ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗಕ್ಕೆ ಕೊನೆಗೂ ಅನುಮತಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 17: ರಷ್ಯಾ ನಿರ್ಮಿತ ಸ್ಪುಟ್ನಿಕ್-5 ಲಸಿಕೆಯ ವ್ಯಾಪಕ ಪ್ರಯೋಗ ನಡೆಸಲು ಮೊದಲ ಪ್ರಸ್ತಾವಕ್ಕೆ ನಿರಾಕರಿಸಿದ್ದ ಭಾರತದ ಔಷಧ ನಿಯಂತ್ರಕ ಸಂಸ್ಥೆ, ಲಸಿಕೆಯ 2/3 ಕ್ಲಿನಿಕಲ್ ಮಾನವ ಪ್ರಯೋಗವನ್ನು ನಡೆಸಲು ಡಾ. ರೆಡ್ಡೀಸ್ ಲ್ಯಾಬೋರೇಟರಿಗೆ ಕೊನೆಗೂ ಅನುಮತಿ ನೀಡಿದೆ.

ಸ್ಪುಟ್ನಿಕ್ 5 ರಷ್ಯಾ ಅನುಮೋದನೆ ನೋಡಿರುವ ಜಗತ್ತಿನ ಮೊದಲ ಕೊರೊನಾ ವೈರಸ್ ಲಸಿಕೆ ಎನಿಸಿದೆ. 'ಇದು ಬಹು ಕೇಂದ್ರಿತ ಮತ್ತು ಯಾದೃಚ್ಛಿಕ ನಿಯಂತ್ರಿತ ಅಧ್ಯಯನವಾಗಿರಲಿದೆ. ಇದರಲ್ಲಿ ಸುರಕ್ಷತೆ ಮತ್ತು ಪ್ರತಿರಕ್ಷಕತೆಯನ್ನು ಒಳಗೊಂಡಿರುತ್ತದೆ' ಎಂದು ಡಾ. ರೆಡ್ಡೀಸ್ ಮತ್ತು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಜಂಟಿ ಹೇಳಿಕೆ ತಿಳಿಸಿದೆ.

ಮತ್ತೊಂದು ಕೊರೊನಾ ವೈರಸ್ ಲಸಿಕೆಗೆ ರಷ್ಯಾ ಅನುಮತಿಮತ್ತೊಂದು ಕೊರೊನಾ ವೈರಸ್ ಲಸಿಕೆಗೆ ರಷ್ಯಾ ಅನುಮತಿ

ರಷ್ಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗ ನಡೆದು ವ್ಯಾಪಕ ಪ್ರಯೋಗಕ್ಕೂ ಮುನ್ನವೇ ಲಸಿಕೆಯನ್ನು ನೋಂದಣಿ ಮಾಡಲಾಗಿತ್ತು. ಅದನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗ ಮಾಡುವ ಡಾ. ರೆಡ್ಡೀಸ್‌ನ ಆರಂಭದ ಪ್ರಸ್ತಾವವನ್ನು ಡಿಸಿಜಿಐ ನಿರಾಕರಿಸಿತ್ತು. ಪ್ರಸ್ತುತ ಸ್ಪುಟ್ನಿಕ್ ಲಸಿಕೆಯು ನೋಂದಣಿ ನಂತರದ ಮೂರನೇ ಹಂತದ ಪ್ರಯೋಗ ನಡೆಸುತ್ತಿದ್ದು, ಸುಮಾರು 40,000 ಸ್ವಯಂ ಸೇವಕರು ಪಾಲ್ಗೊಳ್ಳುತ್ತಿದ್ದಾರೆ.

ಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆ

DCGI Approves Dr Reddys To Conduct Russias Sputnik V Trial In India

Recommended Video

NEET Result 2020: Soyeb Aftab, NEET ತುಂಬಾ ಕಷ್ಟ | Oneindia Kannada

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ಪ್ರಯೋಗ ಮತ್ತು ಹಂಚಿಕೆ ಸಂಬಂಧ ಆರ್‌ಡಿಐಎಫ್ ಮತ್ತು ಡಾ. ರೆಡ್ಡೀಸ್ ಲ್ಯಾಬ್ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಒಪ್ಪಂದದ ಪ್ರಕಾರ ಭಾರತಕ್ಕೆ 100 ಮಿಲಿಯನ್ ಸ್ಪುಟ್ನಿಕ್ ಡೋಸ್‌ಗಳು ಸಿಗಲಿದೆ.

English summary
DCGI has approved Dr Reddy's lab to go with Sputnik V Covid-19 vaccine trial in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X