ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಯೋಧನಿಗೆ ಪುಟ್ಟ ಮಗಳ ಭಾವಪೂರ್ಣ ಬಾಷ್ಪಾಂಜಲಿ

|
Google Oneindia Kannada News

ಪುಣೆ, ಮೇ 22: ಉಗ್ರರ ವಿರುದ್ಧದ ಹೋರಾಟದಲ್ಲಿ ಮಡಿದ ವೀರಯೋಧನ ಮಗಳು ತಂದೆಯ ಮೃತದೇಹಕ್ಕೆ ಪುಷ್ಪನಮನ ಅರ್ಪಿಸಿ ದುಃಖಿಸುತ್ತಿರುವ ಮನಕಲಕುವ ಚಿತ್ರ ಜನರನ್ನು ಭಾವುಕರನ್ನಾಗಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಏಪ್ರಿಲ್ 10ರಂದು ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಯ್ಕ್ ದೀಪಕ್ ನೈನ್ವಾಲ್ ಅವರ ದೇಹಕ್ಕೆ ಎರಡು ಗುಂಡುಗಳು ಹೊಕ್ಕಿದ್ದರಿಂದ ತೀವ್ರ ಗಾಯಗೊಂಡಿದ್ದರು. ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಮೃತಪಟ್ಟಿದ್ದರು.

ಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವುಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವು

ತಂದೆಯ ಮೃಹದೇಹಕ್ಕೆ ಬಾಲಕಿ ಪುಷ್ಪನಮನ ಸಲ್ಲಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಚಿತ್ರ ನೋಡಿದವರು ಭಾವುಕರಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

daughter of jawan deepak nainwal pays emotional tribute to her father

ಉಗ್ರರ ಅಸ್ತಿತ್ವದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಖುದ್ವಾನಿ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆ ವೇಳೆ ಉಗ್ರರ ಗುಂಡಿಗೆ ಒಬ್ಬ ಯೋಧ ಮತ್ತು ಮೂವರು ನಾಗರಿಕರು ಅಂದು ಬಲಿಯಾಗಿದ್ದರು.

LoC ದಾಟಿ 8 ತಿಂಗಳ ಮಗುವನ್ನು ಕೊಂದ ಪಾಪಿ ಪಾಕ್LoC ದಾಟಿ 8 ತಿಂಗಳ ಮಗುವನ್ನು ಕೊಂದ ಪಾಪಿ ಪಾಕ್

ಮಗಳ ವಂದನೆ

ಯೋಧ ದೀಪಕ್ ನೈನ್ವಾಲ್ ಅವರ ಮಗಳು ತನ್ನ ತಂದೆಗೆ ಅಂತಿಮ ನಮನ ಸಲ್ಲಿಸಿದಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ತಿಂಗಳು ನಡೆದ ಉಗ್ರರ ವಿರುದ್ಧದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಅವರು ಮೃತಪಟ್ಟರು ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

'ಧೈರ್ಯವಾಗಿರು, ನಾವಿದ್ದೇವೆ'

ಈ ಮಗುವಿನ ಕಣ್ಣೀರಿನ ಹಿಂದಿನ ನೋವನ್ನು ಯಾರಾದರೂ ಅರ್ಥಮಾಡಿಕೊಳ್ಳಬಲ್ಲರು. ಧೈರ್ಯವಾಗಿರುವ ನಾವು ನಿನ್ನೊಂದಿಗೆ ಇದ್ದೇವೆ ಎಂದು ನಾನು ನಿನಗೆ ಸಂದೇಶ ನೀಡುತ್ತಿದ್ದೇನೆ. ನೀನು ಜವಾನ್ ದೀಪ್ ನೈನ್ವಾಲ್ ಅವರ ಮಗಳು ಮಾತ್ರವಲ್ಲ, ಇಡೀ ದೇಶದ ಮಗಳು ಎಂದು ರವಿ ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
Army jawan Deepak Nainwal who had sustained injuries in an operation against terrorists on April 10 died at command hospital in Pune on Sunday. Photo of his daughter paying an emotional tribute goes viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X