ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಭಾರತದಲ್ಲಿ 200 ವರ್ಷಗಳ ಕಾಲ ಆಳ್ವಿಕೆ ನಡೆಸಿತ್ತು: ತೀರಥ್ ಸಿಂಗ್

|
Google Oneindia Kannada News

ಡೆಹ್ರಾಡೂನ್, ಮಾರ್ಚ್ 22: ಉತ್ತರಾಖಂಡ್ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ನೀಡಿದ್ದ ಹರಿದ ಜೀನ್ಸ್ ವಿವಾದಾತ್ಮಕ ಹೇಳಿಕೆ ಬಳಿಕ ಮತ್ತೊಂದು ಹೇಳಿಕೆ ಸುದ್ದಿಮಾಡುತ್ತಿದೆ.

ಅಮೆರಿಕವು ಭಾರತದಲ್ಲಿ 200 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಕ್ಕಾಗಿ ಇಂಗ್ಲೆಂಡ್ ಬದಲು ಅಮೆರಿಕವನ್ನು ದೂರಿದ್ದಾರೆ. ನಮ್ಮನ್ನು 200 ವರ್ಷಗಳ ಕಾಲ ಗುಲಾಮರನ್ನಾಗಿಸಿಕೊಂಡಿದ್ದ ಅಮೆರಿಕ ಈಗ ವಿಶ್ವವನ್ನೇ ಆಳುತ್ತಿದೆ, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೆಣಗಾಡುತ್ತಿದೆ ಎಂದು ರಾವತ್ ಹೇಳಿದ್ದಾರೆ.

ಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆಅರೆಬರೆ ಹರಿದ ಜೀನ್ಸ್‌ ತೊಟ್ಟ ಮಹಿಳೆ ಏನು ಸಂದೇಶ ನೀಡಬಲ್ಲಳು?; ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

ಇಂತಹ ಪರಿಸ್ಥಿತಿಯಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಬದಲು ಬೇರೆ ಯಾರಾದರೂ ಪ್ರಧಾನಿಯಾಗಿದ್ದರೆ ದೇಶದ ಸ್ಥಿತಿ ಏನಾಗುತ್ತಿತ್ತೋ, ನಮ್ಮ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಿತ್ತು ಎಂದರು.

Days After Ripped Jeans Remark, Uttarakhand CM Now Says America Enslaved Us For 200 Years

ನಾವು ಅವರ ಸಲಹೆ ಪಾಲನೆ ಮಾಡಿಲ್ಲ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಲವು ವಿಚಾರಗಳಲ್ಲಿ ಅವರ ಸಲಹೆಗಳನ್ನು ಕೆಲವು ಜನರು ಮಾತ್ರ ಪಾಲಿಸಿದ್ದಾರೆ.

ಕೊರೊನಾ ಪ್ರಕರಣಗಳ ನಿರ್ವಹಣೆ ವಿಚಾರದಲ್ಲಿ ಭಾರತವನ್ನು ಅಮೆರಿಕ ಜತೆಗೆ ಹೋಲಿಕೆ ಮಾಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಕೊರೊನಾ ಪಿಡುಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದೆ. ಅಮೆರಿಕ ಪರದಾಡುತ್ತಿದೆ ಎಂದರು.

ಈ ವಾರದ ಆರಂಭದಲ್ಲಿ ತೀರಥ್ ಸಿಂಗ್ ಅವರು ಹರಿದಿ ಜೀನ್ಸ್ ಬಗ್ಗೆ ಆಕ್ಷೇಪಕಾರಿ ಹೇಳಿಕೆ ನಿಡಿದ್ದರು. ಹರಿದ ಜೀನ್ಸ್ ಧರಿಸಿದ ಮಹಿಳೆಯೊಬ್ಬರು ಸರ್ಕಾರೇತರ ಸಂಸ್ಥೆ ನಡೆಸುವುದನ್ನು ಕಂಡು ಬೇಸರವಾಯಿತು, ಆಕೆ ಸಮಾಜಕ್ಕೆ ಅದೆಂಥಾ ಮಾದರಿ ನೀಡುತ್ತಿರಬಹುದು ಎಂದು ಲೇವಡಿ ಮಾಡಿದ್ದರು.

ಈ ಮಹಿಳೆ ಸಮಾಜದ ಮಧ್ಯೆ ನಿಂತು ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ?, ಸಮಾಜಕ್ಕೆ ಮತ್ತು ನಮ್ಮ ಮಕ್ಕಳಿಗೆ ಈಕೆ ಎಂಥಾ ಸಂದೇಶ ನೀಡುತ್ತಿರಬಹುದು, ಮನೆಯಿಂದಲೇ ಎಲ್ಲವೂ ಶುರುವಾಗುತ್ತದೆ. ನಾವು ಏನು ಮಾಡುತ್ತೀವೋ ನಮ್ಮ ಮಕ್ಕಳು ಕೂಡ ಅದನ್ನೇ ಕಲಿಯುತ್ತಾರೆ ಎಂದು ಹೇಳಿದ್ದರು.

English summary
Still recovering from the backlash after his remarks on women wearing ripped jeans, newly appointed Uttarakhand Chief Minister Tirath Singh Rawat on Sunday made another goof-up as he said it was America that enslaved us for 200 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X