ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ನೌಕಾಸೇನೆಗೆ ಇನ್ನಷ್ಟು ಬಲ, 6 ಹೊಸ ಸಬ್ ಮೆರಿನ್ ನಿರ್ಮಾಣ

|
Google Oneindia Kannada News

ನವದೆಹಲಿ, ಫೆಬ್ರವರಿ 01: ಭಾರತೀಯ ನೌಕಾಸೇನೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ 6 ಅತ್ಯಾಧುನಿಕ ಸಬ್​​ಮೆರಿನ್ ನಿರ್ಮಾಣ ಹಾಗೂ ಫ್ರಾನ್ಸ್ ನಿಂದ 2ಟಿ ನಿರ್ದೇಶಿತ ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿದೆ. ಸ್ವದೇಶಿ ಸಬ್ ಮೆರಿನ್ ನಿರ್ಮಾಣಕ್ಕಾಗಿ Defece Acquisition Council (DAC) 40000 ಕೋಟಿ ರೂ. ಅನುದಾನ ನೀಡಲು ಮುಂದಾಗಿದೆ.

ಕಳೆದ ಆಗಸ್ಟ್​ ತಿಂಗಳಲ್ಲಿ 111 ನೌಕಾ ಹೆಲಿಕಾಪ್ಟರ್​ ನಿರ್ಮಾಣಕ್ಕೆ 21,738 ಕೋಟಿ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ಒಪ್ಪಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಫ್ರೆಂಚ್​ನಿರ್ಮಿತ ಚೇತಕ್ ಹೆಲಿಕಾಪ್ಟರ್​ಬದಲಿಗೆ ಹೊಸ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ.

ಸೇನೆಯಲ್ಲಿ ಮಹಿಳೆಯರು: ಐತಿಹಾಸಿಕ ನಿರ್ಣಯ ತಳೆದ ರಕ್ಷಣಾ ಸಚಿವೆಸೇನೆಯಲ್ಲಿ ಮಹಿಳೆಯರು: ಐತಿಹಾಸಿಕ ನಿರ್ಣಯ ತಳೆದ ರಕ್ಷಣಾ ಸಚಿವೆ

ಪ್ರಾಜೆಕ್ಟ್​​-751 ಹೆಸರಿನಲ್ಲಿ ಆರು ಅತ್ಯಾಧುನಿಕ ಸಬ್​ಮೆರಿನ್ ನಿರ್ಮಾಣವಾಗಲಿದೆ. ನೂತನ ಸಬ್​​ಮೆರಿನ್​ ನೌಕಾಸೇನೆಗೆ ಸಾಕಷ್ಟು ಉತ್ತೇಜನ ನೀಡಲಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಹೇಳಿದ್ದಾರೆ.

Defence ministry approves Rs 40,000 crore project to build six submarines

ನೌಕಾಸೇನೆಗೆ ಉಪಯುಕ್ತವಾಗುವ ಹೆಲಿಕಾಪ್ಟರ್ ಯೋಜನೆಗೆ 21,738 ಕೋಟಿ ರು ವೆಚ್ಚವಾಗಲಿದೆ. ಇನ್ನು ಸಬ್ ಮೆರಿನ್ ನಿರ್ಮಾಣಕ್ಕೆ ನೆರವು ನೀಡಲು ರಷ್ಯಾ, ಫ್ರಾನ್ಸ್, ಜರ್ಮನಿ, ಸ್ವೀಡನ್ ನ ಹಡಗು ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.

English summary
The Defence Ministry on Thursday cleared the proposal to acquire 5,000 Milan 2T anti-tank guided missiles from France for the Indian Army. During the Defence Acquisition Council (DAC) meeting today, the ministry also cleared Rs. 40,000 crore project to build six submarines, reported ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X