ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶದ ಚುನಾವಣೆ ಯಾವಾಗ?

|
Google Oneindia Kannada News

ನವದೆಹಲಿ, ಫೆಬ್ರವರಿ 11: ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕಗಳನ್ನು ಫೆಬ್ರವರಿ 15ರ ನಂತರ ಪ್ರಕಟಿಸುವ ಸಾಧ್ಯತೆಯಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಐದು ರಾಜ್ಯಗಳ ಪ್ರವಾಸ ನಿರತರಾಗಿದ್ದು, ಚುನಾವಣಾ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.

ಬಿಜೆಪಿ ಸೇರಲಿರುವ ಸಿನಿ ದಿಗ್ಗಜ ಶಿವಾಜಿ ಗಣೇಶನ್ ಪುತ್ರ ರಾಮ್ ಬಿಜೆಪಿ ಸೇರಲಿರುವ ಸಿನಿ ದಿಗ್ಗಜ ಶಿವಾಜಿ ಗಣೇಶನ್ ಪುತ್ರ ರಾಮ್

ಫೆಬ್ರವರಿ 15ಕ್ಕೆ ಪ್ರವಾಸ ಮುಗಿಯಲಿದ್ದು, 4 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶದ ಚುನಾವಣೆ ದಿನಾಂಕ ಘೋಷಿಸಲಾಗುತ್ತದೆ. ಮೂಲಗಳ ಪ್ರಕಾರ ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ 6 ರಿಂದ 8 ಹಾಗೂ ಅಸ್ಸಾಂನಲ್ಲಿ 2 ರಿಂದ 3 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ.

Dates for Bengal, Tamil Nadu and Kerala polls likely after February 15

ಸಿಬಿಎಸ್ ಇ 10 ಹಾಗೂ 12ನೇ ತರಗತಿ ಪರೀಕ್ಷೆ ಮುನ್ನ ಮೇ 1ರೊಳಗೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಗಿಸಲು ಆಯೋಗ ಸಿದ್ಧತೆ ನಡೆಸಿದೆ. ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ, ರಾಜೀವ್ ಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಫೆ 10 ರಿಂದ 15ರ ತನಕ ತಮಿಳುನಾಡು, ಕೇರಳ, ಪುದುಚೇರಿ ಪ್ರವಾಸ ಕೈಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಪ್ರವಾಸ ಮುಕ್ತಾಯವಾಗಿದೆ. ಮಾರ್ಚ್ -ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲು ಆಯೋಗ ಸಿದ್ಧವಾಗುತ್ತಿದೆ. ಏಪ್ರಿಲ್ ಅಂತ್ಯಕ್ಕೆ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವುದು ಆಯೋಗ ಉದ್ದೇಶವಾಗಿದೆ.

English summary
The schedule for the state elections in West Bengal, Tamil Nadu, Kerala, Assam and Puducherry is likely to be announced after February 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X