ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್-400 ಕ್ಷಿಪಣಿ ಖರೀದಿ ಹಿಂದಿರುವ ಕಾರಣಗಳ ಬಗ್ಗೆ ಭಾರತ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಡಿಸೆಂಬರ್ 04: ರಷ್ಯಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾದ ಎಸ್‌-400 ಶೀಘ್ರ ಭಾರತದ ಕೈ ಸೇರಲಿದೆ.

ಅಮೆರಿಕದ ನಿರ್ಬಂಧದ ಬೆದರಿಕೆ ಹಿನ್ನೆಲೆಯಲ್ಲಿಯೂ ರಷ್ಯಾದಿಂದ ಈ ಮಿಸೈಲ್ ಸಿಸ್ಟಮ್ ಖರೀದಿಗೆ ಮುಂದಾಗಿರುವುದನ್ನು ಭಾರತ ಸಮರ್ಥನೆ ಮಾಡಿಕೊಂಡಿದೆ.

ಈಗ ಲಭ್ಯವಿರುವ ಮಾಹಿತಿ ಪ್ರಕಾರ ಅಮೆರಿಕ, ಇಸ್ರೇಲ್, ಫ್ರಾನ್ಸ್, ಯುಕೆ ಮತ್ತು ಜರ್ಮನಿ ಮಾತ್ರ ಆ್ಯಂಟಿ-ಡ್ರೋನ್ ವ್ಯವಸ್ಥೆ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ತಂತ್ರಜ್ಞಾನ ಆಧರಿಸಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಭಾರತೀಯ ಸಶಸ್ತ್ರ ಪಡೆಗಳಿಂದ ಬೇಡಿಕೆ ಇಡಲಾಗಿದೆ ಎಂದು ಅಜಯ್ ಭಟ್ ಹೇಳಿದ್ದಾರೆ.

Decision To Procure S-400 Missile Systems Based On Threat Perception: Govt

ಡಿಆರ್‌ಡಿಒ ಆ್ಯಂಟಿ-ಡ್ರೋನ್ ವ್ಯವಸ್ಥೆಯ ತಂತ್ರಜ್ಞಾನವನ್ನು ಇನ್ನೂ ನಾಲ್ಕು ಖಾಸಗಿ ಕೈಗಾರಿಕೆಗಳಿಗೆ ವರ್ಗಾಯಿಸಿದೆ. ಈ ಮೂಲಕ ಡ್ರೋನ್​​ಗಳ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ ಎಂದು ಅವರು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಎಸ್​-400 ವಿಚಾರಕ್ಕೆ ಬರುವುದಾರೆ ರಷ್ಯಾ ನಿರ್ಮಿತ ಮಿಸೈಲ್ ವ್ಯವಸ್ಥೆಯನ್ನು ಭಾರತ ಖರೀದಿಸಲು ಮುಂದಾದರೆ ಅದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ. ಭಾರತದ ವಿರುದ್ಧ ಕಾಸ್ಟಾ (CAASTA) ನಿರ್ಬಂಧವನ್ನು ಪ್ರಯೋಗಿಸುವುದಾಗಿ ಅಮೆರಿಕ ಹೇಳಿಕೊಂಡಿತ್ತು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್​​, ಭದ್ರತಾ ಸವಾಲುಗಳನ್ನು ಎದುರಿಸಲು ಹಾಗೂ ಬೇರೆ ದೇಶಗಳ ಬೆದರಿಕೆಯನ್ನು ಗ್ರಹಿಸಿ ದೇಶ ಸಾರ್ವಭೌಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಸಶಸ್ತ್ರ ಪಡೆಗಳನ್ನು ಎಲ್ಲಾ ಕಾಲಕ್ಕೂ ಸನ್ನದ್ಧವಾಗಿಡಬೇಕಿದೆ ಎಂದಿದ್ದಾರೆ.

ರಕ್ಷಣಾ ಉಪಕರಣಗಳ ಖರೀದಿಯ ಮೇಲೆ ಪರಿಣಾಮ ಬೀರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿದೆ ಎಂದಿರುವ ಅವರು, ಭಾರತವು ಈಗಾಗಲೇ ಸ್ಥಳೀಯ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ವೈರಿ ಡ್ರೋನ್‌ಗಳನ್ನು ಪತ್ತೆ ಹಚ್ಚಲು, ಅವುಗಳ ವಿರುದ್ಧ ದಾಳಿ ಮಾಡಲು ಈ ಡ್ರೋನ್ ವ್ಯವಸ್ಥೆ ಸಮರ್ಥವಾಗಿದೆ ಎಂದಿದ್ದಾರೆ.

ಭಾರತಕ್ಕೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಪೂರೈಕೆ ಪ್ರಕ್ರಿಯೆ ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಸೇನಾ-ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸೇವೆ (ಎಫ್‌ ಎಸ್‌ ಎಂ ಟಿ ಸಿ)ಗಳ ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‌ಶೋಗೆ ಮುನ್ನ "ಸ್ಪುಟ್ನಿಕ್‌"ಗೆ ತಿಳಿಸಿದ್ದಾರೆ.

ಭಾರತಕ್ಕೆ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಸರಬರಾಜು ಪ್ರಾರಂಭವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ ಎಂದು ಶುಗೇವ್ ಹೇಳಿದರು.

ಈಗಾಗಲೇ ಚೀನಾ, ಟರ್ಕಿಯಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಸೇವೆಗೆ ಪ್ರವೇಶಿಸಿದೆ. 2018 ಅಕ್ಟೋಬರ್ ನಲ್ಲಿ ರಷ್ಯಾ ಹಾಗೂ ಭಾರತ ಎಸ್‌-400 ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದವು.

ಭಾರತಕ್ಕೆ S-400 ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳ ವಿತರಣೆಯು ಈಗಾಗಲೇ ಪ್ರಾರಂಭವಾಗಿದೆ.

ಇದು ಸುಧಾರಿತ, ದೀರ್ಘ-ಶ್ರೇಣಿಯ, ಮೇಲ್ಮೈಯಿಂದ ಗಾಳಿಗೆ ನೆಗೆಯುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. 'ವಿತರಣೆಗಳು ಯೋಜಿಸಿದಂತೆ ನಡೆಯುತ್ತಿವೆ. ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ನಿಗದಿತ ಸಮಯಕ್ಕೆ ಮುಂದುವರಿಯುತ್ತಿದೆ' ಎಂದು ಮಿಲಿಟರಿ-ತಾಂತ್ರಿಕ ಸಹಕಾರಕ್ಕಾಗಿ ಫೆಡರಲ್ ಸೇವೆಯ ರಷ್ಯಾದ ನಿರ್ದೇಶಕ ಡಿಮಿಟ್ರಿ ಶುಗೇವ್ ಅವರು ಹೇಳಿದರು.

ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತವು 2019ರಲ್ಲಿ ರಷ್ಯಾಕ್ಕೆ ಮೊದಲ ಹಂತವಾಗಿ ಸುಮಾರು USD 800 ಮಿಲಿಯನ್ ಪಾವತಿಯನ್ನು ಮಾಡಿದೆ.
ಯಂಫ್ S-400ರ ಮೊದಲ ತುಕಡಿಯನ್ನು ನಿರ್ವಹಿಸಲು ರಷ್ಯಾ ಈಗಾಗಲೇ ಭಾರತೀಯ ಸಿಬ್ಬಂದಿಯ ಗುಂಪಿಗೆ ತರಬೇತಿ ನೀಡಿದೆ.

2022ರ ಜನವರಿಯ ಆರಂಭದಲ್ಲಿ ರಷ್ಯಾದ ತಜ್ಞರು ಭಾರತಕ್ಕೆ ಭೇಟಿ ನೀಡಲಿದ್ದು, ಶಸ್ತ್ರಾಸ್ತ್ರಗಳು ನೆಲೆಗೊಂಡಿರುವ ಸ್ಥಳಗಳಲ್ಲಿ ಅವುಗಳ ಸ್ಥಾಪನೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಿಲಿಟರಿ ಸಂಸ್ಥೆ ರೊಸೊಬೊರೊನೆಕ್ಸ್ಪೋರ್ಟ್ನ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೇವ್ ಹೇಳಿದ್ದಾರೆ.

2022ರ ಅಂತ್ಯದ ವೇಳೆಗೆ ಕ್ಷಿಪಣಿ ವ್ಯವಸ್ಥೆಗಳ ಸಾಗಣೆ ಪೂರ್ಣಗೊಳ್ಳಲಿದೆ ಎಂದು ರೋಸೊಬೊರೊನೆಕ್ಸ್ಪೋರ್ಟ್ನ ಮಹಾನಿರ್ದೇಶಕರು ಹೇಳಿದ್ದಾರೆ.

Recommended Video

ಸಂಬಳ ಸಿಗದ ರಾಯಭಾರಿ ಮಾಡಿದ ಟ್ವೀಟ್ ನಿಂದ ಪಾಕಿಸ್ತಾನದ ಮಾನ‌ ಹರಾಜು | Oneindia Kannada

English summary
The procurement of Russian S-400 missile defence systems was a "sovereign decision" based on existing threat perceptions and to meet the entire spectrum of security challenges, Union Minister of State (MoS) for Defence Ajay Bhatt said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X