ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಜಿ ನೆಟ್‌ವರ್ಕ್‌: ಜೂಹಿ ಅರ್ಜಿ ವಜಾ, 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

|
Google Oneindia Kannada News

ನವದೆಹಲಿ, ಜೂ. 04: 5 ಜಿ ನೆಟ್‌ವರ್ಕ್ ಮಾನವರು ಮತ್ತು ಪರಿಸರದ ಮೇಲೆ ಬೀರುವ ಪ್ರಭಾವದ ವಿರುದ್ದ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, 20 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ನಟಿ ಈ ಅರ್ಜಿಯನ್ನು ಬರೀ ಮಾಧ್ಯಮದಲ್ಲಿ ಪ್ರಚಾರಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಸಲ್ಲಿಸಿದ್ದಾರೆ ಎಂದು ಕೋರ್ಟ್ ಆರೋಪಿಸಿದೆ.

ದೇಶದಲ್ಲಿ 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವುದರ ವಿರುದ್ಧ ನಟಿ ಪರಿಸರವಾದಿ ಜೂಹಿ ಚಾವ್ಲಾ ಸೋಮವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ವಿಕಿರಣಗಳು ಮಾನವರು, ಪ್ರಾಣಿಗಳು, ಗಿಡ ಮರಗಳಿಗೆ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಪ್ರತಿಪಾದಿಸಿದ್ದರು.

ನಟಿ ಜೂಹಿಯ 5 ಜಿ ವಿರುದ್ದದ ಅರ್ಜಿ ವಿಚಾರಣೆ ವೇಳೆ ಕೇಳಿ ಬಂತು ಸಿನಿಮಾದ ಹಾಡುಗಳು! ನಟಿ ಜೂಹಿಯ 5 ಜಿ ವಿರುದ್ದದ ಅರ್ಜಿ ವಿಚಾರಣೆ ವೇಳೆ ಕೇಳಿ ಬಂತು ಸಿನಿಮಾದ ಹಾಡುಗಳು!

ಈ ಅರ್ಜಿ ವಿಚಾರಣೆಯನ್ನು ಜೂನ್‌ 2 ರ ಬುಧವಾರ ನಡೆಸಿದ್ದ ಹೈಕೋರ್ಟ್, ವರ್ಚುವಲ್‌ ವಿಚಾರಣೆ ಸಂದರ್ಭ ನಡೆದ ಕೆಲವು ಪ್ರಹಸನಗಳಿಗೆ ಸಂಬಂಧಿಸಿ ಜೂಹಿ ಚಾವ್ಲಾರ ವಿರುದ್ದ ಗರಂ ಆಗಿತ್ತು. ವಿಚಾರಣೆಗೂ ಮುನ್ನ ನಟಿ ಜೂಹಿ ಚಾವ್ಲಾಗೆ ನೀಡಲಾಗಿದ್ದ ವರ್ಚುವಲ್‌ ವಿಚಾರಣೆಯ ಲಿಂಕ್‌ ಅನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಬುಧವಾರ ವಿಚಾರಣೆಯ ಸಂದರ್ಭ ಕೆಲ ಅಪರಿಚಿತ ಸಂದರ್ಶಕರು ವಿಚಾರಣೆ ವೇಳೆ ಜೂಹಿ ಚಾವ್ಲಾ ನಟನೆಯ ಸಿನೆಮಾಗಳ ಹಾಡು ಹಾಡುವ ಮೂಲಕ ವಿಚಾರಣೆಗೆ ಅಡೆತಡೆ ಉಂಟು ಮಾಡಿದ್ದರು. ಈ ಬೆನ್ನಲ್ಲೇ ನ್ಯಾಯಾಲಯವು ವಿಚಾರಣೆ ವೇಳೆ ಹಾಡು ಹಾಡಿದವರನ್ನು ಪತ್ತೆ ಹಚ್ಚಿ ನ್ಯಾಯಾಂಗ ನಿಂದನೆ ದೂರು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.

Delhi High Court dismissed Juhi Chawlas 5G lawsuit, Rs 20 lakhs fine imposed

''ಹಾಗೆಯೇ ಈ ಅರ್ಜಿ ವಿಚಾರಣೆ ನಡೆಸಿ, ಅರ್ಜಿಯು ದೋಷಯುಕ್ತವಾಗಿದೆ ಮತ್ತು ಮಾಧ್ಯಮ ಪ್ರಚಾರಕ್ಕಾಗಿ ಮಾಡಲಾಗಿದೆ. ಜೂಹಿ ಹಾಗೂ ಮತ್ತಿತರರ ಫಿರ್ಯಾದಿದಾರರಿಗೆ ತಾವು ಮಾಡುತ್ತಿರುವ ಆರೋಪದ ಬಗ್ಗೆ ಯಾವುದೇ ಜ್ಞಾನವಿಲ್ಲ. ಯಾವುದೇ ಪರಿಶೀಲನೆ ಇಲ್ಲದೆ ಹೇಗೆ ದಾವೆ ಹೂಡಲಾಗಿದೆ'' ಎಂದು ‌ಪ್ರಶ್ನಿಸಿ, ಆದೇಶವನ್ನು ಕಾಯ್ದಿರಿಸಿತ್ತು.

5 ಜಿ ನೆಟ್‌ವರ್ಕ್‌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ5 ಜಿ ನೆಟ್‌ವರ್ಕ್‌ ವಿರುದ್ದ ಕೋರ್ಟ್ ಮೆಟ್ಟಿಲೇರಿದ ನಟಿ ಜೂಹಿ ಚಾವ್ಲಾ

ಶುಕ್ರವಾರ ನಡೆಸಿದ ಈ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, 20 ಲಕ್ಷ ರೂ. ದಂಡ ವಿಧಿಸಿದೆ. ಹಾಗೆಯೇ ''ಈ ಅರ್ಜಿ ಅನಗತ್ಯ ಮತ್ತು ನಿಷ್ಪ್ರಯೋಜಕವಾಗಿದೆ. ಫಿರ್ಯಾದಿದಾರರಿಗೆ ಯಾವುದೇ ಜ್ಞಾನವಿಲ್ಲ. ಫಿರ್ಯಾದಿದಾರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಚಾರಣೆಯ ಲಿಂಕ್ ಅನ್ನು ಮೊದಲೇ ಹಂಚಿಕೊಂಡಿದ್ದಾರೆ. ಬರೀ ಮಾಧ್ಯಮ ಪ್ರಚಾರಕ್ಕಾಗಿ ಮೊಕದ್ದಮೆ ಹೂಡಿದ್ದಾರೆ'' ಎಂದು ಹೇಳಿದೆ.

(ಒನ್ಇಂಡಿಯಾ ಸುದ್ದಿ)

English summary
Delhi High Court dismissed Juhi Chawla's 5G lawsuit, Rs 20 lakhs fine imposed and stated that the plea was filed for media publicity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X