ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breakthrough Infection; ಡೆಲ್ಟಾ, ಆಲ್ಫಾ ರೂಪಾಂತರ ಪ್ರಮುಖ ಕಾರಣ...

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಆಗಸ್ಟ್‌ 23: ಇದುವರೆಗೂ ದೇಶದಲ್ಲಿ ದಾಖಲಾಗಿರುವ ಪ್ರಗತಿ ಸೋಂಕಿನ ಪ್ರಕರಣಗಳಿಗೆ (Breakthrough infection) ಡೆಲ್ಟಾ ಹಾಗೂ ಆಲ್ಫಾ ರೂಪಾಂತರಗಳು ಕಾರಣವಾಗಿವೆ. ಇವುಗಳ ಹೊರತಾಗಿ ಬೇರೆ ಯಾವುದೇ ರೂಪಾಂತರ ಪತ್ತೆಯಾಗಿಲ್ಲ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

'ದೇಶದಲ್ಲಿ ದಾಖಲಾಗುತ್ತಿರುವ ಮರು ಸೋಂಕು, ಪ್ರಗತಿ ಸೋಂಕಿನ ಪ್ರಕರಣಗಳಿಗೆ ಡೆಲ್ಟಾ, ಆಲ್ಫಾ ರೂಪಾಂತರಗಳೇ ಕಾರಣವಾಗಿವೆ ಹೊರತು ಬೇರೆ ರೂಪಾಂತರವಿಲ್ಲ ಎಂಬುದು ಜೆನೋಮ್ ಸೀಕ್ವೆನ್ಸಿಂಗ್‌ನಲ್ಲಿ ಕಂಡುಬಂದಿದೆ' ಎಂದು ಹೇಳಿದ್ದಾರೆ.

ಸೋಂಕಿನ ವಿರುದ್ಧ ಹೋರಾಡಲು ಸಂಪೂರ್ಣ ಪ್ರಮಾಣದ ಕೊರೊನಾ ಲಸಿಕೆ ಪಡೆದುಕೊಂಡ ನಂತರವೂ ಮತ್ತೆ ಸೋಂಕು ಕಾಣಿಸಿಕೊಂಡರೆ ಅದನ್ನು breakthrough infection ಎಂದು ಕರೆಯಲಾಗುತ್ತದೆ.

Delta, Alpha Variants Behind Breakthrough Covid Cases In India

ಲಸಿಕೆಯ ಪರಿಣಾಮಕಾರಿ ಅಂಶಗಳನ್ನು ತಪ್ಪಿಸಿ ಸೋಂಕು ತಗುಲುವ ಪ್ರಮಾಣ ಹೆಚ್ಚಾಗಿದೆ. ಕೊರೊನಾ ಸೋಂಕಿನ ಜೆನೋಮ್ ಸೀಕ್ವೆನ್ಸಿಂಗ್‌ನಲ್ಲಿ (ವಂಶವಾಹಿ ಪತ್ತೆ ಪರೀಕ್ಷೆ) ತೊಡಗಿಕೊಂಡಿರುವ INSACOG, ದೇಶದಲ್ಲಿ ಪ್ರಗತಿ ಸೋಂಕಿನ ಪ್ರಕರಣಗಳು ಹೆಚ್ಚಿನ ಮಟ್ಟದಲ್ಲಿ ದಾಖಲಾಗುತ್ತಿರುವ ಕುರಿತು ಕಳೆದ ವಾರ ಉಲ್ಲೇಖಿಸಿದೆ.

ಇದಾಗ್ಯೂ ಸೋಂಕು ಗಂಭೀರ ಸ್ವರೂಪ ಪಡೆಯುವುದನ್ನು ಹಾಗೂ ಸೋಂಕಿನಿಂದ ಸಂಭವಿಸುವ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಕೊರೊನಾ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭರವಸೆ ನೀಡಿದೆ.

ಲಸಿಕೆಯೊಂದೇ ಸೋಂಕಿನ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಿಲ್ಲ; ವೈದ್ಯಕೀಯ ವಿಶ್ಲೇಷಣೆಲಸಿಕೆಯೊಂದೇ ಸೋಂಕಿನ ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಿಲ್ಲ; ವೈದ್ಯಕೀಯ ವಿಶ್ಲೇಷಣೆ

ಈ ಎಲ್ಲಾ ಪ್ರಗತಿ ಸೋಂಕಿಗೆ ಡೆಲ್ಟಾ ರೂಪಾಂತರವೇ ಕಾರಣ ಎಂಬುದು ಜೆನೋಮ್ ಸೀಕ್ವೆನ್ಸಿಂಗ್‌ನಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದೆ.

ದೇಶದಲ್ಲಿ ಹೊಸ ಪ್ರಕರಣಗಳ ಪತ್ತೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. 30,230 ಸೋಂಕಿನ ಪ್ರಕರಣಗಳ ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ 20,324 ಪ್ರಕರಣಗಳಿಗೆ ಡೆಲ್ಟಾ ರೂಪಾಂತರ ಕಾರಣವಾಗಿದೆ ಎಂದು ಮಾಹಿತಿ ನೀಡಿದೆ.

ಬರೀ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರಗಳ ಸಂಖ್ಯೆ ಹೆಚ್ಚಾಗಿದ್ದು, ಲಸಿಕೆ ಪಡೆದುಕೊಂಡ ನಂತರವೂ ಸೋಂಕು ತಾಗುತ್ತಿದೆ. ಭಾರತದಲ್ಲಿ ಕೇರಳ ರಾಜ್ಯದಲ್ಲಿ ಇಂಥ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

Delta, Alpha Variants Behind Breakthrough Covid Cases In India

ಮೇ ತಿಂಗಳಿನಿಂದಲೂ ಅಮೆರಿಕದಲ್ಲಿ ಪ್ರಗತಿ ಸೋಂಕಿನ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಅಮೆರಿಕದಲ್ಲಿ ಈ ಕಾರಣಕ್ಕೆ ಕೊರೊನಾ ಲಸಿಕೆಯ ಬೂಸ್ಟರ್‌ ಡೋಸ್‌ಗಳನ್ನು ನೀಡುವ ತಯಾರಿಯಲ್ಲಿದೆ.

ದೇಶದಲ್ಲಿ ಪ್ರಗತಿ ಸೋಂಕು ಹೆಚ್ಚಿನ ಮಟ್ಟದಲ್ಲಿ ಹಲವು ಭಾಗಗಳಲ್ಲಿ ವರದಿಯಾಗುತ್ತಿದ್ದು, ಲಸಿಕೆಯೊಂದೇ ಸೋಂಕಿನ ವಿರುದ್ಧ 100% ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಈಚೆಗೆ ವೈದ್ಯಕೀಯ ವಿಶ್ಲೇಷಣೆಯೊಂದು ತಿಳಿಸಿದೆ.

ತಗ್ಗಿದ ಸೋಂಕಿನ 'R' ದರ; ದೇಶದಲ್ಲಿ ಕೊರೊನಾ ಕಡಿಮೆಯಾಗುವ ಸೂಚನೆತಗ್ಗಿದ ಸೋಂಕಿನ 'R' ದರ; ದೇಶದಲ್ಲಿ ಕೊರೊನಾ ಕಡಿಮೆಯಾಗುವ ಸೂಚನೆ

ಜೀವಕೋಶಕ್ಕೆ ದಾಳಿ ಮಾಡಲು, ಹಾಗೆಯೇ ಪುನರುತ್ಪತ್ತಿಯಾಗುವಲ್ಲಿ ಡೆಲ್ಟಾ ಸೋಂಕು ಅತಿ ಸಮರ್ಥವಾಗಿದೆ ಎಂದು ಕೇರಳ ಐಎಂಎ ಸಂಶೋಧನಾ ಕೋಶದ ಉಪಾಧ್ಯಕ್ಷ ಡಾ. ರಾಜೀವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಪ್ರಗತಿ ಸೋಂಕು ಮೂಗು ಅಥವಾ ಗಂಟಲಿನಲ್ಲಿ ಮಾತ್ರ ಉಳಿಯುತ್ತಿದೆ. ಶ್ವಾಸಕೋಶದವರೆಗೂ ತಲುಪುತ್ತಿಲ್ಲ. ಸಂಪೂರ್ಣವಾಗಿ ಲಸಿಕೆ ಹಾಕಿದ ವಯಸ್ಕರಲ್ಲಿ ಗಂಭೀರವಾದ ಸೋಂಕು ಅಪರೂಪ ಎಂದು ಹೇಳಿದ್ದಾರೆ.

ಹೆಚ್ಚಿನ ಲಸಿಕಾ ವ್ಯಾಪ್ತಿ ಹಾಗೂ ಸೋಂಕಿನ ವಿರುದ್ಧ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ರಾಜ್ಯಗಳಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಗತಿಶೀಲ ಸೋಂಕುಗಳನ್ನು ಹೊಂದುವುದು ಸಹಜ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಇದಾಗ್ಯೂ ಲಸಿಕೆಗಳು ತೀವ್ರ ರೋಗವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿವೆ. ದೇಶದಲ್ಲಿ ಮರಣ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸಿವೆ ಎಂದು ತಜ್ಞರು ಒಟ್ಟಾರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
A genomic sequencing of breakthrough infections has found the highly transmissible Delta variant as the cause
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X