ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ನಿಂದ ಮತ್ತೆ ತೈಲ ಖರೀದಿ ಆರಂಭಿಸಬೇಕೆ ಎಂಬ ನಿರ್ಧಾರ ಮೇ 23ರ ನಂತರ

|
Google Oneindia Kannada News

ನವದೆಹಲಿ, ಮೇ 14: ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಲೋಕಸಭೆ ಚುನಾವಣೆ ನಂತರ ನಿರ್ಧಾರ ಮಾಡುವುದಾಗಿ ಸರಕಾರದ ಮೂಲಗಳು ತಿಳಿಸಿವೆ. ಇದೇ ತಿಂಗಳ ಅಂದರೆ ಮೇ ಇಪ್ಪತ್ಮೂರನೇ ತಾರೀಕು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟ ಆಗಲಿದೆ. ಆ ನಂತರ ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.

ಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆ ಕೊಡು-ಕೊಳ್ಳುವ ವ್ಯವಹಾರದಲ್ಲಿ ಗೆದ್ದ ಅಮೆರಿಕ; ಅಡಕತ್ತರಿಯಲ್ಲಿ ಸಿಕ್ಕಿದ ಇರಾನ್ ನ ಸಚಿವರು ಭಾರತಕ್ಕೆ

ಇರಾನ್ ನ ವಿದೇಶಾಂಗ ಸಚಿವ ಜಾವದ್ ಝರೀಫ್ ಅವರು ಮಂಗಳವಾರ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆಗೆ ಈ ಸಂಬಂಧವಾಗಿ ಮಾತುಕತೆ ನಡೆಸಿದರು. ಮೇ ಒಂದನೇ ತಾರೀಕಿನಿಂದ ಭಾರತವು ಇರಾನ್ ನಿಂದ ಯಾವುದೇ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಅಮೆರಿಕವು ನೀಡಿದ್ದ ವಿನಾಯಿತಿಯನ್ನು ಮೇ ತಿಂಗಳಿಗೆ ನಿಲ್ಲಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Decision on oil purchase from Iran will be taken after May 23rd

ಭಾರತದ ವಾಣಿಜ್ಯ ಹಾಗೂ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಇರಾನ್ ನಿಂದ ತೈಲ ಖರೀದಿ ಮಾಡಬೇಕೆ ಎಂಬುದನ್ನು ತೀರ್ಮಾನ ಮಾಡಲಾಗುವುದು. ಇಂಧನ ಭದ್ರತೆ, ಆರ್ಥಿಕ ಹಿತಾಸಕ್ತಿ ಮತ್ತಿತರ ಅಂಶಗಳು ಈ ನಿರ್ಧಾರದಲ್ಲಿ ಅಡಗಿವೆ ಎಂದು ಸರಕಾರದ ಮೂಲಗಳು ಮಾಹಿತಿ ನೀಡಿವೆ.

English summary
Decision on oil purchase from Iran will be taken after May 23rd, said government sources. Iran foreign affair minister visited India on Tuesday regarding oil exports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X