ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಕಡಿಮೆ ಮಾಡುತ್ತೆ ಎನ್ನುವುದೇ ಹಾಸ್ಯಾಸ್ಪದ

By ತುರುವೇಕೆರೆ ಪ್ರಸಾದ್
|
Google Oneindia Kannada News

ಜಗತ್ತಿನ ಅತ್ಯಂತ ಪ್ರಾಚೀನ ಕಸುಬಾದ ವೇಶ್ಯಾವೃತ್ತಿ ಕಾನೂನಿನ ಚೌಕಟ್ಟಿಗೆ ಒಳಪಟ್ಟರೆ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ, ಮಾನವ ಕಳ್ಳಸಾಗಣೆ ಕಡಿಮೆಯಾಗುತ್ತದೆಯೆ? ವೇಶ್ಯಾವಾಟಿಕೆಗೆ ಕಾನೂನಿನ ರಕ್ಷಣೆ ಸಿಕ್ಕಿರುವ ರಾಷ್ಟ್ರಗಳಲ್ಲಿ ಕ್ರೈಂ ಇಳಿಮುಖವಾಗಿದೆಯೇ? ಎಂಬೆಲ್ಲಾ ವಿಷಯಗಳ ಮೇಲೆ ಅಂಕಿ ಅಂಶ ಸಮೇತ ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಲೇಖನ ಈಗಾಗಲೇ ನಿಲುಮೆ.ನೆಟ್ ನಲ್ಲಿ ಪ್ರಕಟವಾಗಿದ್ದು, ಸ್ನೇಹಸೇತುವಾಗಿ ಇಲ್ಲಿ ಪುನರ್ ಪ್ರಕಟಿಸಲಾಗುತ್ತಿದೆ-ಸಂಪಾದಕ

ಮಹಿಳಾ ಸಮಾನತೆ ಎಂದರೆ ಎಲ್ಲಾ ಮಹಿಳೆಯರೂ ಲೈಂಗಿಕ ಶೋಷಣೆಯಿಂದ, ದೌರ್ಜನ್ಯದಿಂದ ಮುಕ್ತರಾಗಿರುವುದು ಎಂದೇ ಅರ್ಥ.ವೇಶ್ಯಾವೃತ್ತಿಯೇ ಸ್ವತಃ ಅತ್ಯಾಚಾರವಾಗಿರುವುದರಿಂದ ಅದು ಅತ್ಯಾಚಾರವನ್ನು ಕಡಿಮೆ ಮಾಡುತ್ತದೆ ಎನ್ನುವುದೇ ಹಾಸ್ಯಾಸ್ಪದ. [ಗೆಜ್ಜೆ ಪೂಜೆ ತರಬೇತಿ ಕೇಂದ್ರಕ್ಕೆ ಗುದ್ದಲಿ ಪೂಜೆ]

ಮಹಿಳೆಯರನ್ನು ಕರೆತಂದು ಅಥವಾ ಕದ್ದು ತಂದು ಕಾನೂನು ಬದ್ಧವಾಗಿ ಅತ್ಯಾಚಾರಕ್ಕೆ ಅಣಿಗೊಳಿಸುವುದು ಮತ್ತು ಪುರುಷರ ಲೈಂಗಿಕ ಕ್ರಿಯೆಗೆ ಮಹಿಳೆಯರನ್ನು ಭೋಗದ ವಸ್ತುವನ್ನಾಗಿಸುವುದು ದೊಡ್ಡ ಅಪರಾಧ ಎನ್ನುತ್ತಾರೆ ಖ್ಯಾತ ಮಹಿಳಾ ಹೋರಾಟಗಾರ್ತಿ ಹಾಗೂ ವೇಶ್ಯಾವೃತ್ತಿಯ ಕಟ್ಟಾ ವಿರೋಧಿ ಮೆಲಿಸಾ ಫಾರ್ಲೆ. [ಕಾಲೇಜ್ ಗರ್ಲ್ ಆದಳು ಕಾಲ್ಗ‌ರ್ಲ್ ; ಹಣವೇ ನಿನ್ನಯ ಗುಣವೇ]

ಕಾನೂನುಬದ್ಧ ವೇಶ್ಯಾವೃತ್ತಿ ಎಂದರೆ ಸಮಾಜದ ಸ್ಥಿತಿವಂತ ಮಹಿಳಾ ಸಮುದಾಯದ ಘನತೆ, ಶೀಲ ಕಾಪಾಡಲು ಮತ್ತೊಂದು ಅಸಹಾಯಕ ವರ್ಗವಾದ ಶೋಷಿತ ಮಹಿಳೆಯರನ್ನು ರೇಪ್ ಮಾಡಿಸುವುದು ಎಂದಾಗುತ್ತದೆ.

ಹಲವು ಅಧ್ಯಯನಗಳ ಪ್ರಕಾರ ಬಹುತೇಕ ಅತ್ಯಾಚಾರಿಗಳು ವೇಶ್ಯಾವೃತ್ತಿಯನ್ನು ಬೆಂಬಲಿಸುವುದಿಲ್ಲ, ಅಥವಾ ಒಮ್ಮೆಯೂ ಆ ಅನುಭವ ಪಡೆದವರಲ್ಲ, ಅತ್ಯಾಚಾರಿಗಳಲ್ಲಿ ಹಲವರಿಗೆ ಸ್ನೇಹಿತೆಯರಿರುತ್ತಾರೆ, ಕೆಲವರಿಗೆ ಮದುವೆಯೂ ಆಗಿ ಪತ್ನಿಯೊಂದಿಗೆ ಸಂಸಾರ ಮಾಡುತ್ತಿರುತ್ತಾರೆ, ಇನ್ನು ಕೆಲವರು ಲಿವಿಂಗ್ ಟುಗೆದರ್ ಸಂಬಂಧಗಳಲ್ಲಿರುತ್ತಾರೆ. ಆಗಾಗ್ಗೆ ವೇಶ್ಯೆಯರ ಸಹವಾಸ ಮಾಡುವ ವಯಸ್ಸಿನ ಗಂಡಸರಿಗಿಂತ ಅತ್ಯಾಚಾರಿಗಳು ಕಡಿಮೆ ವಯಸ್ಸಿನವರಾಗಿರುತ್ತಾರೆ.

ವಿಯಟ್ನಾಂನಲ್ಲಿ ಅಮೇರಿಕಾ ಯೋಧರಿಗೆಂದೇ ಮಿಲಿಟರ್ ಬೇಸ್ ಕ್ಯಾಂಪ್ ಪ್ರದೇಶದಲ್ಲಿ ಕಾನೂನುಬದ್ಧ ವೇಶ್ಯಾಗೃಹಗಳನ್ನು ನಿರ್ಮಿಸಲಾಗಿತ್ತು. ಆದರೂ ಅಮೇರಿಕನ್ ಯೋಧರು ಮುಗ್ಧ ವಿಯೆಟ್ನಾಂ ಹೆಂಗಸರು ಹಾಗೂ ಹೆಣ್ಣುಮಕ್ಕಳ ಮೇಲೆ ಇತಿಹಾಸದಲ್ಲಿ ಮರೆಯಲಾಗದಂತಹ ಘೋರ ಅತ್ಯಾಚಾರ ಎಸಗಿದರು. [ಒಂದೇ ರಾತ್ರಿ ಎಂಟು ಹೆಣ್ಣುಗಳ ಜೊತೆ]

ಲೈಂಗಿಕ ದೌರ್ಜನ್ಯ ಕಡಿಮೆ?: ಹೀಗಾಗಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದರಿಂದ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಡಿಮೆಯಾಗುತ್ತದೆಂದು ಹೇಗೆ ನಂಬುವುದು?

ವೇಶ್ಯಾವೃತ್ತಿಯನ್ನು 4 ರೀತಿಯಲ್ಲಿ ಪರಿಗಣಿಸಬಹುದಾಗಿದೆ. ವೇಶ್ಯಾವೃತ್ತಿಯನ್ನು ಅಪರಾಧೀಕರಣಗೊಳಿಸುವುದು, ಕಾನೂನುಬದ್ಧಗೊಳಿಸುವುದು, ನಿರಪರಾಧೀಕರಣಗೊಳಿಸುವುದು ಅಥವಾ ನಿಷೇಧಿಸುವುದು. ಅಪರಾಧೀಕರಣಗೊಳಿಸಿದರೆ ವೃತ್ತಿ ನಿರತರು, ಬ್ರೋಕರ್, ಪಿಂಪ್ ಎಲ್ಲರೂ ಶಿಕ್ಷಾರ್ಹರಾಗುತ್ತಾರೆ. ಕಾನೂನುಬದ್ಧಗೊಳಿಸಿದರೆ ಒಂದು ಸ್ಥಳೀಯ ಸಂಸ್ಥೆಯ ಮೂಲಕ ಈ ವೃತ್ತಿ ನಿಯಂತ್ರಿಸಲ್ಪಡಬಹುದು. [ಹೈಟೆಕ್ ಸಿಟಿ ಬೆಂಗಳೂರಲ್ಲಿ ಅವ್ರ ಸಂಖ್ಯೆ 24,000]

ನಿರಪರಾಧೀಕರಣಗೊಳಿಸಿದರೆ ಮಾತ್ರ ಬ್ರೋಕರ್, ಮಧ್ಯವರ್ತಿಗಳ ವಿರುದ್ಧ ಇರುವ ಕಾನೂನು ಸಡಿಲಗೊಳ್ಳುತ್ತದೆ.ವೇಶ್ಯಾವೃತ್ತಿಯ ನಿಷೇಧ ಮಾನವ ಹಕ್ಕು ಆಧಾರಿತ ಕ್ರಮವಾಗಿದ್ದು ಇದು ಹೆಣ್ಣುಮಕ್ಕಳ ಸಾಗಣೆ, ಮಾರಾಟ ಹಾಗೂ ಕೊಳ್ಳುವಿಕೆಯನ್ನು ಕಾನೂನು ಮೂಲಕ ಹತ್ತಿಕ್ಕಿ ಲೈಂಗಿಕ ಕಾರ್ಯಕರ್ತೆಯರನ್ನು ಶಿಕ್ಷಿಸುವ ಬದಲು ವೃತ್ತಿಯಿಂದ ಮುಕ್ತಗೊಳಿಸುವುದಾಗಿದೆ.

ವಿಶ್ವಸಂಸ್ಥೆ ನಡೆಸಿದ ಒಂದು ಸಂದರ್ಶನದ ಪ್ರಕಾರ ವೇಶ್ಯಾವೃತ್ತಿಯಲ್ಲಿರುವ ಶೇ.80ರಷ್ಟು ಮಹಿಳೆಯರು ಅತ್ಯಾಚಾರದ ಬಲಿಪಶುಗಳಾಗಿದ್ದಾರೆ. ಒಬ್ಬಾಕೆ 'ವೇಶ್ಯೆಯ ಪ್ರತಿ ಲೈಂಗಿಕ ಅನುಭವವೂ ಒಂದು ಅತ್ಯಾಚಾರ' ಎಂದು ವಿಷಾದಿಸುತ್ತಾಳೆ.

Can Legalising Sex Work in India curb crime against women

ಈ ವೃತ್ತಿಯಲ್ಲಿರುವ ಪ್ರತಿ ಮಹಿಳೆಯೂ ವರ್ಷಕ್ಕೆ ಕನಿಷ್ಠ 8 ರಿಂದ 10 ಬಾರಿ ಅತ್ಯಾಚಾರಕ್ಕೊಳಗಾಗುತ್ತಾಳೆ. ನಮ್ಮ ಭೂಗ್ರಹದ ಮೇಲೆ ಅತ್ಯಂತ ಹೆಚ್ಚು ಬಾರಿ ಅತ್ಯಾಚಾರಕ್ಕೊಳಗಾದ ಸಮೂಹ ಎಂದರೆ ಈ ವೃತ್ತಿಯಲ್ಲಿರುವ ಮಹಿಳೆಯರು ಎನ್ನುತ್ತಾರೆ ಸುಸಾನ್ ಕೆ ಹಂಟರ್ ಮತ್ತು ರೀಡ್. ಕೌನ್ಸಿಲ್ ಫಾರ್ ಪ್ರಾಸ್ಟಿಟ್ಯೂಶನ್ ಅಲ್ಟ್ರನೇಟೀವ್ಸ್ ನ ಸಹಾಯ ಯಾಚಿಸಿ ಬಂದ ಶೇ.78 ರಷ್ಟು ಮಹಿಳೆಯರು ವರ್ಷಕ್ಕೆ ಸರಾಸರಿ 16 ಬಾರಿ ದಲ್ಲಾಳಿಗಳಿಂದ ಮತ್ತು 33 ಬಾರಿ ಮಧ್ಯವರ್ತಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದಾರೆ.

ಒರೆಗಾನ್ ಮತ್ತು ಪೋರ್ಟ್‍ಲ್ಯಾಂಡ್‍ನಲ್ಲಿ ಶೇ.85ರಷ್ಟು ವೃತ್ತಿನಿರತ ವೇಶ್ಯೆಯರು ನಿರಂತರ ಅತ್ಯಾಚಾರಕ್ಕೊಳಗಾಗಿದ್ದಾರೆ. ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ಟರ್ಕಿ, ಯುಎಸ್‍ಎ ಮತ್ತು ಜಾಂಬಿಯಾ ಈ ಐದು ದೇಶಗಳಲ್ಲಿ ವೇಶ್ಯಾವೃತ್ತಿ ಕುರಿತು ನಡೆದ ಸಮೀಕ್ಷೆಯಲ್ಲಿ ಶೇ.62 ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ,

ಶೇ.73 ಮಹಿಳೆಯರು ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ. ಶೇ.72 ಮಹಿಳೆಯರು ವಸತಿ ಹೀನರಾಗಿದ್ದಾರೆ. ಶೇ.92 ಮಹಿಳೆಯರು ತಕ್ಷಣ ಈ ವೃತ್ತಿಯಿಂದ ಈಚೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬುದು ಕಂಡುಬಂದಿದೆ. ಶೇ.75ರಷ್ಟು ಮಹಿಳೆಯರು ಒಂದಿಲ್ಲೊಂದು ರೀತಿಯಲ್ಲಿ ಆತ್ಮಹತ್ಯೆಯ ಪ್ರಯತ್ನ ನಡೆಸಿದ್ದಾರೆ. ಕೆನಡಾದ ಒಂದು ವರದಿ ಪ್ರಕಾರ ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿ ಮರಣ ಪ್ರಮಾಣಕ್ಕಿಂತ ಶೇ.40ರಷ್ಟಿತ್ತು ಎನ್ನುವುದು ತೀರಾ ಗಾಬರಿ ಮೂಡಿಸುವ ಸಂಗತಿ.

ಯಾವುದೇ ವೃತ್ತಿ ಆತ್ಮತೃಪ್ತಿ, ಘನತೆ, ಗೌರವಗಳನ್ನು ಹೆಚ್ಚಿಸಬೇಕು. ಬದುಕಿನ ಭದ್ರತೆ ನೀಡಬೇಕು, ಯಾರ ಹಂಗೂ ಇಲ್ಲದೆ ಸ್ವತಂತ್ಯವಾಗಿ ನಿಭಾಯಿಸುವ ನೈಪುಣ್ಯ, ವೃತ್ತಿ ಕೌಶಲ ಇರಬೇಕು. ಇದಾವುದೂ ಇಲ್ಲದ ಒಂದು ಅನಿವಾರ್ಯ ಶೋಷಣೆಯನ್ನು ವೃತ್ತಿ ಎಂದು ಕರೆಯುವುದೇ ದೊಡ್ಡ ವಿಪರ್ಯಾಸ.

English summary
A proper debate is needed on legalising sex work in India.Legalisation alone can't curb violent crimes against sex workers and child trafficking. But, Statistics backs legalising is best idea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X