ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧಿಗಳಿಗೆ ದೀಪಿಕಾ ಪಡುಕೋಣೆ ಖಡಕ್ ಪ್ರತ್ಯುತ್ತರ

|
Google Oneindia Kannada News

Recommended Video

ಕೊನೆಗೂ ಮೌನ ಮುರಿದ ದೀಪಿಕಾ ಪಡುಕೋಣೆ | Deepika Padukone | JNU | CAA | Oneindia kannada

ಮುಂಬೈ, ಜನವರಿ 31: ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್‌ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಇದು ಬಿಜೆಪಿ ಬೆಂಬಲಿಗರಿಗೆ ಅಸಮಾಧಾನ ಉಂಟು ಮಾಡಿತ್ತು. ದೀಪಿಕಾ ಪಡುಕೋಣೆ ಮೇಲೆ ಉರಿದು ಬಿದ್ದಿದ್ದರು. ಅಂದಿನಿಂದಲೂ ಮೌನವಾಗಿಯೇ ಇದ್ದ ದೀಪಿಕಾ ಈಗ ಮಾತನಾಡಿದ್ದಾರೆ.

ಜೆಎನ್‌ಯು ಗೆ ದೀಪಿಕಾ ಭೇಟಿ ನೀಡಿದ ನಂತರ ಬಿಡುಗಡೆ ಆದ ದೀಪಿಕಾ ಪಡುಕೋಣೆ ಚಿತ್ರ 'ಚಪಾಕ್‌' ಗೆ ಉದ್ದೇಶಪೂರ್ವಕವಾಗಿ ರೇಟಿಂಗ್ ಕಡಿಮೆ ಮಾಡಲಾಗಿತ್ತು. ಟ್ರೋಲ್‌ಗಳು ದೀಪಿಕಾ ಚಿತ್ರಕ್ಕೆ ಉದ್ದೇಶಪೂರ್ವಕವಾಗಿ ಕಡಿಮೆ ರೇಟಿಂಗ್ ನೀಡಿದ್ದರು. ಹಾಗಾಗಿ ಐಎಂಡಿಬಿ ಯಲ್ಲಿ 'ಚಪಾಕ್' ಚಿತ್ರದ ರೇಟಿಂಗ್‌ ಕಡಿಮೆ ಆಗಿತ್ತು.

ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್

ಈ ಬಗ್ಗೆ ರೇಡಿಯೋಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮಾಷೆಯಾಗಿಯೇ ಆದರೆ ಅಷ್ಟೆ ಖಡಕ್ ಆಗಿ ತನ್ನ ವಿರುದ್ಧದ ಟ್ರೋಲ್‌ಗಳಿಗೆ, ಪಿತೂರಿಗೆ ಪ್ರಯತ್ಯುತ್ತರ ನೀಡಿದ್ದಾರೆ.

Deepika Padukone Reacts To BJP Trolls

ಸಂದರ್ಶನದಲ್ಲಿ ಸಂದರ್ಶಕಿ, 'ನಿಮಗೆ ವಾಸ್ತವ ಗೊತ್ತಿದೆ, ಆದರೆ ಬೇರೊಂದು ವಾಸ್ತವವೂ ಗೊತ್ತಿದೆ..' ಎಂದು ಪರೋಕ್ಷವಾಗಿ ದೀಪಿಕಾ ವಿರುದ್ಧ ಬಿಜೆಪಿ ಬೆಂಬಲಿಗರ ಪಿತೂರಿಯ ಬಗ್ಗೆ, ಟ್ರೋಲ್‌ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ನಗುತ್ತಲೇ ತಮಾಷೆಯ ಧಾಟಿಯಲ್ಲಿ ಉತ್ತರಿಸುವ ದೀಪಿಕಾ, 'ಅವರು ನನ್ನ ಐಎಂಬಿಡಿ ರೇಟಿಂಗ್ ಬದಲಾಯಿಸಬಹುದು, ಆದರೆ ನನ್ನ ಮನಸನ್ನಲ್ಲಾ' ಎಂದಿದ್ದಾರೆ.

JNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆJNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಈ ಹೇಳಿಕೆ ಮೂಲಕ 'ನಾನು ನನ್ನ ನಿಲುವಿಗೆ ಬದ್ಧ' ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ.

ಚಪಾಕ್ ಸಿನಿಮಾ ಬಿಡುಗಡೆಗೆ ಮುನ್ನಾ ದೀಪಿಕಾ ಪಡುಕೋಣೆ ಅವರು ಜೆಎನ್‌ಯು ಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳು ತಮ್ಮ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು. ಇದು ಭಾರಿ ಸುದ್ದಿಯಾಗಿತ್ತು.

ಜೆಎನ್‌ಯು ಭೇಟಿ ನಂತರ ಒಂದು ವರ್ಗದ ಮಂದಿ (ಬಹುತೇಕ ಬಿಜೆಪಿ ಬೆಂಬಲಿಗರು) ದೀಪಿಕಾ ಪಡುಕೋಣೆ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭಿಸಿದ್ದರು. ಅವರ ಸಿನಿಮಾ ಟಿಕೆಟ್ ರದ್ದುಗೊಳಿಸುವುದು, ರೇಟಿಂಗ್ ಕಡಿಮೆ ಗೊಳಿಸುವುದು, ದೀಪಿಕಾ ಜಾಹೀರಾತು ನೀಡುವ ವಸ್ತುಗಳನ್ನು ಬಳಸದಂತೆ ಕರೆ ನೀಡುವುದು ಹೀಗೆ ಹಲವು ಪಿತೂರಿಗಳನ್ನು ಮಾಡಿದ್ದರು. ಈಗ ಅವೆಲ್ಲವಕ್ಕೂ ದೀಪಿಕಾ ತಕ್ಕ ಉತ್ತರ ನೀಡಿದ್ದಾರೆ.

English summary
Deepika Padukone finally opens up about trolls against her after the JNU incident. She said 'they can not change my decision'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X