ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ: ಡೈಲಿ ಹಂಟ್ ನೀಡಲಿದೆ ಕ್ಷಣಕ್ಷಣದ ಮಾಹಿತಿ

|
Google Oneindia Kannada News

ದೇಶದ ರಾಜಧಾನಿ ದೆಹಲಿಯಲ್ಲಿ ಚುನಾವಣೆಯ ಕಾವು ತೀವ್ರಗೊಂಡಿದೆ. ಐದು ವರ್ಷಗಳ ಪೂರ್ಣಾವಧಿ ಆಡಳಿತ ಪೂರೈಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ, ಎರಡನೆಯ ಅವಧಿಗೆ ಆಯ್ಕೆಯಾಗುವ ಹುಮ್ಮಸ್ಸಿನಲ್ಲಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, ದೆಹಲಿಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಜಧಾನಿಯಲ್ಲಿ ತನ್ನ ಅಸ್ತಿತ್ವ ಪ್ರದರ್ಶನದ ಕಸರತ್ತು ನಡೆಸುತ್ತಿದೆ.

ಈಗಿರುವ ಎಎಪಿ ಸರ್ಕಾರದ ಅಧಿಕಾರಾವಧಿ 2020ರ ಫೆ. 22ರಂದು ಅಂತ್ಯಗೊಳ್ಳಲಿದೆ. ಅದಕ್ಕೂ ಮುನ್ನ 70 ಸದಸ್ಯರ ಬಲವುಳ್ಳ ದೆಹಲಿ ವಿಧಾನಸಭೆಗೆ ಫೆ. 8ರಂದು ಚುನಾವಣೆ ನಡೆಯಲಿದೆ. ಫೆ. 11ರ ಮಂಗಳವಾರ ಫಲಿತಾಂಶ ಹೊರಬೀಳಲಿದೆ.

ಒಂದೇ ಹಂತದಲ್ಲಿ ಚುನಾವಣಾ ಕಾರ್ಯ ಮುಗಿಯಲಿದೆ. ಸಣ್ಣ ಗಾತ್ರದ ವಿಧಾನಸಭೆ ಹೊಂದಿದ್ದರೂ ಶಕ್ತಿ ಕೇಂದ್ರದಲ್ಲಿರುವ ದೆಹಲಿ ಮೇಲೆ ಎಲ್ಲರ ಕಣ್ಣಿದೆ. ಬೃಹತ್ ರಾಜಕೀಯ ಪಕ್ಷವೆನಿಸಿರುವ ಬಿಜೆಪಿ ಜತೆಗೆ ದೆಹಲಿಯಲ್ಲಿ ಮಾತ್ರ ಪ್ರಾಬಲ್ಯ ಹೊಂದಿರುವ ಎಎಪಿ, 2015ರ ಚುನಾವಣೆಯಂತೆಯೇ ಈ ಬಾರಿ ಕೂಡ ನೇರ ಪೈಪೋಟಿ ನಡೆಸುತ್ತಿದೆ.

Delhi Assembly Election Results 2020 Get The Best Coverage From DailyHunt

70 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿಗೆ ಸಿಕ್ಕಿದ್ದು ಕೇವಲ ಮೂರು ಸ್ಥಾನಗಳು. ಉಳಿದ 67 ಸ್ಥಾನಗಳೂ ಎಎಪಿ ಪಾಲಾಗಿತ್ತು. ಪ್ರಸ್ತುತ ನಡೆಯುತ್ತಿರುವ ಸಿಎಎ ಪರ-ವಿರೋಧಿ ಗದ್ದಲಗಳು, ಜೆಎನ್‌ಯು ಗಲಾಟೆಗಳು ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಹೀಗಾಗಿ ಮ್ಯಾಜಿಕ್ ಸಂಖ್ಯೆಯ 36ರ ಗಡಿಯನ್ನು ಯಾರು ತಲುಪುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಚುನಾವಣೆಯ ಕ್ಷಣಕ್ಷಣದ ಮಾಹಿತಿ, ಸಂಪೂರ್ಣ ಹಾಗೂ ಸಮಗ್ರ ವರದಿ, ಬೆಳವಣಿಗೆಗಳ ಸುದ್ದಿಯನ್ನು ಡೈಲಿ ಹಂಟ್ ನೀಡಲಿದೆ. ಅತಿ ನಿಖರವಾಗಿ ಫಲಿತಾಂಶದ ಸುದ್ದಿಗಳನ್ನು ನೀಡುವಲ್ಲಿ ಸದಾ ಮುಂದಿರುವ ಡೈಲಿ ಹಂಟ್, ದೆಹಲಿ ಚುನಾವಣೆಯ ಸುದ್ದಿಯನ್ನೂ ಅದೇ ರೀತಿ ನಿಮಗೆ ತಲುಪಿಸಲಿದೆ.

ಪಕ್ಷಾತೀತ, ಮಿಂಚಿನವೇಗದ ಮತ್ತು ಸುದ್ದಿಯಾಚೆಗಿನ ಮಾಹಿತಿಗಳನ್ನು ಡೈಲಿ ಹಂಟ್‌ನಲ್ಲಿ ಫೆ. 11ರಂದು ನೀವು ನಿರೀಕ್ಷಿಸಬಹುದು.

* ನೇರ ಪ್ರಸಾರ ಹಾಗೂ ಮಿಂಚಿನ ವೇಗದಲ್ಲಿ ಫಲಿತಾಂಶಗಳ ಅಪ್‌ಡೇಟ್‌ಗಳು.

* ಸಂಖ್ಯೆಗಳು, ಹಿಂದಿನ ಫಲಿತಾಶಗಳೊಂದಿಗಿನ ಹೋಲಿಕೆ ಮತ್ತು ಬೆಳವಣಿಗೆಗಳಲ್ಲಿನ ಮಹತ್ವದ ಬದಲಾವಣೆಗಳ ಮಾಹಿತಿ.

* ರಾಜ್ಯಗಳು/ಕ್ಷೇತ್ರಗಳಲ್ಲಿನ ಟ್ರೆಂಡ್ ಮತ್ತು ರಾಜಕೀಯದ ಗಾಳಿ ಎತ್ತ ಬೀಸುತ್ತಿದೆ ಎಂಬ ವಿವರ.

* ಆಳವಾದ ಅಂಕಿಅಂಶಗಳ ವಿಶ್ಲೇಷಣೆ ಮತ್ತು ಸಾಮಾನ್ಯ ಮನುಷ್ಯರಿಗೆ ಈ ಫಲಿತಾಂಶ ಎಷ್ಟು ಮುಖ್ಯ ಎನ್ನುವ ವಿವರಣೆ.

* ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ, ಟ್ವಿಟ್ಟರ್ ಟ್ರೆಂಡ್, ವೈರಲ್ ಮೀಮ್‌ಗಳು, ಟ್ರೆಂಡ್ ಆಗುತ್ತಿರುವ ವಿಡಿಯೋಗಳು ಮತ್ತು ಈ ಫಲಿತಾಂಶದ ಬಗ್ಗೆ ಜನರ ಅಭಿಪ್ರಾಯಗಳು ಇವೆಲ್ಲವೂ ಸಿಗಲಿವೆ.

* ಹೀಗಾಗಿ, ಎಲ್ಲಿಯೂ ಹೋಗಬೇಡಿ ಮತ್ತು ಡೈಲಿಹಂಟ್‌ ವೀಕ್ಷಿಸುತ್ತಿರಿ, ನಿಮಗೆ ಅತ್ಯುತ್ತಮ ಸುದ್ದಿಗಳನ್ನು ನಾವು ಒದಗಿಸಲಿದ್ದೇವೆ.

English summary
DailyHunt will delive you the best coverage of the Delhi Assembly election results on February 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X