ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಂದ ಡಿ. ಕೆ. ಸುರೇಶ್ ಮ್ಯಾನ್ ಹ್ಯಾಂಡ್ಲಿಂಗ್‌: ನಡೆದಿದ್ದೇನು?

|
Google Oneindia Kannada News

ನವದೆಹಲಿ, ಜೂನ್ 14: ಸೋನಿಯಾ ಗಾಂಧಿ ಕುಟುಂಬದ ಮೇಲೆ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ಎರಡನೇ ದಿನವೂ ಮುಂದುವರಿದಿದೆ. ಇತ್ತ, ಪ್ರತಿಭಟನೆ ನಡೆಸಲು ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಎಐಸಿಸಿ ಕಚೇರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್, ಹಿರಿಯ ನಾಯಕ ಎಚ್. ಕೆ. ಪಾಟೀಲ್ ಮತ್ತು ದಿನೇಶ್ ಗುಂಡೂರಾವ್ ಹೋಗುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಆ ವೇಳೆ, ಕಾಂಗ್ರೆಸ್ ಮುಖಂಡರು ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆದಿದೆ.

ಕಾಂಗ್ರೆಸ್ ಪ್ರತಿಭಟನೆ: ಚಿದಂಬರಂ ಪಕ್ಕೆಲುಬು ಮುರಿತ, ಇತರ ನಾಯಕರಿಗೆ ಗಾಯ- 459 ಬಂಧನಕಾಂಗ್ರೆಸ್ ಪ್ರತಿಭಟನೆ: ಚಿದಂಬರಂ ಪಕ್ಕೆಲುಬು ಮುರಿತ, ಇತರ ನಾಯಕರಿಗೆ ಗಾಯ- 459 ಬಂಧನ

ಸೋಮವಾರ (ಜೂನ್ 13) ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣವರ್ಗಾವಣೆ ವಿಚಾರದಲ್ಲಿ ಇಡಿ ಅಧಿಕಾರಿಗಳು ಸುಮಾರು 10 ತಾಸು ರಾಹುಲ್ ಗಾಂಧಿಯವರ ವಿಚಾರಣೆಯನ್ನು ನಡೆಸಿದ್ದರು. ಕಾಂಗ್ರೆಸ್ ಕಾರ್ಯಕರ್ತರ ಭಾರೀ ಪ್ರತಿಭಟನೆಯ ನಡುವೆ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರಾ ಜೊತೆಗೆ ರಾಹುಲ್ ಇಡಿ ಕಚೇರಿಗೆ ಆಗಮಿಸಿದ್ದರು.

ಮಂಗಳವಾರ ಬೆಳಗ್ಗೆ 10.40ಕ್ಕೆ ರಾಹುಲ್ ಮತ್ತು ಪ್ರಿಯಾಂಕ, ಮೊದಲು ಎಐಸಿಸಿ ಕಚೇರಿಗೆ ತೆರಳಿ ನಂತರ ಇಡಿ ಕಚೇರಿಗೆ ಬಂದರು. ಆ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಬ್ಯಾರಿಕೇಡ್ ದಾಟಿ ಬಂದಿದ್ದಕ್ಕಾಗಿ ಪೊಲೀಸರು ಬಂಧಿಸಿದರು.

 ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ವಿಚಾರಣೆಯನ್ನು ಆರಂಭಿಸಿದ್ದಾರೆ

ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ವಿಚಾರಣೆಯನ್ನು ಆರಂಭಿಸಿದ್ದಾರೆ

ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಇಡಿ ಆಫೀಸಿನ ಹೊರಗಡೆ ಬಿಗುವಿನ ವಾತಾವರಣದ ನಡುವೆ ಅಧಿಕಾರಿಗಳು ರಾಹುಲ್ ಗಾಂಧಿ ವಿಚಾರಣೆಯನ್ನು ಆರಂಭಿಸಿದ್ದಾರೆ. ಹೊರಗಡೆ ಹಿರಿಯ ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ದ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಬಂಧಿತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ದೆಹಲಿಯ ಭದ್ರಾಪುರ ಮತ್ತು ನರೇಲಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

 ಎಚ್. ಕೆ. ಪಾಟೀಲ್, ಡಿ. ಕೆ. ಸುರೇಶ್ ಮತ್ತು ದಿನೇಶ್ ಗುಂಡೂರಾವ್

ಎಚ್. ಕೆ. ಪಾಟೀಲ್, ಡಿ. ಕೆ. ಸುರೇಶ್ ಮತ್ತು ದಿನೇಶ್ ಗುಂಡೂರಾವ್

ಇದಕ್ಕೂ ಮುನ್ನ ಎಐಸಿಸಿ ಕಚೇರಿಗೆ ಇತರ ಕಾಂಗ್ರೆಸ್ ಮುಖಂಡರ ಜೊತೆಗೆ ಆಗಮಿಸುತ್ತಿದ್ದ ಎಚ್. ಕೆ. ಪಾಟೀಲ್, ಡಿ. ಕೆ. ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಪೊಲೀಸರು ತಡೆದಿದ್ದಾರೆ. ಯಾತಕ್ಕಾಗಿ ನಮ್ಮನ್ನು ತಡೆಯುತ್ತಿದ್ದೀರಾ? ಎಂದು ದಿನೇಶ್ ಗುಂಡೂರಾವ್ ಮತ್ತು ಸುರೇಶ್ ಪೊಲೀಸರ ಜೊತೆ ವಾಗ್ಯುದ್ದಕ್ಕೆ ಇಳಿದಿದ್ದಾರೆ. ಪೊಲೀಸರು ಕಾಂಗ್ರೆಸ್ ಮುಖಂಡರಿಗೆ ಮನವರಿಕೆ ಮಾಡುತ್ತಿದ್ದರೂ ಮಾತಿನ ಚಕಮಕಿ ಜೋರಾಗಿ ನಡೆಯುತ್ತಲೇ ಇತ್ತು.

 ನಾನೊಬ್ಬ ಸಂಸದ, ನನ್ನನ್ನೇ ತಳ್ಳುತ್ತೀರಾ - ಡಿ. ಕೆ. ಸುರೇಶ್ ಏರು ಧ್ವನಿ

ನಾನೊಬ್ಬ ಸಂಸದ, ನನ್ನನ್ನೇ ತಳ್ಳುತ್ತೀರಾ - ಡಿ. ಕೆ. ಸುರೇಶ್ ಏರು ಧ್ವನಿ

ಆ ವೇಳೆ ಪೊಲೀಸರು, ಸುರೇಶ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಹಿಂದಕ್ಕೆ ಹೋಗುವಂತೆ ಜೋರಾಗಿ ತಳ್ಳಿದ್ದಾರೆ. ನಾನೊಬ್ಬ ಸಂಸದ, ನನ್ನನ್ನೇ ತಳ್ಳುತ್ತೀರಾ ಎಂದು ಡಿ. ಕೆ. ಸುರೇಶ್ ಏರು ಧ್ವನಿಯಲ್ಲಿ ಪೊಲೀಸರತ್ತ ಹೋದಾಗ ಅವರನ್ನು ಎಚ್. ಕೆ. ಪಾಟೀಲ್ ತಡೆದಿದ್ದಾರೆ. ಇದಾದ ನಂತರ, ಮತ್ತೆ ಯಾಕೆ ನಮ್ಮನ್ನು ಅರೆಸ್ಟ್ ಮಾಡುತ್ತಿದ್ದೀರಾ, ನಾವೇನು ತಪ್ಪು ಮಾಡಿದ್ದೇವೆ ಎಂದು ಸುರೇಶ್ ಅವರು ಪೊಲೀಸರ ಜೊತೆಗೆ ಮಾತಿಗೆ ಇಳಿದಾಗ, ಅವರನ್ನು ಪೊಲೀಸರು ಬಲವಂತದಿಂದ ತಳ್ಳಿ ಪೊಲೀಸ್ ವ್ಯಾನಿನಲ್ಲಿ ಕೂರಿಸಿ, ನರೇನಾ ಠಾಣೆಗೆ ಕರೆದೊಯ್ದಿದ್ದಾರೆ.

 ಮ್ಯಾನ್ ಹ್ಯಾಂಡ್ಲಿಂಗ್‌ ಮಾಡಿದ್ದಾರೆ. ಸರ್ವಾಧಿಕಾರ ಇದು: ಸಿದ್ದರಾಮಯ್ಯ

ಮ್ಯಾನ್ ಹ್ಯಾಂಡ್ಲಿಂಗ್‌ ಮಾಡಿದ್ದಾರೆ. ಸರ್ವಾಧಿಕಾರ ಇದು: ಸಿದ್ದರಾಮಯ್ಯ

"ನಮ್ಮ ನಾಯಕರು ಎಐಸಿಸಿ ಕಚೇರಿಗೆ ಹೋಗುತ್ತಿದ್ದರು, ಅವರನ್ನು ಆರೆಸ್ಟ್ ಮಾಡಿದ್ದಾರೆ, ಮ್ಯಾನ್ ಹ್ಯಾಂಡ್ಲಿಂಗ್‌ ಮಾಡಿದ್ದಾರೆ. ಸರ್ವಾಧಿಕಾರ ಇದು, ಇದನ್ನ ನಾನು ಖಂಡಿಸುತ್ತೇನೆ, ಬಿಜೆಪಿಯವರು ಎಮರ್ಜೆನ್ಸಿ ಬಗ್ಗೆ ಮಾತನಾಡುತ್ತಾರೆ. ಇದೇನು ಪ್ರಜಾಪ್ರಭುತ್ವವೇ? ಇದೇನು ಸರ್ವಾಧಿಕಾರವೇ? ಪೊಲೀಸ್ ಅಧಿಕಾರವೇ? ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಅಧಿಕಾರದ ಮದ, ಅದಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

English summary
Delhi Police Arrested D K Suresh And Other Leaders, Congress Blames Man Handling. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X