ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್‌ಸೈಟ್‌ ದಾಖಲೆಗಳನ್ನು ತೆಗೆದು ಹಾಕಿದ ರಕ್ಷಣಾ ಇಲಾಖೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ರಕ್ಷಣಾ ಸಚಿವಾಲಯವು ತನ್ನ ವೆಬ್‌ಸೈಟ್‌ನಿಂದ 2017ರ ಅವಧಿಯಲ್ಲಿಂದ ಇಲ್ಲಿಯವರೆಗಿನ ಎಲ್ಲ ಮಾಸಿಕ ವರದಿಗಳನ್ನು ಅಳಿಸಿಹಾಕಿದೆ. 2017ರಲ್ಲಿ ಉಂಟಾದ ದೋಕ್ಲಂ ಬಿಕ್ಕಟ್ಟಿನ ಜತೆಗೆ ಲಡಾಖ್‌ನಲ್ಲಿ ಚೀನಾದ ಏಕಪಕ್ಷೀಯ ಆಕ್ರಮಣಶೀಲತೆಯ ವರದಿಗಳನ್ನು ಸಹ ಅದು ತೆಗೆದುಹಾಕಿದೆ.

ವೆಬ್‌ಸೈನಲ್ಲಿದ್ದ ಹಿಂದಿನ ಎಲ್ಲ ವರದಿಗಳೂ ಶೀಘ್ರದಲ್ಲಿಯೇ ವಾಪಸಾಗಲಿವೆ, ಬಹುಶಃ ಅಕ್ಟೋಬರ್ ಒಳಗೇ ಬರಲಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಹಿಂದಿಗಿಂತ ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡುವ ಸಲುವಾಗಿ ಸಾರ್ವಜನಿಕವಾಗಿ ವರದಿಗಳನ್ನು ಹಂಚಿಕೊಳ್ಳುವುದನ್ನು ತೆರವುಗೊಳಿಸಲಾಗುತ್ತಿದೆ ಎಂದು ಅದು ಹೇಳಿದೆ.

ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿ

ಪೂರ್ವ ಲಡಾಖ್‌ನಲ್ಲಿ ಭಾರತದ ಪ್ರದೇಶದೊಳಗೆ ಚೀನಾದ ಅತಿಕ್ರಮಣದ ಬಗ್ಗೆ ಮೂರು ತಿಂಗಳ ಸೇನಾ ಬಿಕ್ಕಟ್ಟಿನ ನಂತರ ಒಪ್ಪಿಕೊಳ್ಳುವ ದಾಖಲೆಯನ್ನು ಆಗಸ್ಟ್‌ನಲ್ಲಿ ಅಪ್‌ಲೋಡ್ ಮಾಡಿದ್ದ ರಕ್ಷಣಾ ಸಚಿವಾಲಯ, ಎರಡು ದಿನಗಳ ಬಳಿಕ, ಆಗಸ್ಟ್ 6ರಂದು ಅದನ್ನು ತೆಗೆದುಹಾಕಿತ್ತು.

 Defence Ministry Deletes All Documents Since 2017 From Its Website

ಪಾಕ್, ಚೀನಾ ಜಂಟಿ ದಾಳಿ ಎದುರಿಸಲು ಭಾರತೀಯ ಸೇನೆ ಸಜ್ಜು: ಬದೌರಿಯಾ ಪಾಕ್, ಚೀನಾ ಜಂಟಿ ದಾಳಿ ಎದುರಿಸಲು ಭಾರತೀಯ ಸೇನೆ ಸಜ್ಜು: ಬದೌರಿಯಾ

ಪ್ರತಿ ವರದಿಯನ್ನೂ ಹಿರಿಯ ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುತ್ತದೆ. ಈ ವರದಿಗಳು ಸಾಮಾನ್ಯವಾಗಿ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮೌನವಾಗಿರುತ್ತವೆ. ಉದಾಹರಣೆಗೆ ಬಾಲಕೋಟ್ ವೈಮಾನಿಕ ದಾಳಿ, ಭಾರತ-ಪಾಕಿಸ್ತಾನ ಕಾರ್ಯಾಚರಣೆಗಳು, ದೋಕ್ಲಂ ಬಿಕ್ಕಟ್ಟು ಮುಂತಾದವುಗಳು ವರದಿ ತಿಳಿಸಿದೆ.

English summary
Ministry of Defence has removed all monthly reports since 2017 from its website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X