• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಲಿಂಗಕಾಮ ಅಪರಾಧವಲ್ಲ: ಐತಿಹಾಸಿಕ ತೀರ್ಪಿಗೆ ಟ್ವಿಟ್ಟರ್ ಪ್ರತಿಕ್ರಿಯೆ

By Manjunatha
|

ಬೆಂಗಳೂರು, ಸೆಪ್ಟೆಂಬರ್ 06: ಪರಸ್ಪರ ಒಪ್ಪಿತ ಸಲಿಂಗಕಾಮ ಅಪರಾಧವಲ್ಲ ಎಂದು ಎಂದು ಹೇಳಿರುವ ಸುಪ್ರೀಂಕೋರ್ಟ್‌ ಇಂದು ಐತಿಹಾಸಿಕ ತೀರ್ಪು ನೀಡಿದೆ.

72 ವರ್ಷಗಳ ಹಿಂದಿನ ಸೆಕ್ಷನ್ 377 ಅನುಸಾರ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲಾಗುತ್ತಿದ್ದು. ಅದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ವೈಯಕ್ತಿಕ ಭಾವನೆಗಳ ಅತ್ಯಂತ ಮಹತ್ವದ್ದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಸಲಿಂಗಕಾಮ ಹೋರಾಟಗಾರರಿಗೆ ಕೊನೆಗೂ ಸಿಕ್ಕ ಜಯ

ದೇಶದಾದ್ಯಂತ ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾನ್ಯರು, ಪತ್ರಕರ್ತರು ಸುಪ್ರೀಂಕೋರ್ಟ್‌ನ ಈ ತೀರ್ಪನ್ನು ಸ್ವಾಗತಿಸಿದ್ದಾರೆ.

ಸಹಮತದ ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪಿಗೆ ಗಣ್ಯರೇನಂತಾರೆ?

ಸಾಮಾಜಿಕ ಜಾಲತಾಣದಲ್ಲಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿರುವ #section377 ಒಟ್ಟಾರೆ ದೇಶದ ಅಭಿಪ್ರಾಯವನ್ನು ಹೇಳುತ್ತಿದೆ.

ಭಾರತೀಯಳಾಗಿದ್ದಕ್ಕೆ ಹೆಮ್ಮೆ

ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಹೆಮ್ಮೆ ಪಟ್ಟಿರುವ ನಿಶಾ ಶ್ರೀಧರನ್ ಅವರು, ನಾನು ಭಾರತೀಯಳು ಎನಿಸಿಕೊಳ್ಳುವುದಕ್ಕೆ ಮೊದಲಿಗಿಂತಲೂ ಹೆಚ್ಚಿನ ಹೆಮ್ಮೆ ಈಗ ಆಗುತ್ತಿದೆ ಎಂದು ಎಂದಿದ್ದಾರೆ. ಅತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಸಮಾನತೆಗೆ ಗೌರವ ನೀಡಿದೆ ಎಂದಿದ್ದಾರೆ ಅವರು.

ಕಣ್ಣುಕುರುಡಾಗಿದ್ದರೂ ನ್ಯಾಯದೇವತೆಗೆ ಪ್ರೀತಿ ಕಂಡಿದೆ

ಸಲಿಂಗಕಾಮಕ್ಕೆ ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿರುವುದನ್ನು ಕಾವ್ಯಾತ್ಮಕವಾಗಿ ಅರ್ರೆ ಸಂಸ್ಥೆ ಮಾಡಿರುವ ಟ್ವೀಟ್. 'ನ್ಯಾಯ ದೇವತೆ ಕುರುಡಾಗಿದ್ದರೂ ಸಹ ಕುರುಡು ಪ್ರೀತಿಯನ್ನು ಕಂಡಿದೆ' ಎಂದಿದೆ ಅವರ ಟ್ವೀಟ್.

ಸಲಿಂಗಕಾಮ ಅಪರಾಧವಲ್ಲ : ಸುಪ್ರೀಂ ನ್ಯಾಯಮೂರ್ತಿಗಳು ಹೇಳಿದ್ದೇನು?

ಕರಣ್ ಜೋಹರ್ ಟ್ವೀಟ್

ಕೊನೆಗೂ ಸಲಿಂಗಕಾಮ ಕಾನೂನುಬದ್ಧವಾಗಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ. ಮಾನವೀಯತೆ ಮತ್ತು ಸಮಾನತೆಗೆ ಈ ಐತಿಹಾಸಿಕ ತೀರ್ಪು ಆಮ್ಲಜನಕವನ್ನು ಒದಗಿಸಿದೆ. ಸೆಕ್ಷನ್ 377 ಅನ್ನು ತೆಗೆದುಹಾಕಿರುವುದು ಬಹುದೊಡ್ಡ ಬೆಳವಣಿಗೆ ಎಂದು ಟ್ವೀಟ್ ಮಾಡಿದ್ದಾರೆ ಅವರು.

ಎಲ್ಲ ಚಾನೆಲ್‌ನಲ್ಲೂ ಕಾಮನಬಿಲ್ಲು

ದೂರದರ್ಶನದಲ್ಲಿ 'ಅಡಚಣೆಗಾಗಿ ವಿಷಾಧಿಸುತ್ತೇವೆ' ಎಂದು ಕಾಮನಬಿಲ್ಲಿನ ಬಣ್ಣಗಳನ್ನು ಪ್ರದರ್ಶಿಸುತ್ತಿದ್ದರಲ್ಲ ಅದು ಇಂದು ಎಲ್ಲಾ ಟಿವಿ ಚಾನೆಲ್‌ಗಳಲ್ಲೂ ಪ್ರದರ್ಶಿತವಾಗಲಿದೆ ಎಂದು ತಮಾಷೆ ಮಾಡಿದ್ದಾರೆ ಸೋನಿನಾಮಿಕ್ಸ್‌. ಸಲಿಂಗಕಾಮಿಗಳು ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನು ತಮ್ಮ ತಮ್ಮ ಅಸ್ಮಿತೆಯ ಚಿಹ್ನೆಯಾಗಿ ಬಳಸುತ್ತಾರೆ.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

ಭಾರತಕ್ಕೆ ಕಾಮನಬಿಲ್ಲಿನ ಬಣ್ಣ

ಸಲಿಂಗಕಾಮ ಸಕ್ರಮಗೊಳಿಸಿ ನೀಡಿರುವ ಐತಿಹಾಸಿಕ ತೀರ್ಪಿನಿಂದ ಭಾರತಕ್ಕೆ ಕಾಮನಬಿಲ್ಲಿನ ಬಣ್ಣ ಬಳಿದಂತಾಗಿದೆ ಎಂದಿದ್ದಾದೆ ಸೆಲೆಬ್ರಿಟಿ ಸ್ವರ ಭಾಸ್ಕರ್. ಇದಕ್ಕಾಗಿ ಹೊರಾಡಿದ ಎಲ್ಲ ಹೋರಾಟಗಾರರಿಗೆ ಹಾಗೂ ತೀರ್ಪು ನೀಡಿದ ನ್ಯಾಯಾಧೀಶರಿಗೆ ಧನ್ಯವಾದ ಎಂದಿದ್ದಾರೆ ಅವರು.

ತಮ್ಮ ಹಕ್ಕುಗಳಿಗಾಗಿ ಹೋರಾಡಿದ್ದವರ ಸಂತಸ

ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದ ಹೊರಾಟಗಾರರು ಸುಪ್ರಿಂಕೋರ್ಟ್ ತೀರ್ಪು ಹೊರಬಿದ್ದ ಕೂಡಲೆ ಹೋರಾಟಗಾರರು ತಮ್ಮ ಸಂತಸ ವ್ಯಕ್ತ ಪಡಿಸಿದ ವಿಡಿಯೋ ಇದು.

'ನಾವು ಮನುಷ್ಯರು, ನಮ್ಮನ್ನು ಘನತೆಯಿಂದ ಬದುಕಲು ಬಿಡಿ'

ಸುಬ್ರಹ್ಮಣಿಯನ್ ಸ್ವಾಮಿ ಹಳೆ ಟ್ವೀಟ್‌ನ ನೆನಪು

ಬಿಜೆಪಿಯ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರ ಹಳೆ ಟ್ವೀಟ್‌ ಅನ್ನು ನೆನಪು ಮಾಡಿರುವ ಪ್ಯಾರೆಡಿ ಖಾತೆಯೊಂದು, ಎಂಥಹಾ ಅವಮಾನ, ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಅವರು ಹಿಂದೆ ಸಲಿಂಗಕಾಮ ವಿರೋಧಿಸಿ ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ ಶಾಟ್‌ಗಳನ್ನು ಅದು ಪ್ರಕಟಿಸಿದೆ.

ಮಾಧ್ಯಮಗಳಿಗೆ ಸಲಹೆ

ಭಾರತೀಯ ಮಾಧ್ಯಮಗಳು ಈ ವಿಷಯದ ಸುದ್ದಿ ಅಥವಾ ಚರ್ಚೆ ಮಾಡುವಾಗ ಇದನ್ನು ಪರ ವಿರೋಧ ಚರ್ಚೆಯ ವಿಷಯ ಎಂದು ನೋಡದೆ ಬಹಳ ಕಾಲದ ಹಿಂದೆಯೇ ಬರಬೇಕಿದ್ದ ತೀರ್ಪು ಎಂದು ಚರ್ಚಿಸಿ ಎಂದು ಸಲಹೆ ನೀಡಿದ್ದಾರೆ ಪರಮೇಶ್ ಶಹಾನಿ.

ಬೆಳಕಿನ ಕಿರಣ ಬಣ್ಣಗಳಾದಾಗ

ಸೆಕ್ಷನ್‌ 377 ಸುಪ್ರಿಂಕೋರ್ಟ್‌ ಎನ್ನುವ ಗಾಜಿನ ತ್ರಿಭುಜದ ಒಳಗೆ ಹೊಕ್ಕು ಸಲಿಂಗಕಾಮ ಸಕ್ರಮವಾಗಿ ಹೊರಹೊಮ್ಮಿದೆ ಎಂದು ಈಸ್ಟ್‌ ಇಂಡಿಯಾ ಕಾಮೆಡಿ ಎಂದು ಟ್ವಿಟ್ಟರ್ ಹ್ಯಾಂಡಲ್‌ ಟ್ವೀಟ್ ಮಾಡಿದೆ.

ಕಡ್ಡಿ ಅಲ್ಲಾಡಿಸುವವರೂ ಇದ್ದಾರೆ

ಸುಪ್ರಿಂಕೋರ್ಟ್‌ನ ತೀರ್ಪಿನಿಂದ ಕೆಲವರಿಗೆ ಅಸಹನೆಯೂ ಉಂಟಾಗಿದೆ. 'ಸುಪ್ರೀಂಕೋರ್ಟ್‌ ಸಲಿಂಗಕಾಮಿಗಳ ಬಗ್ಗೆ ಬಹಳ ಕಾಳಜಿ ವಹಿಸಿದಂತಿದೆ. ಆದರೆ ಅದು ಇನ್ನಿತರ ವಿಷಯಗಳ ಬಗ್ಗೆಯೂ ಗಮನವಹಿಸಬೇಕು' ಎಂದು ಪಟ್ಟಿ ನೀಡಿದ್ದಾರೆ ಇಲ್ಲೊಬ್ಬ ಅತೃಪ್ತ ಜೀವಿ. ಇವರ ನೀಡಿರುವ ಪಟ್ಟಿ ಪ್ರಕಾರ, ಸುಪ್ರೀಂ ಕೋರ್ಟ್‌ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ನಿರ್ಮಿಸಬೇಕಂತೆ, ಮೀಸಲಾತಿ ರದ್ದು ಮಾಡಬೇಕಂತೆ, ಜೊತೆಗೆ ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ನೀಡುವ ಆರ್ಟಿಕಲ್ 370 ಅನ್ನೂ ರದ್ದು ಮಾಡಬೇಕಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twitter reaction about supreme court verdict about section 377. More of the social media people welcomes supreme court verdict. some traditionalists oppose to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more