ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ ಕೇಜ್ರಿವಾಲ್ ಓರ್ವ ನಕ್ಸಲೈಟ್: ಸುಬ್ರಮಣಿಯನ್ ಸ್ವಾಮಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 17: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಹೊಸ ಹಣೆಪಟ್ಟಿ ಕಟ್ಟಲಾಗಿದೆ. ಹಾಗೆ ಅವರಿಗೆ ಸಿಕ್ಕ ಬಿರುದೇ ನಕ್ಸಲೈಟ್. ಈ ಹೊಸ ಬಿರುದಾವಳಿ ನೀಡಿದವರುಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಚೇರಿಯಲ್ಲಿ ಕಳೆದ 6 ದಿನಗಳಿಂದ ಅರವಿಂದ ಕೇಜ್ರಿವಾಲ್ ಮತ್ತು ಅವರ ಸಹೊದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ, "ದೆಹಲಿ ಸಿಎಂ ಓರ್ವ ನಕ್ಸಲೈಟ್. ಅವರೆಲ್ಲಾ (ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಎಚ್.ಡಿ. ಕುಮಾರಸ್ವಾಮಿ, ಪಿಣರಾಯಿ ವಿಜಯನ್) ಯಾಕೆ ಇವರನ್ನು ಬೆಂಬಲಿಸಬೇಕು?" ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದ ಕೇಜ್ರಿವಾಲ್ ಧರಣಿ: ಪ್ರಧಾನಿ ಮೋದಿ ಕೊಂಚ ಓಗೊಡಬಾರದೇ? ಮುಂದುವರಿದ ಕೇಜ್ರಿವಾಲ್ ಧರಣಿ: ಪ್ರಧಾನಿ ಮೋದಿ ಕೊಂಚ ಓಗೊಡಬಾರದೇ?

ಬೈಜಾಲ್ ಅವರನ್ನು ಭೇಟಿಯಾಗಲು ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಸಚಿವರು ಕಳೆದ ಸೋಮವಾರದಿಂದ ಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡುತ್ತಿಲ್ಲ. ಅಧಿಕಾರಿಗಳ ಪ್ರತಿಭಟನೆ ಕೊನೆಗೊಳಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶ ಮಾಡಬೇಕು. ಇದಲ್ಲದೆ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮತಿ ನೀಡಬೇಕು ಎಂಬುದು ಕೇಜ್ರಿವಾಲ್ ಅವರ ಬೇಡಿಕೆಯಾಗಿದೆ.

Delhi CM Kejriwal is a Naxalite: Subramanian Swamy

ಬೈಜಾಲ್ ಭೇಟಿಗೆ ಅವಕಾಶ ನೀಡದೇ ಇದ್ದ ಹಿನ್ನೆಲೆಯಲ್ಲಿ, ಅವರೆಲ್ಲಾ ಬೈಜಾಲ್ ಕಚೇರಿಯ ವೇಯ್ಟಿಂಗ್ ರೂಂನಲ್ಲೇ 6 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮಧ್ಯ ಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಮೋದಿ ಸ್ಪಂದಿಸಿಲ್ಲ.

English summary
BJP MP Subramanian Swamy says, 'Delhi CM is a Naxalite. Why should they (Mamata Banerjee, HD Kumaraswamy, Chandrababu Naidu & Pinarayi Vijayan) support him?'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X