• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ತೆಗೆ ನೀಡುವ ಚಹಾದಲ್ಲಿ ಸೊಸೆ ಏನು ಮಾಡುತ್ತಿದ್ದಳು ಗೊತ್ತಾ?

By Prasad
|

ಇಂದೋರ್, ಏ. 4 : ಸೊಸೆಯಂದಿರನ್ನು ಸಂಶಯದಿಂದ ನೋಡುವ ಅತ್ತೆಂಮ್ಮಂದಿರಿಗೆ ಈ ಪ್ರಕರಣ ಒಂದು ಎಚ್ಚರಿಕೆಯ ಗಂಟೆ. ಕೆಂಡ ಕಾರುವ ಅತ್ತೆಯ ವಿರುದ್ಧ ಸೊಸೆ ಹೀಗೂ ಸೇಡು ತೀರಿಸಿಕೊಳ್ಳಬಹುದೆ? ಇಂಥಾ ಖತರ್ನಾಕ್ ಸೊಸೆಯಂದಿರೂ ಇರುತ್ತಾರಾ? ಎಂಬ ಚಿಂತನೆಗೆ ಹಚ್ಚಿದೆ ಈ ಘಟನೆ.

ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಲ್ಲೂ ಇತ್ತು, ಇಂದೂ ಇದೆ, ಮುಂದೂ ಇರುತ್ತದೆ. ಎಲ್ಲೋ ಒಂದಿಷ್ಟು ಕಡೆಗಳಲ್ಲಿ, "ಅತ್ತೆ ನನ್ನನ್ನು ಮಗಳಂತೆ ನೋಡಿಕೊಳ್ಳುತ್ತಾರೆ, ಸೊಸೆ ನನ್ನನ್ನು ಅಮ್ಮನಂತೆ ಪೂಜಿಸುತ್ತಾಳೆ" ಎಂಬೆಲ್ಲ ಹೇಳುವಂಥ ಎಕ್ಸೆಪ್ಶನಲ್ ಕೇಸುಗಳೂ ಇರುತ್ತವೆ. ಆದರೆ, ಅತ್ತೆಯನ್ನು ಈಪರಿ ದ್ವೇಷಿಸುವವರು, ಹೀಗೆ ಸೇಡು ತೀರಿಸಿಕೊಳ್ಳುವವರನ್ನು ಎಲ್ಲಾದರೂ ನೋಡಿದ್ದೀರಾ? ಕಥೆ ಏನಂತ ಮುಂದೆ ಓದಿ. [ಭಾರತದ ರಾಷ್ಟ್ರೀಯ ಪಾನೀಯವಾಗಿ ಟೀ]

ಸಿಂಪಲ್ಲಾಗಿ ಹೇಳಬೇಕೆಂದರೆ, ಅತ್ತೆಯ ವಿರುದ್ಧ ಕೆಂಡ ಅಲ್ಲ, ಬೆಂಕಿ ಕಾರುತ್ತಿದ್ದ ಸೊಸೆ ಏನು ಮಾಡುತ್ತಿದ್ದಳು ಗೊತ್ತಾ? ಅತ್ತೆಗೆ ತಯಾರಿಸಿ ಕೊಡುವ ಚಹಾದಲ್ಲಿ ಸೊಸೆ ಮೂತ್ರ ವಿಸರ್ಜನೆ ಮಾಡುತ್ತಿದ್ದಳು. ಇದನ್ನು ಒಂದು ವರ್ಷದಿಂದಲೂ ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಳು. ಸೊಸೆ ಪ್ರೀತಿಯಿಂದ ಕೊಡುತ್ತಿದ್ದಾಳಲ್ಲ ಅಂತ ಅತ್ತೆ ಅಷ್ಟೇ ಪ್ರೀತಿಯಿಂದ ಅದೇ ಚಹಾವನ್ನು ಸೊರ್ ಸೊರ್ ಅಂತ ಸೇವಿಸುತ್ತಿದ್ದಳು, ಪಾಪ!

ಸೊಸೆಯ ಚಾಲಾಕಿತನವನ್ನು ನಿಜಕ್ಕೂ ಮೆಚ್ಚಲೇಬೇಕು. ಆದರೂ ಎಷ್ಟು ದಿನ ಅಂತ ಹೀಗೆ ಮಾಡಿಯಾಳು? ಒಂದು ಫೈನ್ ಡೇ ಅತ್ತೆಯ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕೇಬಿದ್ದಳಲ್ಲ ಚಾಲಾಕಿ ಸೊಸೆ. ಯಾಕ್ ಥೂ ಅಂತ ಸೀರೆಯ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡವಳೇ ಅತ್ತೆ ಸೊಸೆಯ ವಿರುದ್ಧ ತಿರುಗಿಬಿದ್ದಳು. ಇನ್ನೇನು ತಾನೆ ಮಾಡಿಯಾಳು?

ಅಂದ ಹಾಗೆ ಆ ಸೊಸೆಯ ಹೆಸರು ರೇಖಾ ನಾಗವಂಶಿ, ವಯಸ್ಸು 30. ಗಂಡನೊಂದಿಗೆ ಜಗಳವಾಡಿ, ಅತ್ತೆ ಮಾವನೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ರೇಖಾ ಮನೆಬಿಟ್ಟು, ನೀವೂ ಬೇಡ ನಿಮ್ಮ ಸಂಸಾರವೂ ಬೇಡ ಅಂತ ತವರುಮನೆ ಸೇರಿಕೊಂಡಿದ್ದಳು. ಆದರೆ, ನಾಲ್ಕು ವರ್ಷದ ಮಗನಿಗೋಸ್ಕರವಾದರೂ ಬಾ ಎಂದು ಗಂಡ ಗೋಗರೆದಿದ್ದರಿಂದ ಮನೆಗೆ ವಾಪಸ್ಸು ಬಂದಿದ್ದಳು. [ಗಂಡ ಹೆಂಡತಿ ಜೋಕ್ಸ್]

ಮಹಾ ಘಟವಾಣಿಯಾಗಿದ್ದ ಸೊಸೆ ಸುಮ್ಮನಾದರೂ ವಾಪಸ್ ಬಂದಿದ್ದಳಾ? ಕೆಲವೊಂದು ಕಂಡಿಷನ್ ಹಾಕಿದ್ದಳು. ಅವಾದರೂ ಎಂಥವು ಅಂತೀರಿ? ಗಂಡ ಸ್ವತಃ ಆಕೆಯ ಕಾಲನ್ನು ಒತ್ತಬೇಕು, ಅಡುಗೆ ಮಾಡಬೇಕು ಮತ್ತು ಪಾತ್ರೆಗಳನ್ನೂ ತೊಳೆಯಬೇಕು. ಹೆಂಡತಿಯನ್ನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದ ಗಂಡ ಗೌಲೆತ್ತಿನಂತೆ ಎಲ್ಲ ನಿರ್ಬಂಧಗಳಿಗೂ ತಲೆಯಾಡಿಸಿದ್ದ. ಅತ್ತೆ ಮಾತ್ರ ಓಕೆ ಅಂದಿರಲಿಲ್ಲ! [ಮತ್ತೆ ಇದೆಂಥಾ ವಿಚಿತ್ರ ಪ್ರಶ್ನೆರೀ ನಿಮ್ದು!]

ಓಹೋಹೋಹ ನನಗೇ ಬತ್ತಿ ಇಡ್ತೀಯಾ, ಮಾಡ್ತೀನಿ ತಡಿ ಅಂತ ಸೊಸೆ ತನ್ನ ದೈನಂದಿನ ಬೆಳಗಿನ 'ಕೆಲಸ' ಶುರು ಹಚ್ಚಿಕೊಂಡಿದ್ದಳು. ಅತ್ತೆಗೆ ಪ್ರೀತಿಯಿಂದ ಚಹಾ ನೀಡುತ್ತಿದ್ದಳು, ಅತ್ತೆಯೂ ಅಷ್ಟೇ ಪ್ರೀತಿಯಿಂದ ಸೇವಿಸುತ್ತಿದ್ದಳು, ಅಸಲಿಯತ್ತು ಏನೆಂದು ತಿಳಿಯುವವರೆಗೆ! ಅತ್ತೆಯೂ ಒಂದು ಕಾಲದಲ್ಲಿ ಸೊಸೆಯೇ ಆಗಿದ್ದವಳು ತಾನೆ. ಚಹಾ ಹೀರುತ್ತಿದ್ದ ನಾಲಿಗೆಗೆ ಒಂದು ದಿನ ಡೌಟು ಬಂದಿದೆ, ಸೊಸೆಯನ್ನು ಹಿಡಿದುಬಿಟ್ಟಿದ್ದಾಳೆ.

ಯಾಕೆ ಹೀಗೆ ಮಾಡ್ತಿದ್ದೀಯಾ ಅಂತ ಕೇಳಿದ್ದಕ್ಕೆ #MyChoice ಅಂದಿದ್ದಾಳೆ ಸೊಸೆ. "ವರ್ಷದಿಂದಲೂ ಚಹಾದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ ಏನೂ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ, ಆಕೆಗೆ ಶಿಕ್ಷಾಯಾಗಲೇಬೇಕು, ನಮಗೆ ನ್ಯಾಯ ಸಿಗಬೇಕು" ಅಂತ ಅತ್ತೆ ಬುಸುಗುಡುತ್ತಿದ್ದಾಳೆ. [ಮೋದಿ ಪ್ರಧಾನಿ: ಟೀ ಮಾರುವವರು ಏನಂತಾರೆ?]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daughter-in-law from Indore has been caught red handed by mother-in-law while urinating in tea to be given to her. She used to do this for a year to take revenge against quarreling mother-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more