ.

ಡೆಲ್ಟಾ ಪ್ಲಸ್ ರೂಪಾಂತರವೇ ಹೆಚ್ಚು ಅಪಾಯಕಾರಿ?

ಡೆಲ್ಟಾ ಪ್ಲಸ್ ರೂಪಾಂತರವೇ ಹೆಚ್ಚು ಅಪಾಯಕಾರಿ?

ಭಾರತದಲ್ಲಿ ಡೆಲ್ಟಾ ಪ್ಲಸ್‌ನ ರೂಪಾಂತರದ ಹರಡುವಿಕೆಯ ಪ್ರಮಾಣ ಕಡಿಮೆಯಾಗಿದೆ. ಹಾಗಿದ್ದರೂ ಕೆಲವು ರೂಪಾಂತರಗಳಿಂದ ವೈರಸ್ ಹೆಚ್ಚಾಗಿ ಹರಡುವ ಅಥವಾ ಹೆಚ್ಚು ವೈರಲ್ ಆಗಲು ಅಥವಾ ಎರಡಕ್ಕೂ ಸಹಾಯ ಮಾಡಬಹುದು ಎಂಬ ಅಂಶವನ್ನು ವಿಜ್ಞಾನಿಗಳು ತಿಳಿದಿದ್ದಾರೆ. AY.1 ಮತ್ತು AY.2 ಎರಡೂ ಡೆಲ್ಟಾದ ಮೂಲ ತಳಿಯಾಗಿದ್ದರಿಂದ ಅವುಗಳು ಡೆಲ್ಟಾ ರೂಪಾಂತರದ ಕೆಲವು ಗುಣಲಕ್ಷಣಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, K417N ರೂಪಾಂತರವು ಬೀಟಾ ರೂಪಾಂತರದಲ್ಲಿದ್ದು, ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ದಾರಿ ತೋರಿಸುತ್ತದೆ. ಇದರ ಜೊತೆ ಪ್ರತಿಕಾಯಗಳನ್ನು ತಪ್ಪಿಸಬಹುದು ಎಂದು ವರದಿಯಾಗಿದೆ. ಭಾರತೀಯ ಸರ್ಕಾರದ ಪ್ರಕಾರ, ಡೆಲ್ಟಾ ಪ್ಲಸ್ ರೂಪಾಂತರವು ಹೆಚ್ಚಿನ ಹರಡುವಿಕೆ ಅಪಾಯವನ್ನು ಹೊಂದಿದ್ದು, ಶ್ವಾಸಕೋಶ ಸಂಬಂಧಿ ಆರೋಗ್ಯ ಸಮಸ್ಯೆ ಹೆಚ್ಚಾಗಲಿದೆ. ಡೆಲ್ಟಾ ಪ್ಲಸ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ "ಸುಮಾರು 60 ಪ್ರತಿಶತ ವೇಗವಾಗಿ" ಹರಡುತ್ತದೆ ಎಂದು ವರದಿಯಾಗಿದೆ.

ಡೆಲ್ಟಾ ಪ್ಲಸ್ ರೂಪಾಂತರದ ಹರಡುವಿಕೆ ವೇಗ ಅಷ್ಟಕಷ್ಟೇ

ಡೆಲ್ಟಾ ಪ್ಲಸ್ ರೂಪಾಂತರದ ಹರಡುವಿಕೆ ವೇಗ ಅಷ್ಟಕಷ್ಟೇ

ವೈದ್ಯಕೀಯ ಪ್ರಯೋಗಾಲಯ ಮತ್ತು ಜಿನೋಮಿಕ್ ದತ್ತಾಂಶಗಳ ಪ್ರಕಾರ, ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಎಂಬುದು ಡೆಲ್ಟಾ ರೂಪಾಂತರ ರೋಗಾಣುವಿಗಿಂತ ಹೆಚ್ಚು ವೇಗವಾಗಿ ಹರಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ 12 ರಾಜ್ಯಗಳಲ್ಲಿ ಮಾತ್ರ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ವರದಿಯಾಗಿದೆ. ಈ ವೈರಸ್ ಪತ್ತೆ ಮತ್ತು ಪರೀಕ್ಷೆಗಾಗಿ ದೇಶಾದ್ಯಂತ 28 ಪ್ರಯೋಗಾಲಯ ತೆರೆಯಲಾಗಿದೆ. ದೇಶದ 12 ರಾಜ್ಯಗಳಿಂದ 45,000 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು, ಈವರೆಗೂ 48 ಡೆಲ್ಟಾ ಪ್ಲಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿದೆ.

ಡೆಲ್ಟಾ ಪ್ಲಸ್ ಬಗ್ಗೆ ಜಾಗತಿಕ ತಜ್ಞರ ಅಭಿಪ್ರಾಯವೇನು?

ಡೆಲ್ಟಾ ಪ್ಲಸ್ ಬಗ್ಗೆ ಜಾಗತಿಕ ತಜ್ಞರ ಅಭಿಪ್ರಾಯವೇನು?

ಭಾರತದಲ್ಲಿ ಮೊದಲ ಕಾಣಿಸಿಕೊಂಡ ಡೆಲ್ಟಾ ರೂಪಾಂತರ ವೈರಸ್ ಎನ್ನುವುದು ಇತರೆ ರೂಪಾಂತರ ತಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಡೆಲ್ಟಾ ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಬಹುಪಾಲು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಕೊವಿಡ್-19 ಎರಡು ಡೋಸ್ ಲಸಿಕೆಯನ್ನು ಪಡೆದ ವ್ಯಕ್ತಿಗಳಲ್ಲೂ ಡೆಲ್ಟಾ ವೈರಸ್ ಅಂಟಿಕೊಳ್ಳುವುದರ ಜೊತೆಗೆ ಅವರ ಮೂಲಕ ಬೇರೆಯವರಿಗೂ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ.

"ಜಗತ್ತಿನ ಎದುರಿಗೆ ನಿಂತಿರುವ ದೊಡ್ಡ ಅಪಾಯವೆಂದರೆ ಅದು ಡೆಲ್ಟಾ ರೂಪಾಂತರ ವೈರಸ್," ಎಂದು ಬ್ರಿಟನ್ ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ. ಡೆಲ್ಟಾ ವೈರಸ್ ಎನ್ನುವುದು ಇತರೆ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡಬಲ್ಲ ಶಕ್ತಿಶಾಲಿ ಹಾಗೂ ಅಪಾಯಕಾರಿ ವೈರಸ್ ಎಂದಿದ್ದಾರೆ. ನಿರಂತರವಾಗಿ ಇರುವ ರೂಪಾಂತರ ಪ್ರಕ್ರಿಯೆಯು ಹಲವು ರೀತಿಯ ಅಪಾಯವನ್ನು ತಂದೊಡ್ಡುತ್ತವೆ. ಒಂದೊಂದು ಬಾರಿ ಮೂಲ ರೋಗಾಣುವಿಗಿಂತ ರೂಪಾಂತರ ತಳಿಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ.

ಕೊವಿಡ್-19 ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಅಪಾಯ

ಕೊವಿಡ್-19 ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಅಪಾಯ

* "2019ರಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಮೂಲ ರೋಗಾಣುವಿಗಿಂತಲೂ ಡೆಲ್ಟಾ ರೂಪಾಂತರ ವೈರಸ್ 1000 ಪಟ್ಟು ಅಪಾಯಕಾರಿ ಆಗಿರುತ್ತದೆ. ಮೂಲ ಸೋಂಕಿತನಿಗೆ ಹೋಲಿಸಿದರೆ ಡೆಲ್ಟಾ ಸೋಂಕಿತರ ಮೂಗಿನಲ್ಲಿ ರೋಗಾಣುವಿನ ಸಂಖ್ಯೆ 1000 ಪಾಲು ಹೆಚ್ಚಾಗಿರುವುದು ಕಂಡು ಬಂದಿದೆ. ರೋಗಾಣುವಿನ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅವುಗಳ ಹರಡುವಿಕೆ ಪ್ರಮಾಣವು ಸರ್ವೇ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ," ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ.

* "ಯುನೈಟೆಡ್ ಕಿಂಗ್ ಡಮ್ ನಲ್ಲಿ ಮೊದಲು ಪತ್ತೆಯಾದ ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಶೇ.50ರಷ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಸ್ಯಾನ್ ಡಿಯಾಗೋದಲ್ಲಿ ಲಾ ಜೊಲ್ಲಾ ಇನ್ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿಯ ಸೂಕ್ಷ್ಮರೋಗಾಣು ಶಾಸ್ತ್ರಜ್ಞ ಶೇನ್ ಕ್ರಾಟಿ ಹೇಳಿದ್ದಾರೆ. ಇತರೆ ಎಲ್ಲ ರೂಪಾಂತರ ತಳಿಗಳಿಗಿಂತಲೂ ಡೆಲ್ಟಾ ಹೆಚ್ಚು ಪರಿಣಾಮಕಾರಿ ಆಗಿ ಹರಡುತ್ತದೆ ಎಂದಿದ್ದಾರೆ.

* ಡೆಲ್ಟಾ ರೂಪಾಂತರವು ಕಡಿಮೆ ತಾಪದ ಅವಧಿ ಮತ್ತು ಹೆಚ್ಚು ಸೋಂಕು ಹರಡುವಿಕೆ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದಲೇ ಈ ರೂಪಾಂತರವು ಲಸಿಕೆಗಳಿಗೂ ದೊಡ್ಡ ಸವಾಲಾಗಿದ್ದು, ಲಸಿಕೆ ಹಾಕಿಸಿಕೊಂಡವರೂ ಕೂಡ ಜಾಗೃತರಾಗಿರಬೇಕು. ಇದು ಬಹಳ ಕಷ್ಟಸಾಧ್ಯವಾದ ಸಂಗತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಲಸಿಕೆ ಪಡೆದವರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರೂಪಾಂತರ ವೈರಸ್ ಸೋಂಕಿನ ಪ್ರಮಾಣವು ತೀರಾ ವಿರಳವಾಗಿದೆ ಎನ್ನುವಂತಾ ಹಂತದಲ್ಲಿ ಮಾತ್ರ ನಾವು ನಿರ್ಬಂಧಗಳನ್ನು ಸಡಿಲಗೊಳಿಸಬೇಕಿದೆ," ಎಂದು ಕ್ಯಾಲಿಪೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕಿಪ್ಪಸ್ ರಿಸರ್ಚ್ ಟ್ರಾನ್ಸ್ ಲೇಷನಲ್ ಇನ್ಸ್ ಟಿಟ್ಯೂಟ್ ನಿರ್ದೇಶಕ ಹಾಗೂ ಜೆನೋಮಿಕ್ಸ್ ತಜ್ಞ ಎರಿಕ್ ತೊಪೊಲ್ ಹೇಳಿದ್ದಾರೆ.

ದೇಶದಲ್ಲಿ ಡೆಲ್ಟಾ ಪ್ಲಸ್ ಲಕ್ಷಣಗಳ ಬಗ್ಗೆ ತಿಳಿಯೋಣ

ದೇಶದಲ್ಲಿ ಡೆಲ್ಟಾ ಪ್ಲಸ್ ಲಕ್ಷಣಗಳ ಬಗ್ಗೆ ತಿಳಿಯೋಣ

ಡೆಲ್ಟಾ ತಳಿಯ ಡೆಲ್ಟಾ ಪ್ಲಸ್ ಸೋಂಕುಗಳು ಡೆಲ್ಟಾ ರೂಪಾಂತರ ಮತ್ತು ಬೀಟಾ ರೂಪಾಂತರದ ರೋಗಲಕ್ಷಣಗಳನ್ನು ಹೊಂದಿರುತ್ತದೆ ಎಂದು ಭಾರತದ ಉನ್ನತ ಸೂಕ್ಷ್ಣಾಣು ರೋಗಶಾಸ್ತ್ರಜ್ಞರು ಹೇಳಿದ್ದಾರೆ. ಇದರ ಜೊತೆ ಡೆಲ್ಟಾ ಪ್ಲಸ್ ರೂಪಾಂತರದ ಪ್ರಮುಖ ಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರದ ಪ್ರಮುಖ ಲಕ್ಷಣಗಳು:

* ಕೆಮ್ಮು

* ಅತಿಸಾರ

* ಜ್ವರ

* ಎದೆ ನೋವು

* ಉಸಿರಾಟದ ತೊಂದರೆ

* ತಲೆನೋವು

* ಚರ್ಮದ ದದ್ದು,

* ಬೆರಳುಗಳು ಮತ್ತು ಕಾಲ್ಬೆರಳುಗಳ ಬಣ್ಣ ಬದಲಾವಣೆ,

* ಹೊಟ್ಟೆ ನೋವು,

* ವಾಕರಿಕೆ ಮತ್ತು ಹಸಿವಿನ ಆಗದಿರುವುದು ರೋಗದ ಪ್ರಮುಖ ಲಕ್ಷಣ

ದೇಶದಲ್ಲಿ ಕೊವಿಡ್-19 ಸೋಂಕಿನ ಪರಿಸ್ಥಿತಿ ಹೇಗಿದೆ?

ದೇಶದಲ್ಲಿ ಕೊವಿಡ್-19 ಸೋಂಕಿನ ಪರಿಸ್ಥಿತಿ ಹೇಗಿದೆ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ತತ್ತರಿಸಿದ ಭಾರತದಲ್ಲಿ ಎರಡನೇ ಅಲೆ ಮುಗಿಯಿತೋ ಇಲ್ಲವೋ ಎನ್ನುವುದು ಸ್ಪಷ್ಟವಾಗುವುದರ ಮೊದಲೇ ಮೂರನೇ ಅಲೆಯ ಆತಂಕ ಸೃಷ್ಟಿಯಾಗಿದೆ. ಪ್ರತಿನಿತ್ಯ ಸೋಂಕಿತ ಪ್ರಕರಣಗಳ ಸಂಖ್ಯೆ 40,000 ಆಸುಪಾಸಿನಲ್ಲಿ ವರದಿಯಾಗುತ್ತಿವೆ. ಕಳೆದ ಒಂದೇ ದಿನ 38,667 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 24 ಗಂಟೆಗಳಲ್ಲಿ 35,743 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 478 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,30,732ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,21,56,493ಕ್ಕೆ ಏರಿಕೆಯಾಗಿದೆ. ಈವರೆಗೂ 3,13,38,088 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 3,87,673 ಸಕ್ರಿಯ ಪ್ರಕರಣಗಳಿವೆ.

ಯಾವ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ?

ಯಾವ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ?

ಕೊರೊನಾವೈರಸ್ ವಿರುದ್ಧ ರಕ್ಷಣೆ ಪಡೆದುಕೊಳ್ಳಲು ಕೊವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್-ವಿ ಹಾಗೂ ಮಾಡರ್ನಾ ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಆದರೆ ರೂಪಾಂತರ ತಳಿಗಳ ವಿರುದ್ಧ ಯಾವ ಲಸಿಕೆಯು ಹೆಚ್ಚು ಪರಿಣಾಮಕಾರಿ ಎಂಬುದನ್ನು ಇನ್ನೂ ಸಂಶೋಧಿಸಲಾಗುತ್ತಿದೆ. ಡೆಲ್ಟಾ ರೂಪಾಂತರದ ವಿರುದ್ಧ ಕೊವಿಶೀಲ್ಡ್ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದೆ. ಆದರೆ ಡೆಲ್ಟಾ ಪ್ಲಸ್ ವಿರುದ್ಧ ಯಾವ ಲಸಿಕೆ ಸೂಕ್ತ ಎಂಬುದು ಇನ್ನೂ ದೃಢವಾಗಿಲ್ಲ. ಇನ್ನೊಂದು ದಿಕ್ಕಿನಲ್ಲಿ ವಿದೇಶಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದಾಗ ಲಸಿಕೆ ಪಡೆದವರು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ.

ಕೊವಿಡ್-19 ಲಸಿಕೆ ಹಾಕಿಸಿಕೊಂಡರೂ ಅಪಾಯ

ಕೊವಿಡ್-19 ಲಸಿಕೆ ಹಾಕಿಸಿಕೊಂಡರೂ ಅಪಾಯ

ಕೊರೊನಾವೈರಸ್ ಲಸಿಕೆಯೂ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲ ಅಸ್ತ್ರವಾಗಿದೆ. ಹಾಗೆಂದ ಮಾತ್ರಕ್ಕೆ ಶಿಸ್ತು ಪಾಲನೆಯಲ್ಲಿ ದೋಷವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಲಸಿಕೆ ಹಾಕಿಸಿಕೊಂಡ ಜನರು ಸಾಮಾಜಿಕ ಅಂತರವನ್ನು ತೊರೆದು, ಮಾಸ್ಕ್ ಧರಿಸದೇ ಓಡಾಡಿದರೆ ಅಪಾಯ ಅವರಿಗಷ್ಟೇ ಅಲ್ಲದೇ ಇತರರಿಗೂ ಹೆಚ್ಚಾಗುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

* ಬ್ರಿಟನ್: ಕೊರೊನಾವೈರಸ್ ಸೋಂಕು ತಗುಲಿಕೆಯಿಂದ ಆಸ್ಪತ್ರೆಗೆ ದಾಖಲಾದ 3692 ಜನರಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆಯಾಗಿದೆ. ಹೀಗೆ ಸೋಂಕು ಅಂಟಿಕೊಂಡವರಲ್ಲಿ ಶೇ.58.30ರಷ್ಟು ಜನರು ಲಸಿಕೆ ಪಡೆದುಕೊಂಡಿಲ್ಲ, ಶೇ.22.80ರಷ್ಟು ಜನರು ಲಸಿಕೆ ಹಾಕಿಸಿಕೊಂಡ ಹೊರತಾಗಿದೂ ಸೋಂಕು ತಗುಲಿದೆ ಎಂದು ಇಂಗ್ಲೆಂಡ್ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

* ಸಿಂಗಾಪುರ: ಸಿಂಗಾಪುರದಲ್ಲಿ ಡೆಲ್ಟಾ ವೈರಸ್ ಅತ್ಯಂತ ಸಾಮಾನ್ಯ ರೂಪಾಂತರವಾಗಿದೆ. ಕೊರೊನಾವೈರಸ್ ಪ್ರಕರಣಗಳಲ್ಲಿ ಮುಕ್ಕಾಲು ಭಾಗ ಲಸಿಕೆ ಹಾಕಿದ ವ್ಯಕ್ತಿಗಳೇ ಇದ್ದಾರೆ. ಆದರೆ ಯಾರೂ ತೀವ್ರ ಅನಾರೋಗ್ಯಕ್ಕೆ ಒಳಗಾಗಲಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

* ಇಸ್ರೇಲ್: ಪ್ರಸ್ತುತ ಕೊರೊನಾವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಜನರಲ್ಲಿ ಶೇಕಡಾ 60ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡವರೇ ಇದ್ದಾರೆ. ಈ ಪೈಕಿ ಹೆಚ್ಚಿನವರು 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

* ಯುನೈಟೆಡ್ ಸ್ಟೇಟ್ಸ್: ಜಗತ್ತಿನಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಪ್ರಕರಣಗಳನ್ನು ವರದಿ ಮಾಡಿರುವ ರಾಷ್ಟ್ರದಲ್ಲೂ ಡೆಲ್ಟಾ ರೂಪಾಂತರದಿಂದ ಅಪಾಯ ಹೆಚ್ಚಾಗಿದೆ. ಇತ್ತೀಚಿನ ಹೊಸ ಪ್ರಕರಣಗಳಲ್ಲಿ ಶೇ.83ರಷ್ಟು ಡೆಲ್ಟಾ ರೂಪಾಂತರ ವೈರಸ್ ಪತ್ತೆಯಾಗಿದ್ದು, ಅದರಲ್ಲಿ ಶೇ.97ರಷ್ಟು ಜನರು ಲಸಿಕೆ ಪಡೆದುಕೊಳ್ಳದವರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದಕ್ಕೆ ಕಡ್ಡಾಯಗೊಳಿಸಿದೆ.

ದೇಶದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಂಡವರು?

ದೇಶದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಂಡವರು?

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 210 ದಿನಗಳಲ್ಲಿ 53 ಕೋಟಿಗೂ ಅಧಿಕ ಮಂದಿಗೆ ಲಸಿಕೆ ವಿತರಿಸಲಾಗಿದೆ. ಶುಕ್ರ ವಾರ ರಾತ್ರಿ 7 ಗಂಟೆ ವೇಳೆಗೆ 55,91,675 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಈವರೆಗೂ 53,53,99,783 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಒಂದೇ ದಿನ 43,63,276 ಫಲಾನುಭವಿಗಳಿಗೆ ಮೊದಲ ಡೋಸ್, 12,28,399 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

2021ರ ಆಗಸ್ಟ್ 13ರ ಅಂಕಿ-ಅಂಶಗಳ ಪ್ರಕಾರ, 55,01,93,040 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:

* ಪೂರೈಕೆಯಾದ ಲಸಿಕೆ ಪ್ರಮಾಣ - 55,01,93,040

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 59,16,920

* ಬಳಕೆ ಆಗಿರುವ ಲಸಿಕೆ ಪ್ರಮಾಣ - 52,59,93,669

* ಕೊವಿಡ್-19 ಲಸಿಕೆಯ ಲಭ್ಯತೆ - 2,82,57,130

English summary
Delta or Delta Plus, Which Virus is Deadlier?, Experts have said Delta Plus does not appear to be more infectious than Delta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X