ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲೂ ಜನೌಷಧಿ ಕೇಂದ್ರ -ಸುರೇಶ್ ಪ್ರಭು

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 13: ಇನ್ನು ಮುಂದೆ ರೈಲ್ವೇ ನಿಲ್ದಾಣದಲ್ಲಿ ಜನೌಷಧಿಯೂ ಸಿಗಲಿದೆ. ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಫಾರ್ಮಸೆಟುಕಲ್ ಸಚಿವ ಅನಂತ್ ಕುಮಾರ್ ನೀಡಿದ್ದ ಮನವಿಗೆ ರೈಲ್ವೇ ಸಚಿವ ಸುರೇಶ್ ಪ್ರಭು ಸ್ಪಂದಿಸಿದ್ದಾರೆ.

ಇಂದು ಅನಂತ್ ಕುಮಾರ್ ರಾಜ್ಯ ದರ್ಜೆ ಸಚಿವ ಮನ್ಸುಕ್ ಲಾಲ್ ಮಾಂಡವಿಯಾ ಜತೆ ರೈಲ್ವೇ ಸಚಿವ ಸುರೇಶ್ ಪ್ರಭು ಭೇಟಿಯಾಗಿ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯುವಂತೆ ಮನವಿ ಸಲ್ಲಿಸಿದ್ದರು. ಅನಂತ್ ಕುಮಾರ್ ಮನವಿಯ ಮೇರೆಗೆ ರೈಲ್ವೇ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಯುವ ನಿರ್ಧಾರವನ್ನು ಸುರೇಶ್ ಪ್ರಭು ತೆಗೆದುಕೊಂಡಿದ್ದಾರೆ.

Decision to open Janaushadhi Kendras at Railway Stations taken: Shri Suresh Prabhu

ಭೇಟಿ ನಂತರ ಮಾತನಾಡಿದ ಅನಂತ್ ಕುಮಾರ್ "ನಾವು ರೈಲ್ವೇಯ ವಿಸ್ತರಿತ ಜಾಲವನ್ನು ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಜನರಿಕ್ ಔಷಧಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಬಳಸಿಕೊಳ್ಳಲಿದ್ದೇವೆ," ಹೇಳಿದ್ದಾರೆ.

ಈಗಾಗಲೇ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಯೋಜನೆಯಡಿ ದೇಶದಾದ್ಯಂತ 450 ಜಿಲ್ಲೆಗಳಲ್ಲಿ 1600 ಜನೌಷಧಿ ಕೇಂದ್ರಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಕೇಂದ್ರಗಳು ಆರಂಭವಾಗಲಿವೆ.

English summary
Minister for Chemicals & Fertilizers and Parliamentary Affairs, Ananthkumar held a detailed discussion with the Minister of Railways, Suresh Prabhakar Prabhu for opening of Janaushadhi Kendras at Railway Stations and other Railway establishments here today. After the discussion Suresh Prabhu taken decision to open Janaushadhi Kendras at Railway Stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X