20 ಎಎಪಿ ಶಾಸಕರ ಅನರ್ಹತೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

Subscribe to Oneindia Kannada

ನವದೆಹಲಿ, ಮಾರ್ಚ್ 23: ಲಾಭದಾಯಕ ಹುದ್ದೆ ಪ್ರಕರಣದಲ್ಲಿ ದೆಹಲಿಯ 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಲಾಭದಾಯಕ ಹುದ್ದೆ ಪ್ರಕರಣದ ಪುನರ್ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕ್ಷಮಾಪಣೆ ನಂ. 3: ಗಡ್ಕರಿ, ಸಿಬಲ್ ಕ್ಷಮೆ ಕೋರಿದ ಕೇಜ್ರಿವಾಲ್

ಚುನಾವಣಾ ಆಯೋಗ ಮೌಖಿಕ ವಿಚಾರಣಾ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಜನವರಿ 19ರ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

Delhi High Court sets aside disqualify of 20 AAP MLAs

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಪಿ ಶಾಸಕ ಸೌರಭ್ ಭಾರಧ್ವಜ್, "ತಮ್ಮ ವಾದವನ್ನು ಮಂಡಿಸಲು ಎಎಪಿ ಶಾಸಕರಿಗೆ ಅವಕಾಶ ನೀಡಲಾಗಿರಲಿಲ್ಲ. ಹೀಗಾಗಿ ನ್ಯಾಯಾಲಯ ಈಗ ಅವರಿಗೆ ಒಂದು ಅವಕಾಶ ನೀಡಿದೆ. ಚುನಾವಣಾ ಆಯೋಗ ಪುನಃ ಅರ್ಜಿಯ ವಿಚಾರಣೆ ನಡೆಸಲಿದೆ," ಎಂದಿದ್ದಾರೆ.

"ಈ ಪ್ರಕರಣ ಮತ್ತೆ ತೆರೆಯಲಿದೆ ಎಂದು ಕೋರ್ಟ್ ಹೇಳಿದೆ. ನಾನು ಕೇವಲ ಕಾನೂನಾತ್ಮಕ ವಿಷಯವನ್ನು ಎತ್ತಿದ್ದೆ. ಇದರಿಂದ ನನಗೆ ಹಿನ್ನಡೆ ಏನೂ ಇಲ್ಲ," ಎಂದು ಶಾಸಕರ ಸದಸ್ಯತ್ವ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ ಪ್ರಶಾಂತ್ ಪಟೇಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi High Court sets aside the Election Commission of India recommendations to disqualify the 20 AAP MLAs in connection to the office of profit case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ