• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರೈಸ್ತ ಧರ್ಮ ಗುರುವಿನಿಂದ ವಿವಾದದ ಬಿರುಗಾಳಿ, ಶಾ ತೀವ್ರ ವಾಗ್ದಾಳಿ

By Prasad
|

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಸಂಕಷ್ಟದಲ್ಲಿದ್ದು, ರಾಜಕೀಯ ವಾತಾವರಣ ಪ್ರಕ್ಷುಬ್ದಮಯವಾಗಿದೆ. 2019ರ ಲೋಕಸಭೆ ಚುನಾವಣೆಯವರೆಗೆ ದೇಶಕ್ಕಾಗಿ ಪ್ರಾರ್ಥಿಸಿ ಎಂದು ಪತ್ರ ಬರೆದಿರುವ ದೆಹಲಿಯ ಕ್ರೈಸ್ತ ಧರ್ಮಗುರು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ.

2019ರ ಲೋಕಸಭೆ ಚುನಾವಣೆ ಬರುವವರೆಗೆ ಪ್ರತಿ ಶುಕ್ರವಾರ, ದೇಶದಲ್ಲಿರುವ ಎಲ್ಲ ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು, ಹೊಸ ಸರಕಾರದ ಉದಯವಾಗಬೇಕು ಎಂದು ಪತ್ರ ಬರೆದಿರುವ ದೆಹಲಿಯ ಅನಿಲ್ ಜೆಟಿ ಕೌಟೊ ಎಂಬುವವರು, ಜಾತ್ಯತೀತತೆ ಅಪಾಯದಲ್ಲಿದೆ ಎಂದು ಹೇಳುತ್ತಲೇ ಜಾತಿಯ ಕಿಡಿ ಹಚ್ಚಿದ್ದಾರೆ.

ಮೋದಿ ವಿರುದ್ಧ ಕೆಂಡಕಾರುತ್ತಿರುವ ಚರ್ಚ್ ಗೆ ಟ್ವಿಟ್ಟಿಗರ ಗುದ್ದು!

ಅವರು ಬರೆದಿರುವ ಪತ್ರದಲ್ಲಿ, ಹಿಂದೂ ರಾಷ್ಟ್ರೀಯ ಮೂಲಭೂತವಾದಿಗಳಿಂದ ದೇಶದಲ್ಲಿರುವ ಕ್ರಿಶ್ಚಿಯನ್ನರ ಮೇಲೆ ಮಾತ್ರವಲ್ಲ ಮತ್ತು ಮುಸ್ಲಿಂ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳಾಗುತ್ತಿವೆ. ಬಡವರು, ಗುಡ್ಡಗಾಡು ಜನರು, ದಲಿತರನ್ನು ಗೌರವದಿಂದ ಕಾಣುವಂತಾಗಲು ನಿರಂತರವಾಗಿ ಪ್ರಾರ್ಥಿಸಿ ಎಂದು ಹೇಳಿರುವುದು ಭಾರೀ ಟೀಕೆಗೆ ಗ್ರಾಸವಾಗಿದೆ.

ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?

ಮೇ 8ರಂದು ಬರೆಯಲಾಗಿರುವ ಪತ್ರದಲ್ಲಿ, ದೇಶದ ಉನ್ನತಿಗಾಗಿ ವಾರಕ್ಕೊಂದು ಉಪವಾಸ ಮಾಡಿರಿ ಮತ್ತು ನಾನು ಬರೆದಿರುವ ಪತ್ರವನ್ನು ಪ್ರತಿ ಸಂಡೇ ಸರ್ವೀಸ್ ನಲ್ಲಿ ತಪ್ಪದೆ ಓದಬೇಕು ಎಂದು ಆಗ್ರಹಿಸಿದ್ದಾರೆ. ಆರ್ಚ್ ಬಿಷಪ್ ಬರೆದಿರುವ ಪತ್ರಕ್ಕೆ ಎಲ್ಲ ಕಡೆಯಿಂದ ಟೀಕೆಗಳು ಬರುತ್ತಿವೆ. ಆರ್ಚ್ ಬಿಷಪ್ ಅವರ ಕಚೇರಿ ಕೂಡ, ಇದು ಯಾವುದೇ ರಾಜಕೀಯ ಪಕ್ಷದ ಪರವಾಗಿ ಬರೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಆರ್ಚ್ ಬಿಷಪ್ ರನ್ನು ಝಾಡಿಸಿದ ಶಾ

ಆರ್ಚ್ ಬಿಷಪ್ ರನ್ನು ಝಾಡಿಸಿದ ಶಾ

ಧರ್ಮಕ್ಕೆ ಸಂಬಂಧಿಸಿದಂತೆ ಯಾರೂ ಈ ರೀತಿ ದ್ವೇಷದ ಕಿಡಿ ಹಚ್ಚುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆರ್ಚ್ ಬಿಷಪ್ ಅನಿಲ್ ಕೌಟೊ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ದೇಶಕ್ಕೆ ಒಳಿತಾಗುವಂತಿದ್ದರೆ ಪ್ರಾರ್ಥನೆ ಮಾಡುವುದರಲ್ಲಿ, ಉಪವಾಸ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೆಲ ಕ್ರಿಶ್ಚಿಯನ್ ಬೆಂಬಲಿಗರು ಪ್ರಶ್ನಿಸಿದ್ದಾರೆ.

ರಾಜನಾಥ್ ಸಿಂಗ್ ಹೇಳಿಕೆ

ರಾಜನಾಥ್ ಸಿಂಗ್ ಹೇಳಿಕೆ

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ನಾನು ಅವರು ಬರೆದ ಆ ಪತ್ರವನ್ನು ಓದಿಲ್ಲ. ಆದರೆ, ಭಾರತದಲ್ಲಿ ಅಲ್ಪಸಂಖ್ಯಾತರು ಅತ್ಯಂತ ಸುರಕ್ಷಿತವಾಗಿದ್ದಾರೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಇಂಥ ಅನಗತ್ಯ ಹೇಳಿಕೆಗಳನ್ನು ಸಹಿಸುವುದೂ ಇಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಅಂದು ಬಾಯಿಬಿಡದ ಆರ್ಚ್ ಬಿಷಪ್

ಅಂದು ಬಾಯಿಬಿಡದ ಆರ್ಚ್ ಬಿಷಪ್

ಫಾದರ್ ಟಾಮ್ ಅವರನ್ನು ಮತ್ತು ಸಿಸ್ಟರ್ ಸ್ಯಾಲಿ ಅವರನ್ನು ಯೆಮೆನ್ ನಲ್ಲಿ ಐಸಿಸ್ ಬಿಗಿಮುಷ್ಟಿಯಿಂದ ಪಾರು ಮಾಡಿದಾಗ ಬಾಯಿಬಿಡದ ದೆಹಲಿಯ ಆರ್ಚ್ ಬಿಷಪ್, 2019ರ ಲೋಕಸಭೆ ಚುನಾವಣೆ ಬರುತ್ತಿದ್ದಂತೆ ಏಕೆ ಇದ್ದಕ್ಕಿಂತೆ ದೇಶದ ಪ್ರಜಾಪ್ರಭುತ್ವಕ್ಕೆ, ಜಾತ್ಯತೀತತೆಗೆ ಅಪಾಯವಿದೆ ಎಂದು ಹೇಳುತ್ತಿದ್ದಾರೆ ಎಂದು ಟ್ವಿಟ್ಟಿಗರೊಬ್ಬರು ದೆಹಲಿಯ ಧರ್ಮಗುರುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಿಂದೂಸ್ತಾನದಲ್ಲಿ ಹಿಂದೂಗಳೆಂದರೆ ಕೆಟ್ಟವರೆ?

ಹಿಂದೂಸ್ತಾನದಲ್ಲಿ ಹಿಂದೂಗಳೆಂದರೆ ಕೆಟ್ಟವರೆ?

ಗೋವಾದ ಮಾಜಿ ಕಾಂಗ್ರೆಸ್ ನಾಯಕರಾಗಿರುವ ಸೇವಿಯೋ ರೋಡ್ರಿಗ್ಸ್ ಅವರು, ದೆಹಲಿಯ ಆರ್ಚ್ ಬಿಷಪ್ ನೀಡಿರುವ ಈ ಕೋಮುವಾದಿ ಹೇಳಿಕೆಯನ್ನು ಯಾವ ಟಿವಿ ಚಾನಲ್ ಗಳೂ ಚರ್ಚೆಗೆ ತೆಗೆದುಕೊಳ್ಳುತ್ತಿಲ್ಲ. ಹಿಂದೂ ಶಕ್ತಿಯನ್ನು ಸೋಲಿಸಿ ಅಂದರೆ ಅರ್ಥವೇನು? ಅದರರ್ಥ ಹಿಂದೂಸ್ತಾನದಲ್ಲಿ ಹಿಂದೂಗಳೆಂದರೆ ಕೆಟ್ಟವರೆ? ಒಂದು ವೇಳೆ ಕ್ರಿಶ್ಚಿಯನ್ನರಿಂದ ಆಗುತ್ತಿರುವ ಮತಾಂತರವನ್ನು ನಿಲ್ಲಿಸಲು ಸೋಮವಾರ ಅಥವಾ ಗುರುವಾರ ಉಪವಾಸ ಮಾಡಿ ಎಂದು ಶ್ರೀಶ್ರೀ ರವಿಶಂಕರ್ ಗುರೂಜಿ ಹೇಳಿದ್ದರೆ ಏನಾಗುತ್ತಿತ್ತು? ಶೇಮ್ ಆನ್ ದೆಹಲಿ ಆರ್ಚ್ ಬಿಷಪ್ ಎಂದು ಟೀಕಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi Archbishop Anil Couto has stired storm by saying democracy and secularism in India are in danger. Amit Shah and Rajnath Singh have lambasted this communal statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more