ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಿಷನ್ 2022' ನೀತಿ ಬೋಧಿಸಿದ ಪ್ರಧಾನಿ ನರೇಂದ್ರ ಮೋದಿ

ಈ ಹಿಂದಿನ ಪಂಚವಾರ್ಷಿಕ ಯೋಜನೆ ಮಾರ್ಚ್ ಗೆ ಅಂತ್ಯವಾಗಿದ್ದು ಮೂರು ವರ್ಷಗಳ ತ್ರೈವಾರ್ಷಿಕ ಯೋಜನೆ ಈ ವರ್ಷದಿಂದ ಆರಂಭವಾಗಲಿದೆ. ಇದರ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.

By Sachhidananda Acharya
|
Google Oneindia Kannada News

ನವ ದೆಹಲಿ, ಏಪ್ರಿಲ್ 23: ನವದೆಹಲಿಯಲ್ಲಿ ಇಂದು ನಡೆದ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಷನ್ 2022 ನೀರಿ ಬೋಧಿಸಿದರು.

ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯಮಮತ್ರಿಗಳು ಭಾಗವಹಿಸಿದ್ದರು. ಈ ಸಂದರ್ಭ 2022ರ ಗುರಿಯನ್ನು ನಿರ್ಧರಿಸಿ ಎಂದು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಈ ಹಿಂದಿನ ಪಂಚವಾರ್ಷಿಕ ಯೋಜನೆ ಮಾರ್ಚ್ ಗೆ ಅಂತ್ಯವಾಗಿದ್ದು ಮೂರು ವರ್ಷಗಳ ತ್ರೈವಾರ್ಷಿಕ ಯೋಜನೆ ಈ ವರ್ಷದಿಂದ ಆರಂಭವಾಗಲಿದೆ. ಇದರ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ. ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಸಭೆಯಲ್ಲಿ ಇದರ ಯೋಜನೆಗಳನ್ನು ಮಂಡಿಸಲಿದ್ದು ನಂತರ ಚರ್ಚೆ ನಡೆಯಲಿದೆ.

Delhi: Narendra Modi chairs NITI Aayog's Governing Council meeting

ಇನ್ನು ನಗರಾಭಿವೃದ್ಧಿ, ರೈತರ ಸಮಸ್ಯೆಗಳ ಕುರಿತೂ ಇದೇ ಸಭೆಯಲ್ಲಿ ಚರ್ಚೆ ನಡೆಯಲಿದೆ. ನ್ಯಾಯಾಂಗದ ಸುಧಾರಣೆ, ಕಾನೂನು ಸುವ್ಯವಸ್ಥೆಯ ಕುರಿತು ಸಭೆಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು, ಪ್ರಧಾನಿ ಸಮಾಲೋಚನೆ ನಡೆಸಲಿದ್ದಾರೆ.

ಸಭೆಯಲ್ಲಿ ಇನ್ನೂ ಹಲವು ವಿಚಾರಗಳ ಕುರಿತು ಮಾತುಕತೆ ನಡೆಯಲಿದ್ದು ವಿವರಗಳು ಸಭೆಯ ನಂತರ ತಿಳಿದು ಬರಲಿವೆ.

English summary
Prime Minister Narendra Modi chairs NITI Aayog's Governing Council meeting held in New Delhi. Chief ministers of all the states were present in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X