ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಸವಾರರಿಗೆ ಗುಡ್‌ನ್ಯೂಸ್: ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ವಿಸ್ತರಣೆ, ಫೆಬ್ರವರಿ 15ರವರೆಗೆ ಅವಕಾಶ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ವಾಹನ ಸವಾರರಿಗೆ ಇಲ್ಲಿದೆ ಗುಡ್‌ ನ್ಯೂಸ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ಅನ್ನು ಮತ್ತೆ ವಿಸ್ತರಿಸಿದ್ದು, ಫೆಬ್ರವರಿ 15ರವರೆಗೆ ಅವಕಾಶ ನೀಡಿದೆ.

ಈ ಹಿಂದೆ ಹೊಸ ವರ್ಷದ ಆರಂಭದಿಂದಲೇ ಅಂದರೆ ಜನವರಿ 1, 2021ರಿಂದ ದೇಶದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ (ಡಿ.24) ಪ್ರಕಟಿಸಿದರು. ಆದರೆ ಈಗ ಸ್ವಲ್ಪ ವಿನಾಯಿತಿ ನೀಡಲಾಗಿದ್ದು, ಫೆಬ್ರವರಿ 15ರವರೆಗೆ ಅವಕಾಶವನ್ನು ನೀಡಲಾಗಿದೆ.

10,904 ಕೋಟಿ ರೂ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ನಿತಿನ್ ಗಡ್ಕರಿ10,904 ಕೋಟಿ ರೂ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ನಿತಿನ್ ಗಡ್ಕರಿ

2017 ರ ಡಿಸೆಂಬರ್ 1 ರ ಮೊದಲು ಮಾರಾಟವಾದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಮೋಟಾರು ವಾಹನ ಕಾಯ್ದೆ 1989 ರ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ವಾಹನ ತಯಾರಕರು ಮತ್ತು ವಿತರಕರಿಗೆ ವಾಹನ ನೋಂದಣಿ ಸಮಯದಲ್ಲಿ ಫಾಸ್ಟ್‌ಟ್ಯಾಗ್‌ ನೀಡುವಂತೆ ಆದೇಶಿಸಿತ್ತು.

Deadline for use of FASTag extended till February 15, 2021

ಪ್ರಸ್ತುತ ಫಾಸ್ಟ್‌ಟ್ಯಾಗ್ ವ್ಯವಹಾರಗಳ ಪಾಲು ಶೇಕಡಾ 75-80 ರಷ್ಟು ಆಸುಪಾಸಿನಲ್ಲಿದೆ. ಫೆಬ್ರವರಿ 15ರಿಂದ ಶೇಕಡಾ 100ರಷ್ಟು ನಗದುರಹಿತ ಶುಲ್ಕ ಪಾವತಿಗೆ ಹೆದ್ದಾರಿ ಪ್ರಾಧಿಕಾರದಿಂದ ಅಗತ್ಯ ನಿಯಂತ್ರಣವನ್ನು ಪಡೆಯಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿರುವ ಹೇಳಿಕೆಯಲ್ಲಿ ಸಚಿವಾಲಯ ತಿಳಿಸಿದೆ.

ವಾಹನದಲ್ಲಿನ ಫಾಸ್ಟ್‌ಟ್ಯಾಗ್ 5 ವರ್ಷಗಳ ಮಾನ್ಯತೆಯನ್ನು ಹೊಂದಿದೆ, ಅದರ ನಂತರ ನೀವು ವಾಹನದಲ್ಲಿ ಹೊಸ ಫಾಸ್ಟ್‌ಟ್ಯಾಗ್ ಅನ್ನು ಹಾಕಬೇಕಾಗುತ್ತದೆ.

English summary
The road transport ministry has extended the deadline for 100% collection of toll charges on the National Highway (NH) network through FASTag Till February 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X