ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಗಾಗಿ ಒಪ್ಪಂದ: ವೋಕ್‌ಹಾರ್ಟ್ ಉತ್ಪಾದಿಸಲಿದೆ ವರ್ಷಕ್ಕೆ 500 ಮಿಲಿಯನ್ ಡೋಸ್‌

|
Google Oneindia Kannada News

ಮುಂಬೈ, ಜೂ. 04: ಭಾರತದಲ್ಲಿ ಲಸಿಕೆ ಕೊರತೆಯ ವರದಿಗಳ ಮಧ್ಯೆ, ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಜಾಗತಿಕ ಔಷಧೀಯ ತಯಾರಿಕಾ ಕಂಪನಿ ವೋಕ್‌ಹಾರ್ಟ್ ಕೋವಿಡ್ -19 ಔಷಧಿಗಳು ಮತ್ತು ಲಸಿಕೆಗಳಿಗೆ ಸಂಬಂಧಿಸಿದ ಪ್ರಮುಖ ಉತ್ಪಾದನಾ ಒಪ್ಪಂದದ ಕುರಿತು ಪ್ರಕಟಣೆ ನೀಡುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಔಷಧಿ ತಯಾರಕರು ಒಪ್ಪಂದದ ಕೊನೆಯ ಹಂತದಲ್ಲಿದ್ದು ಮುಂದಿನ ಎರಡು-ಮೂರು ವಾರಗಳಲ್ಲಿ ಒಪ್ಪಂದವನ್ನು ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ವೊಕ್‌ಹಾರ್ಡ್‌ನ ಅಧ್ಯಕ್ಷ ಡಾ.ಹಬಿಲ್ ಖೋರಕಿವಾಲಾ, ಫಾರ್ಮಾ ಮೇಜರ್ ವರ್ಷಕ್ಕೆ 500 ಮಿಲಿಯನ್ ಡೋಸ್‌ಗಳನ್ನು ತಯಾರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕೊರೊನಾ ಲಸಿಕೆ ಅಭಾವದ ನಡುವೆ ಸರ್ಕಾರಕ್ಕೆ ವೋಕ್‌ಹಾರ್ಟ್‌ ಲಸಿಕೆ ಪ್ರಸ್ತಾಪಕೊರೊನಾ ಲಸಿಕೆ ಅಭಾವದ ನಡುವೆ ಸರ್ಕಾರಕ್ಕೆ ವೋಕ್‌ಹಾರ್ಟ್‌ ಲಸಿಕೆ ಪ್ರಸ್ತಾಪ

ಈ ಸಂದರ್ಭದಲ್ಲೇ ಭಾರತದ ಲಸಿಕೆಯ ಲಭ್ಯತೆ ಮತ್ತು ಬೆಲೆಯ ಬಗ್ಗೆ ಮಾಧ್ಯಮ ಪ್ರಶ್ನಿಸಿದಾಗ, ನಮ್ಮ ಕಂಪನಿಯು ಲಸಿಕೆಯನ್ನು ಪ್ರಮುಖ ಸರಬರಾಜುದಾರರಿಗೆ ಪೂರೈಸಲಿದೆ. ಆ ಸರಬರಾಜುದಾರರು ಲಸಿಕೆಯನ್ನು ಭಾರತಕ್ಕೆ ಪರಿಚಯಿಸು‌ತ್ತಾರೆ ಎಂದು ತಿಳಿಸಿದ್ದಾರೆ.

Deal For Vaccine: Wockhardt Manufacture 500 Million Doses a Year: Reports

ಕೋವಿಡ್‌ ಲಸಿಕೆಗಳ ಬೇಡಿಕೆ ಜಾಗತಿಕವಾಗಿ ಹೆಚ್ಚಾಗುತ್ತಿರುವ ನಡುವೆ, ಭಾರತವು ತನ್ನ ಲಸಿಕೆ ಅಭಿಯಾನಕ್ಕಾಗಿ ದೇಶೀಯ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿರುವಾಗ ಇತರ ದೇಶಗಳಿಗೆ ಲಸಿಕೆ ಪೂರೈಕೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಭಾರತ ನಿನ್ನೆ ಹೇಳಿತ್ತು.

ದೇಶದಲ್ಲಿ ಲಸಿಕೆ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದ ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ, ಭಾರತ ಯುಎಸ್ ಲಸಿಕೆ ತಯಾರಕರಾದ ಫಿಜರ್, ಜಾನ್ಸನ್ ಆಂಡ್‌ ಜಾನ್ಸನ್ ಮತ್ತು ಮಾಡರ್ನಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಇವರೇ ಮಾದರಿ: ಕೊರೊನಾವೈರಸ್ ಲಸಿಕೆ ಪಡೆದ 124 ವರ್ಷದ ಅಜ್ಜಿಇವರೇ ಮಾದರಿ: ಕೊರೊನಾವೈರಸ್ ಲಸಿಕೆ ಪಡೆದ 124 ವರ್ಷದ ಅಜ್ಜಿ

"ವಿದೇಶದಿಂದ ಲಸಿಕೆಗಳನ್ನು ಸಮರ್ಪಕವಾಗಿ ಪೂರೈಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಪ್ರಶ್ನೆಗಳಿಗೆ ನಾನು ಈಗಷ್ಟೇ ಪ್ರತಿಕ್ರಿಯಿಸಿದ್ದೇನೆ. ಈ ಹಿನ್ನೆಲೆಯಲ್ಲಿ, ನಾವು ಪದೇ ಪದೇ ವಿದೇಶದಿಂದ ಲಸಿಕೆಗಳ ಪೂರೈಕೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಕೂಡಾ ಈ ವೇಳೆಯೇ ಹೇಳಿದ್ದಾರೆ.

Deal For Vaccine: Wockhardt Manufacture 500 Million Doses a Year: Reports

"ನಾವು ಪ್ರಸ್ತುತ ನಮ್ಮ ಸ್ವಂತ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕಾಗಿ ದೇಶೀಯ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ" ಎಂದಿದ್ದಾರೆ.

ಭಾರತದಲ್ಲಿ ಜನವರಿಯಲ್ಲಿ ಲಸಿಕೆ ಅಭಿಯಾನ ಆರಂಭವಾಗಿದ್ದು ಬಳಿಕ ಭಾರತದಿಂದ ಇತರ ದೇಶಗಳಿಗೆ ಲಸಿಕೆ ಸರಬರಾಜು ಮಾಡಲಾಗಿದೆ. ದೇಶದಲ್ಲಿ 600 ಮಿಲಿಯನ್ ಡೋಸ್‌ ಲಸಿಕೆ ಉತ್ಪಾದಿಸಲಾಗಿದ್ದು, ಒಟ್ಟು 76 ದೇಶಗಳಿಗೆ 341 ಮಿಲಿಯನ್ ಡೋಸ್‌ಗಳನ್ನು ವಾಣಿಜ್ಯ ಆಧಾರದ ಮೇಲೆ ಸರಬರಾಜು ಮಾಡಲಾಗೊದೆ. ಸುಮಾರು 177 ಡೋಸ್‌ಗಳನ್ನು ಜಿಎವಿಐ ನ ಕೋವಾಕ್ಸ್‌ ಗೆ ಸರಬರಾಜು ಮಾಡಲಾಗಿದೆ. ಉಳಿದ 81 ಮಿಲಿಯನ್‌ ಉಚಿತ ಸರಬರಾಜು ಮಾಡಲಾಗಿದೆ.

ಆದರೆ ಕೊರೊನಾ ಎರಡನೇ ಡೋಸ್‌ ದೇಶವನ್ನು ಅಪ್ಪಳಿಸಿದ ಬಳಿಕ ದೇಶದಲ್ಲೇ ಲಸಿಕೆ ಕೊರತೆ ಕಾಣಿಸಿಕೊಂಡಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಆದರೆ ಭಾರತ ರಫ್ತು ನಿಷೇಧ ಮಾಡಿದೆ. ಭಾರತ ಲಸಿಕೆ ರಫ್ತು ನಿಷೇಧವು ಇತರ ದೇಶಗಳಲ್ಲಿ ಕೊರತೆಗೆ ಕಾರಣವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Global pharmaceutical company Wockhardt to Manufacture 500 Million Covid vaccine Doses a Year says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X