ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಹತ್ ನೌಕಾಪಡೆ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ

|
Google Oneindia Kannada News

ನವದೆಹಲಿ, ಜೂನ್ 04: ಬೃಹತ್ ನೌಕಾಪಡೆ ಯೋಜನೆಗೆ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದೆ. ಭಾರತೀಯ ನೌಕಾಪಡೆಯ ಸುಮಾರು 43,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆಗೆ ಸಮ್ಮತಿ ದೊರೆತಿದೆ.

ಮೇಕ್ ಇನ್ ಇಂಡಿಯಾ ಭಾಗವಾಗಿ ಪಿ-75 ಇಂಡಿಯಾ ಯೋಜನೆಯ ಪ್ರಸ್ತಾವನೆಗೆ ಕೋರಿಕೆ ಶೀಘ್ರ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಭಾರತದ ಅನುಮತಿ ಇಲ್ಲದೆ ನೌಕಾಪಡೆ ನಡೆಸಿದ ಕಾರ್ಯಾಚರಣೆಗೆ ಅಮೆರಿಕ ಸಮರ್ಥನೆ ಭಾರತದ ಅನುಮತಿ ಇಲ್ಲದೆ ನೌಕಾಪಡೆ ನಡೆಸಿದ ಕಾರ್ಯಾಚರಣೆಗೆ ಅಮೆರಿಕ ಸಮರ್ಥನೆ

ನೌಕಾ ಕ್ಷೇತ್ರದಲ್ಲಿ ಚೀನಾದ ಪರಾಕ್ರಮ ಹೆಚ್ಚಾಗುತ್ತಿದ್ದು, ಅದರ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Defence Ministry Clears Mega Naval Project To Build 6 Submarines

ಜಲಾಂತರ್ಗಾಮಿ ನೌಕೆಗಳ ವಿಶೇಷಗಳು ಮತ್ತು ಈ ಬೃಹತ್ ಯೋಜನೆಗಾಗಿ ಪ್ರಸ್ತಾವನೆಯ ಕೋರಿಕೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ ನೌಕಾಪಡೆಯ ಪ್ರತ್ಯೇಕ ತಂಡಗಳುಈಗಾಗಲೇ ಪೂರ್ಣಗೊಳಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

English summary
The Defence Ministry on Friday cleared a mega project to build six conventional submarines for the Indian Navy at a cost of around Rs 43,000 crore, a decision aimed at narrowing the gap with growing naval prowess of China, government sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X