ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆ-ಎಚ್ ಎಎಲ್ ಸಂವಹನಕ್ಕೆ ಹೊಸ ಪೋರ್ಟಲ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 07: ಡಿಜಿಟಲ್ ಇಂಡಿಯಾ ಯೋಜನೆಯಡಿ ಭಾರತದ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸುವ ವಾಯುಸೇನೆ ಮತ್ತು ಎಚ್‌ಎಎಲ್ ಇ -ಪೋರ್ಟಲ್‌ಗೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಿದರು.

ಎಚ್‌ಎಎಲ್ ಕೇಂದ್ರ ಕಚೇರಿಯಲ್ಲಿ ಇ- ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಪರಿಕ್ಕರ್, ಭಾರತೀಯ ವಾಯುಪಡೆ ಮತ್ತು ಎಚ್‌ಎಎಲ್‌ಗಳ ಸಂವಹನ ಹೆಚ್ಚುವುದರೊಂದಿಗೆ ಉತ್ತಮ ಪೈಪೋಟಿ ಸಾದ್ಯವಾಗಲಿದೆ. ಅನುಮಾನ ಮತ್ತು ಗೊಂದಲ ಉಂಟಾದಲ್ಲಿ ಜಂಟಿ ಸಭೆ ನಡೆಸಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದರು.[ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ನಿರ್ಮಾಣ ಘಟಕ]

Defence Minister Manohar Parrikar unveils IAF-HAL e-portal for synergy

ಹೊಸ ಹೊಸ ಸಂಶೋಧನೆಗಳನ್ನು ಹಂಚಿಕೊಳ್ಳಲು ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ಪಪ್ರವಾಗಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಿದೆ. ಎಂದು ಪರಿಕ್ಕರ್ ತಿಳಿಸಿದರು. ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು, ಏರ್ ಮಾರ್ಷಲ್ ಎಸ್.ಬಿ.ಪಿ. ಸಿನ್ಹಾ ಹಾಜರಿದ್ದರು.[ಎಚ್ ಎಎಲ್ ನೂತನ ಅಧ್ಯಕ್ಷ ಸುವರ್ಣ ರಾಜು ಸಂದರ್ಶನ]

ಅಂತಾರಾಷ್ಟ್ರೀಯ ಸ್ಮಾರಕ
ಬೆಂಗಳೂರಿನ ಚೌಡಯ್ಯ ರಸ್ತೆಯ 8 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಸೈನಿಕ ಸ್ಮಾರಕವನ್ನು ಅಂತಾರಾಷ್ಟ್ರೀಯ ಗುರುತನ್ನಾಗಿಸಲು ರಕ್ಷಣಾ ಇಲಾಖೆ ಸಿದ್ಧವಿದ್ದು ರಾಜ್ಯ ಸರ್ಕಾರದ ಒಪ್ಪಿಗೆ ಮತ್ತು ಹೊಂದಾಣಿಕೆ ಅಗತ್ಯವಿದೆ ಎಂದು ಮನೋಹರ್ ಪರಿಕ್ಕರ್ ಹೇಳಿದರು.

English summary
Defence Minister Manohar Parrikar on Sunday unveiled an e-portal to share information between state-run Hindustan Aeronautics Ltd (HAL) and Indian Air Force (IAF). Touted to be the first inter-organisation information sharing system between a defence undertaking and a defence service under the 'Digital India' initiative, the e-portal is intended to synergise competencies of both organisations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X