ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಯಲ್ಲಿ ಮಹಿಳೆಯರು: ಐತಿಹಾಸಿಕ ನಿರ್ಣಯ ತಳೆದ ರಕ್ಷಣಾ ಸಚಿವೆ

|
Google Oneindia Kannada News

ನವದೆಹಲಿ, ಜನವರಿ 19 : ಸೈನ್ಯದ ಮಿಲಿಟರಿ ಪೊಲೀಸ್‌ ಗೆ ಮಹಿಳೆಯರನ್ನು ಸೈನಿಕರನ್ನಾಗಿ ನೇಮಿಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನು ಮುಂದೆ ಮಹಿಳೆಯರು ಮಿಲಿಟರಿ ಪೊಲೀಸ್‌ನಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು ಮಿಲಿಟರಿ ಪೊಲೀಸ್‌ ಸಿಬ್ಬಂದಿಯ 20% ನಷ್ಟು ಮಹಿಳೆಯರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

Defence Minister takes historic decision to induct women in Military Police

ಮಿಲಿಟರಿ ಪೊಲೀಸ್ ಸಿಬ್ಬಂದಿ ಭಾರತೀಯ ಸೇನೆಯ ಭಾಗವೇ ಆಗಿದ್ದು, ಇವರು ಯುದ್ಧ ಖೈದಿಗಳ ನಿರ್ವಹಣೆ, ವಿಚಾರಣೆ, ಸಂಚಾರ ವ್ಯವಸ್ಥೆ, ಮಿಲಿಟರಿ ಸಂಪರ್ಕ ವ್ಯವಸ್ಥೆ, ಸೇನೆಯ ಒಳಗೆ ವಿಐಪಿ ಭದ್ರತೆಗಳನ್ನು ನಿಭಾಯಿಸುತ್ತಾರೆ.

ಕಳೆದ ವರ್ಷ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಅವಕಾಶ ನೀಡಲು ಇನ್ನೂ ಕೆಲವು ವರ್ಷಗಳು ಸರಿಯಬೇಕು ಎಂದಿದ್ದರು. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಒಪ್ಪಿಗೆ ಸೂಚಿಸಿರುವುದರಿಂದ ಮಹಿಳೆಯರು ಯುದ್ಧ ಭೂಮಿಗೆ ಪ್ರವೇಶ ಪಡೆಯಲು ಈಗ ಮೊದಲ ಹೆಜ್ಜೆಯನ್ನು ಇರಿಸಿದಂತಾಗಿದೆ.

English summary
Defence Minister Nirmala Sitharaman has taken decision to induct women as jawans in Corps of Military Police in Army. The women will be inducted in a graded manner to eventually comprise 20 per cent of total Corps of Military Police of the Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X