ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಗೆ ಮನ ಬಂದಂತೆ ಥಳಿಸಿದ ಪೊಲೀಸ್ ಅಧಿಕಾರಿ ಪುಂಡ ಮಗ ಅರೆಸ್ಟ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಯುವತಿಯೊಬ್ಬಳನ್ನು ಹಿಗ್ಗಾ-ಮುಗ್ಗಾ ಥಳಿಸಿದ ದೆಹಲಿ ಪೊಲೀಸ್ ಅಧಿಕಾರಿಯ ಮಗನನ್ನು ಅಂತೂ ಬಂಧಿಸಲಾಗಿದೆ. ತಕ್ಷಣವೇ ಕ್ರಮ ತೆಗೆದುಕೊಳ್ಳಿ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಆದೇಶ ನೀಡಿದ ನಂತರ ಪೊಲೀಸ್ ಮುಖ್ಯಸ್ಥರು ಕ್ರಮ ತೆಗೆದುಕೊಂಡಿದ್ದಾರೆ.

ರೋಹಿತ್ ಸಿಂಗ್ ತೋಮರ್ ಬಂಧಿತ ಯುವಕ. ಆತನ ತಂದೆ ನಾರ್ಕೋಟಿಕ್ಸ್ ವಿಭಾಗದಲ್ಲಿ ಅಧಿಕಾರಿಯಾಗಿದ್ದಾರೆ. ರೋಹಿತ್ ಹಲ್ಲೆ ಮಾಡುವ ದೃಶ್ಯಗಳನ್ನು ಆತನ ಸ್ನೇಹಿತ ವಿಡಿಯೋ ಮಾಡಿದ್ದ. ಯುವತಿಯ ಜುಟ್ಟು ಹಿಡಿದು ಎಳೆದಾಡಿರುವುದು, ನೆಲಕ್ಕೆ ಜಪ್ಪಿರುವುದು, ಕಪಾಳಕ್ಕೆ ಹೊಡೆದಿರುವುದು, ಕಾಲಿನಿಂದ ಒದ್ದಿರುವುದು, ಕಾಲಿನ ಮೊಣಕಾಲಿನಿಂದ ಒದ್ದಿರುವುದು ಆ ವಿಡಿಯೋದಲ್ಲಿ ಸೆರೆಯಾಗಿತ್ತು.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

ವಿಡಿಯೋ ಮಾಡುತ್ತಿದ್ದ ವ್ಯಕ್ತಿ, ರೋಹಿತ್ ಸಾಕು, ನಿಲ್ಲಿಸು ಎಂದಿರುವ ಧ್ವನಿ ಕೂಡ ದಾಖಲಾಗಿದೆ. ಆದರೆ ಚಿತ್ರೀಕರಿಸುತ್ತಿದ್ದ ವ್ಯಕ್ತಿಯಾಗಲೀ ಅಥವಾ ಇನ್ಯಾರೇ ಆಗಲಿ ಯುವತಿ ಮೇಲೆ ಆಗುವ ಹಲ್ಲೆಯನ್ನು ತಡೆಯುವುದಿಲ್ಲ.

Delhi cops son who thrashed woman, arrested by police

ದೆಹಲಿಯ ಉತ್ತಮ್ ನಗರ್ ದಲ್ಲಿರುವ ಕಾಲ್ ಸೆಂಟರ್ ನಲ್ಲಿ ಸೆಪ್ಟೆಂಬರ್ 2ರಂದು ಈ ವಿಡಿಯೋವನ್ನು ಮಾಡಲಾಗಿದೆ ಎಂಬ ಅಂದಾಜಿದೆ. ಆ ನಂತರ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಶೇರ್ ಆಗಿದೆ. ಆದರೆ ಕೇಂದ್ರ ಗೃಹ ಸಚಿವರು ಮಧ್ಯ ಪ್ರವೇಶಿಸಿದ ನಂತರವೇ ಪೊಲೀಸರು ಆರೋಪಿ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.

ಬೆಂಗಳೂರಲ್ಲಿ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆಬೆಂಗಳೂರಲ್ಲಿ ಮಹಿಳಾ ಸುರಕ್ಷತೆಗಾಗಿ ಪ್ರತ್ಯೇಕ ಮಹಿಳಾ ಗಸ್ತು ಪಡೆ

ವಿಡಿಯೋದಲ್ಲಿ ಇರುವ ಯುವತಿ ಶುಕ್ರವಾರದಂದು ಅತ್ಯಾಚಾರದ ದೂರು ದಾಖಲಿಸಿದ್ದಾರೆ. ರೋಹಿತ್ ತನ್ನ ಸ್ನೇಹಿತನ ಕಚೇರಿಗೆ ಕರೆದು, ಅತ್ಯಾಚಾರ ಎಸಗಿದ್ದಾನೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ಕಾರಣಕ್ಕೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ನಡೆದ ಹತ್ತು ದಿನಗಳ ನಂತರ ಅಂದರೆ ಗುರುವಾರ ವರದಿಯಾಗಿದೆ. ಆ ವಿಡಿಯೋದಲ್ಲಿ ಇಲ್ಲದ ಯುವತಿ- ದಾಳಿ ನಡೆಸಿದವನ ಭಾವಿ ಪತ್ನಿಯಾಗಬೇಕಿದ್ದವಳು ಎಂದು ಕರೆದುಕೊಂಡವರು ದೂರು ದಾಖಲಿಸಿದ್ದಾರೆ. ನಾನು ಮದುವೆ ಆಗಬೇಕಿದ್ದ ಹುಡುಗ ಯುವತಿಯೊಬ್ಬರನ್ನು ಹಾಗೆ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಿದ ಮೇಲೆ ಹಾಗೂ ಆತ ತನ್ನದೇ ಸಹೋದ್ಯೋಗಿಯೊಬ್ಬರ ಮೇಲೆ ಹಲ್ಲೆ ಮಾಡುವುದನ್ನು ನೋಡಿದ ಮೇಲೆ ಮದುವೆ ರದ್ದು ಮಾಡಿಕೊಂಡಿದ್ದಾಗಿ ಆಕೆ ಹೇಳಿದ್ದಾರೆ.

English summary
A video of a young man mercilessly beating a woman inside a Delhi office, posted online by his friend, is so disturbing that Home Minister Rajnath Singh today ordered the police chief to take action. Rohit Singh Tomar, the son of a Delhi police officer posted in the narcotics division, has been arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X