ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ನವದೆಹಲಿಯಲ್ಲಿ ಮತ್ತೆ ಮೂವರಿಗೆ ಮಂಕಿಪಾಕ್ಸ್ ಸೋಂಕು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ನವದೆಹಲಿಯಲ್ಲಿ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ರಾಷ್ಟ್ರ ರಾಜಧಾನಲ್ಲಿ ಮತ್ತೆ ಮೂವರಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

ನವದೆಹಲಿಯಲ್ಲಿ ಈಗಾಗಲೇ ಐವರು ಮಂಕಿಪಾಕ್ಸ್ ರೋಗಿಗಳಿಗೆ ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 12ಕ್ಕೆ ಏರಿಕೆಯಾಗಿದೆ.

Breaking: ನವದೆಹಲಿಯಲ್ಲಿ 9ನೇ ಮಂಕಿಪಾಕ್ಸ್ ಕೇಸ್; ದೇಶದಲ್ಲಿ ಒಟ್ಟು 14 ಪ್ರಕರಣBreaking: ನವದೆಹಲಿಯಲ್ಲಿ 9ನೇ ಮಂಕಿಪಾಕ್ಸ್ ಕೇಸ್; ದೇಶದಲ್ಲಿ ಒಟ್ಟು 14 ಪ್ರಕರಣ

ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ 30 ವರ್ಷದ ಮಹಿಳೆಯೊಬ್ಬರಿಗೆ ವೈರಸ್‌ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿತ್ತು. ಅದು ದೆಹಲಿಯಲ್ಲಿ ಪತ್ತೆಯಾದ ಎಂಟನೇ ಹಾಗೂ ಭಾರತದಲ್ಲಿನ 13ನೇ ಮಂಕಿಪಾಕ್ಸ್ ಪ್ರಕರಣವಾಗಿತ್ತು. ಈ ಮಹಿಳೆ ನೈಜೀರಿಯಾ ಪ್ರಜೆಯಾಗಿದ್ದು, ಅವರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು.

Delhi reports Three New Monkeypox Virus Cases; total number rises to 12

ಮಂಕಿಪಾಕ್ಸ್ ರೋಗದ ಕುರಿತು ತಿಳಿಯಿರಿ:
ಮಂಕಿಪಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬುಗೆ ಕಾರಣವಾಗುವ ವೈರಸ್‌ಗಳ ಒಂದೇ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ, ಆಸ್ಟ್ರೇಲಿಯಾ, ಯುಕೆ ಮತ್ತು ಯುಎಸ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಹೆಚ್ಚಾಗುತ್ತಿದೆ.

ಮಂಕಿಪಾಕ್ಸ್ ಸಿಡುಬಿಗೆ ಸಂಬಂಧಿಸಿದ ಒಂದು ಪಾಕ್ಸ್‌ವೈರಸ್ ಆಗಿದ್ದು, ಸಾಮಾನ್ಯವಾಗಿ ಮೊಡವೆ ಅಥವಾ ಗುಳ್ಳೆಗಳಂತಹ ಗಾಯಗಳನ್ನು ಉಂಟು ಮಾಡುತ್ತದೆ. ಇದರ ಜೊತೆ ಜ್ವರ, ತಲೆನೋವು, ಸ್ನಾಯು ನೋವು, ಶೀತ ಮತ್ತು ಉಸಿರಾಟ ಸಮಸ್ಯೆ ತರಹದ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ. ವೈರಸ್ ನಿಕಟ ಮತ್ತು ಆಗಾಗ್ಗೆ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದರಿಂದ ಯಾರಿಗಾದರೂ ಸೋಂಕು ಹರಡಬಹುದು. ಸೋಂಕಿತ ಪ್ರಾಣಿಗಳಿಂದ ಜನರು ಮಂಕಿಪಾಕ್ಸ್ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.

English summary
Delhi reports Three New Monkeypox Virus Cases; total number rises to 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X