ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪಲ್ ತಲಾಖ್ ವಿರುದ್ಧ ಹೋರಾಟ ಮಾಡಿದ್ದ ಶಯರಾ ಬನೋ ಬಿಜೆಪಿ ಪಕ್ಷ ಸೇರ್ಪಡೆ

|
Google Oneindia Kannada News

ಡೆಹರಾಡೂನ್, ಅಕ್ಟೋಬರ್ 11: ಸುಪ್ರೀಂ ಕೋರ್ಟ್ ನಲ್ಲಿ ತ್ರಿಪಲ್ ತಲಾಖ್ ವಿರುದ್ಧ ಧ್ವನಿ ಎತ್ತಿದ್ದ ಶಯರಾ ಬನೋ ಎಂಬ ಮಹಿಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶನಿವಾರ ಉತ್ತರಖಾಂಡ್ ರಾಜ್ಯದ ಡೆಹರಾಡೂನ್ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಶಯರಾ ಬನೋ ಕಮಲದ ಬಾವುಟ ಹಿಡಿದು ಸೇರ್ಪಡೆಗೊಂಡರು. ಉತ್ತರಾಖಂಡ ರಾಜ್ಯದ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಮತ್ತು ಸಂಘಟನಾ ಕಾರ್ಯದರ್ಶಿ ಅಜಯ್ ಕುಮಾರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ಬಿಹಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಮಹತ್ವದ ಸಭೆಬಿಹಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಮಹತ್ವದ ಸಭೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿಪಲ್ ತಲಾಖ್ ಗೆ ರದ್ದು ಮಾಡಿತ್ತು. ಈ ಹಿಂದೆ ತ್ರಿಪಲ್ ತಲಾಖ್ ವಿರುದ್ಧ ಶಯರಾ ಬನೋ ಹೋರಾಟ ಮಾಡಿದ್ದರು. ಅದೇ ರೀತಿ ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಬಿಜೆಪಿ ಅಧ್ಯಕ್ಷ ತಿಳಿಸಿದರು.

Dehradun: Shayara Bano Who Fought Against Triple Talaq Joins BJP Party

ಅಲ್ಪಸಂಖ್ಯಾತ ಸಮುದಾಯದ ಮಹಿಳೆಯವರೆಗೂ ಬಿಜೆಪಿಯ ಸಿದ್ಧಾಂತಗಳನ್ನು ತಲುಪಿಸುವಲ್ಲಿ ಶಯರಾ ಬನೋ ಅವರು ಕೆಲಸ ಮಾಡಲಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಬಿಜೆಪಿ ಅಧ್ಯಕ್ಷ ಬಸೀಂಧರ್ ಭಗತ್ ಹೇಳಿದ್ದಾರೆ.

ಬಿಜೆಪಿ ಪಕ್ಷ ಸೇರ್ಪಡೆ ಬಳಿಕ ಮಾತನಾಡಿರುವ ಶಯರಾ ಬನೋ, ""ಪಕ್ಷ ನನ್ನನ್ನು ಎತ್ತರಕ್ಕೆ ಬೆಳೆಸಿದಲ್ಲಿ ಜನರನ್ನು ಬಿಜೆಪಿಯತ್ತ ಕರೆತರುವ ಕೆಲಸ ಮಾಡುತ್ತೇನೆ. ನನ್ನನ್ನು ಬಿಜೆಪಿಗೆ ಸೇರುವಂತೆ ಪ್ರೇರಿಪಿಸಿದ ವಿಚಾರಧಾರೆಗಳನ್ನು ಜನರಿಗೆ ತಿಳಿ ಹೇಳುತ್ತೇನೆ. ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಪಕ್ಷದ ಸಿದ್ಧಾಂತಗಳ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತೇನೆ ಎಂದರು.

ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಶಯರಾ ಬನೋ ಅವರಿಗೆ ಪಕ್ಷ ಇನ್ನು ಯಾವುದೇ ಜವಾಬ್ದಾರಿಗಳನ್ನು ನೀಡಿಲ್ಲ. ಆದರೆ ಶಯರಾ ಬನೋ 2022ರ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮಹಾದಾಸೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

English summary
Shayara Bano fought against Triple Talaq, now Shayara Bano joins BJP party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X