ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದ ನಂತರದ ಮರಣಕ್ಕೆ ಲಸಿಕೆಯನ್ನು ಹೊಣೆ ಮಾಡಬೇಡಿ; ಕೇಂದ್ರ

|
Google Oneindia Kannada News

ನವದೆಹಲಿ, ಜೂನ್ 15: ಕೊರೊನಾ ಲಸಿಕೆ ಹಾಕಿಸಿಕೊಂಡ ನಂತರದ ದಿನಗಳಲ್ಲಿ ವ್ಯಕ್ತಿಯು ಆಸ್ಪತ್ರೆ ಸೇರಿದರೆ ಅಥವಾ ಸಾವನ್ನಪ್ಪಿದರೆ ಅದಕ್ಕೆ ಲಸಿಕೆ ಕಾರಣ ಎಂದು ಊಹಿಸಿಕೊಳ್ಳಬಾರದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿದೆ.

ಕೊರೊನಾ ಲಸಿಕೆ ಪಡೆದುಕೊಂಡ ನಂತರ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾಗುವ ಕುರಿತು ಹಾಗೂ ಲಸಿಕೆ ಪಡೆದ ನಂತರದ ಮರಣ ಪ್ರಮಾಣದ ಕುರಿತು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಜನವರಿ 16, 2021 ಇಂದ ಜೂನ್ 7, 2021 ತವರೆಗೆ 488 ಸಾವುಗಳು ಕೊರೊನಾ ನಂತರದ ಸಮಸ್ಯೆಯಿಂದ ಸಂಭವಿಸಿದ್ದು, ಇವರೆಲ್ಲರೂ ಲಸಿಕೆ ಪಡೆದಿದ್ದರು ಎಂಬುದಾಗಿ ತಿಳಿಸಿವೆ.

ಮಧುಮೇಹದ ಔಷಧ ಕೊರೊನಾಗೆ ಮದ್ದಾಗಬಹುದೇ? ಹೀಗೊಂದು ಹೊಸ ಸಾಧ್ಯತೆಮಧುಮೇಹದ ಔಷಧ ಕೊರೊನಾಗೆ ಮದ್ದಾಗಬಹುದೇ? ಹೀಗೊಂದು ಹೊಸ ಸಾಧ್ಯತೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್, "ಲಸಿಕೆ ಪಡೆದ ನಂತರ ದೇಹದಲ್ಲಿ ಕೆಲವು ಬದಲಾವಣೆಗಳಾಗುವುದು ಸಹಜ. ಹಾಗೆಂದು ಲಸಿಕೆ ಕುರಿತು ಸುಳ್ಳು ಮಾಹಿತಿಗಳನ್ನು ಹರಡಬೇಡಿ. ಅಪೂರ್ಣ ಮಾಹಿತಿ ಇಂಥ ವರದಿಗಳಿಗೆ ಆಧಾರ. ಲಸಿಕೆಗಳ ಕುರಿತು ಜ್ಞಾನವಿಲ್ಲದಿರುವುದು ಸುಳ್ಳು ಸುದ್ದಿ ಹರಡಲು ಕಾರಣ," ಎಂದು ಹೇಳಿದ್ದಾರೆ.

Death After Covid Vaccination Cannot Be Assumed Due To Vaccination

ಇದುವರೆಗೂ ದೇಶದಲ್ಲಿ 23.5 ಕೋಟಿ ಮಂದಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದ್ದು, ಲಸಿಕೆಯಿಂದ ಸಾವು ಸಂಭವಿಸಿರುವ ಸಾಧ್ಯತೆ 0.0002% ಮಾತ್ರ ಇದೆ ಎಂದು ಪೌಲ್ ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ಗಂಟೆಗೆ 1.45 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 150 ದಿನಗಳಲ್ಲಿ 25,87,13,321 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ ಎಂದು ಸೋಮವಾರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೋಮವಾರ ರಾತ್ರಿ 7 ಗಂಟೆ ವೇಳೆಗೆ 35,96,462 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 31,84,503 ಜನರಿಗೆ ಮೊದಲ ಡೋಸ್ ಹಾಗೂ 4,11,959 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.

ದೇಶದಲ್ಲಿ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಮೂರನೇ ಹಂತದಲ್ಲಿ ಮೇ 1ರಿಂದ 18-44 ವಯೋಮಾನದವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

English summary
Any death or hospitalisation following COVID-19 vaccination cannot be automatically assumed to be due to vaccinatio says Niti ayog member VK Paul,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X