ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖೋಯ್ ಯುದ್ಧ ವಿಮಾನವೇರಿ ಹಾರಾಟ ನಡೆಸಿದ ಸಚಿವೆ ನಿರ್ಮಲಾ

By Mahesh
|
Google Oneindia Kannada News

ನವದೆಹಲಿ, ಜನವರಿ 17: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದ ಮಧ್ಯಾಹ್ನದ ವೇಳೆ ಯುದ್ಧ ವಿಮಾನ ಸುಖೋಯ್ 30ಎಂಕೆಐ ಏರಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವೆ ಎನಿಸಿಕೊಂಡಿದ್ದಾರೆ.

ಕ್ರಿಕೆಟರ್ ಗಳಾದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಈ ಹಿಂದೆ ಈ ಯುದ್ಧ ವಿಮಾನವೇರಿದ್ದರು. ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, ಎಪಿಜೆ ಅಬ್ದುಲ್ ಕಲಾಂ ಅವರು ಕೂಡಾ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ್ದರು.

In Pics: ಯುದ್ಧ ವಿಮಾನದಲ್ಲಿ ಹಾರಾಟ ಮಾಡಿದ ರಕ್ಷಣಾ ಸಚಿವೆ ನಿರ್ಮಲಾ

Defence Minister Nirmala Sitharaman flies Sukhoi 30 MKI fighter aircraft

ಜೋಧ್ ಪುರದ ವಿಮಾನಯಾನ ನೆಲೆಯಲ್ಲಿ ಇಂದು ನಿರ್ಮಲಾ ಅವರು ಸುಖೋಯ್ ಏರಿ ಹಾರಾಟ ನಡೆಸಿದ್ದಾರೆ.

ಇದಕ್ಕೂ ಮುನ್ನ ರಾತ್ರಿ ವೇಳೆ ಮಿಗ್ 29ಕೆ ಯುದ್ಧ ವಿಮಾನ ಹಾರಾಟ, ಐಎನ್ಎಸ್ ವಿಕ್ರಮಾದಿತ್ಯ ಬಳಕೆ ಬಗ್ಗೆ ಪರಿಶೀಲಿಸಿದರು.

ಯುದ್ಧ ವಿಮಾನಗಳು, ಸೇನಾ ತುರ್ತು ಸಂದರ್ಭಗಳಲ್ಲಿ ಸೇನಾಪಡೆಯ ರನ್ ವೇ ಗಳಿಗಾಗಿ ಕಾಯದೇ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಇಳಿಸುವ ಮತ್ತು ಟೇಕ್ ಆಫ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ.

English summary
After MS Dhoni and Sachin Tendulkar, Defence Minister Nirmala Sitharaman flies Sukhoi 30 MKI fighter aircraft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X