• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿ ಟು ಲಂಡನ್: ಬಸ್ಸಿನಲ್ಲಿ 18 ದೇಶಗಳನ್ನು ಸುತ್ತುವ ಸುವರ್ಣಾವಕಾಶ

|

ನವದಹಲಿ, ಆಗಸ್ಟ್ 24: ಟ್ರಾವೆಲ್‌ ಕಂಪನಿಯೊಂದು ದೆಹಲಿಯಿಂದ ಲಂಡನ್ ವರೆಗೆ 18 ದೇಶಗಳನ್ನು ಸುತ್ತುವ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಸಾಮಾನ್ಯವಾಗಿ ಎಲ್ಲರೂ ವಿಮಾನದಲ್ಲಿ ಒಂದು ಅಥವಾ ಎರಡು ದಿನಗಳಲ್ಲಿ ಲಂಡನ್‌ಗೆ ಹಾರಿಬಿಡುತ್ತಾರೆ. ಆದರೆ ಈ ಬಸ್‌ನಲ್ಲಿ ಕೇವಲ ದೆಹಲಿಯಿಂದ ಲಂಡನ್ ಮಾತ್ರವಲ್ಲದೆ ಮಧ್ಯದಲ್ಲಿ 18 ದೇಶಗಳನ್ನು ನೋಡಬಹುದಾಗಿದೆ.

ವಿಮಾನ ಪ್ರಯಾಣಿಕರಿಗೆ ಕಹಿ ಸುದ್ದಿ: ಸೆ. 1ರಿಂದ ಟಿಕೆಟ್ ದರ ಏರಿಕೆ

ಈ ಬಸ್ 2021ಕ್ಕೆ ರಸ್ತೆಗಿಳಿಯಲಿದೆ. ಮಯನ್ಮಾರ್, ಥೈಲೆಂಡ್, ಚೀನಾ, ಜರ್ಮನಿ, ಬೆಲ್ಜಿಯಮ್ ಸೇರಿ ಒಟ್ಟು 18 ದೇಶಗಳನ್ನು ನೋಡಬಹುದು.

70 ದಿನಗಳಲ್ಲಿ 20 ಸಾವಿರ ಕಿ.ಮೀ ದೂರವನ್ನು ಕ್ರಮಿಸಲಿದೆ ಎಂದು ಕಂಪನಿ ತಿಳಿಸಿದ್ದು, ಪ್ರತಿಯೊಬ್ಬರಿಗೂ 15 ಲಕ್ಷ ರೂ ವೆಚ್ಚ ತಗುಲಲಿದೆ. ಒಟ್ಟು 20 ಮಂದಿ ಮಾತ್ರ ಪ್ರಯಾಣಿಸಬಹುದಾಗಿದೆ. ಬಸ್‌ನಲ್ಲಿ ಉಚಿತ ವೈಫೈ ಸೌಲಭ್ಯವಿರುತ್ತದೆ.

ಎಲ್ಲಾ ರಾತ್ರಿ ಫೋರ್ ಅಥವಾ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ತಂಗಲು ಅವಕಾಶಮಾಡಿಕೊಡಲಾಗುತ್ತದೆ. ವೀಸಾ ವೆಚ್ಚ, ಹೋಟೆಲ್ ವೆಚ್ಚ, ನೋಡುವ ವೆಚ್ಚ, ಊಟ, ತಿಂಡಿ ಖರ್ಚು ಎಲ್ಲವೂ ಈ 15 ಲಕ್ಷದಲ್ಲಿ ಅಡಕವಾಗಿರುತ್ತದೆ.

English summary
The first hop-on, hop-off bus service from India to England is set to depart Delhi in May 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X