ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8,722 ಕೋಟಿ ರೂ. ವೆಚ್ಚದ ರಕ್ಷಣಾ ಸಾಮಗ್ರಿ ಖರೀದಿಗೆ ಸರ್ಕಾರದ ಅನುಮೋದನೆ

|
Google Oneindia Kannada News

ನವೆದೆಹಲಿ, ಆಗಸ್ಟ್ 12: ಭಾರತೀಯ ವಾಯು ಪಡೆಗೆ 106 ಮೂಲ ತರಬೇತಿ ವಿಮಾನಗಳು ಸೇರಿದಂತೆ 8,722 ಕೋಟಿ ರೂ ವೆಚ್ಚದ ಸೇನಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಅನುಮೋದನೆ ನೀಡಿದೆ.

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ (ಎಚ್‌ಎಎಲ್) ಎಚ್‌ಟಿಟಿ-40 ಎಂಬ ಮೂಲ ತರಬೇತಿ ವಿಮಾನಗಳನ್ನು ಖರೀದಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಸಚಿವಾಲಯದ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆ ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಈ ಖರೀದಿ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್ಲಡಾಖ್ ಪರ್ವತಗಳಲ್ಲಿ ರಾತ್ರಿ ವೇಳೆ ಅಭ್ಯಾಸ ಹಾರಾಟ ನಡೆಸಿದ ರಫೇಲ್

ಎ.ಕೆ. 203 ರೈಫಲ್‌ಗಳ ಡಿಎಸಿ ಮತ್ತು ಮಾನವರಹಿತ ವೈಮಾನಿಕ ವಾಹನಗಳ (ಯುಎವಿ) ಉನ್ನತೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಹ ಡಿಎಸಿ ಅಂಗೀಕಾರ ಕೊಟ್ಟಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.

 Defence Ministry Approves Military Procurement Worth Rs 8722 Crores

ಯುಎವಿ ಉನ್ನತೀಕರಣ ಯೋಜನೆಯಡಿ ಕೆಲವು ಯುಎವಿಗಳನ್ನು ಲೇಸರ್ ಗೈಡೆಡ್ ಬಾಂಬ್‌ಗಳು ಮತ್ತು ಕೆಲವು ನಿರ್ದಿಷ್ಟ ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯುವಂತೆ ಶಸ್ತ್ರಸಹಿತವನ್ನಾಗಿಸುವ ಸಾಧ್ಯತೆ ಇದೆ.

ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ

ಪ್ರಮಾಣೀಕರಿಸುವ ಮುನ್ನ 70 ಮೂಲ ತರಬೇತಿ ಯುದ್ಧ ವಿಮಾನಗಳನ್ನು ಎಚ್‌ಎಎಲ್‌ನಿಂದ ಆರಂಭದಲ್ಲಿ ಖರೀದಿ ಮಾಡಲಾಗುತ್ತದೆ. ಐಎಎಫ್‌ನಲ್ಲಿ ಎಚ್‌ಟಿಟಿ-40 ವಿಮಾನಗಳ ಕಾರ್ಯಾಚರಣೆ ಆರಂಭವಾದ ಬಳಿ ಉಳಿದ 36 ನೌಕೆಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

English summary
Defence Ministry has approved military procurement worth Rs 8,722 crore including 106 basic trainer aircraft for IAF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X