ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ MERCK ಕಂಪನಿಯ ಕೋವಿಡ್ ಮಾತ್ರೆ

|
Google Oneindia Kannada News

ನವದೆಹಲಿ, ನವೆಂಬರ್ 13: ಶೀಘ್ರದಲ್ಲೇ ಅಮೆರಿಕದ ಮೆರ್ಕ್ ಕಂಪನಿಯ ಕೋವಿಡ್ ಮಾತ್ರೆ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಭಿವೃದ್ಧಿಪಡಿಸಿದ ಕೋವಿಡ್-19 ಮಾತ್ರೆ ಮುಂದಿನ ವಾರಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಸಂಪೂರ್ಣ ಚಿಕಿತ್ಸೆಗೆ 500ರಿಂದ ಸಾವಿರ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಮಾಲ್ನುಫಿರಾವಿರ್ ಎಂಬ ಬ್ರಾಡ್ ಸ್ಪೆಕ್ಟ್ರಮ್ ಆಂಟಿವೈರಲ್ ಔಷಧಿ , ಅದರ ಆರಂಭಿಕ ಹಂತಗಳಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಪ್ರಯೋಗಗಳಲ್ಲಿ ಭರವಸೆಯನ್ನು ತೋರಿಸಿದೆ.ಕಳೆದ ವಾರ, ಇಂಗ್ಲೆಂಡ್ ಈ ಡ್ರಗ್ ಗೆ ಅನುಮತಿ ನೀಡುವ ಮೂಲಕ ವಿಶ್ವದಲ್ಲಿಯೇ ಮೊದಲ ದೇಶ ಎನಿಸಿಕೊಂಡಿತು.

ಕೋವಿಡ್‌ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಯುಕೆಕೋವಿಡ್‌ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಯುಕೆ

ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ 5 ದಿನಗಳ ಒಳಗೆ ಬಳಕೆ ಮಾಡಬಹುದೆಂದು ಶಿಫಾರಸು ಮಾಡಲಾಗಿದೆ.

Data Submitted, DCGI Nod for Mercks Molnupiravir Pill May Come Soon

ಈ ಮೂಲಕ ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೋವಿಡ್-19 ಬಾಯಿಯಲ್ಲಿ ಹಾಕಿಕೊಳ್ಳುವ ಮಾತ್ರೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಮಾತ್ರೆಗೆ 25ರಿಂದ 50 ರೂಪಾಯಿಯನ್ನು ನಿಗದಿಪಡಿಸುವ ಸಾಧ್ಯತೆಯಿದೆ. 5 ದಿನಗಳ ಚಿಕಿತ್ಸಾ ದಿನಗಳಲ್ಲಿ ಕೋವಿಡ್-19 ರೋಗಿಯೊಬ್ಬ 15ರಿಂದ 20 ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂದರೆ ಒಟ್ಟಾರೆ ಚಿಕಿತ್ಸೆಗೆ 500ರಿಂದ ಸಾವಿರ ರೂಪಾಯಿಗಳನ್ನು ರೋಗಿ ಭರಿಸಬೇಕಾಗಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಭಾರತದಲ್ಲಿ ಈ ಮಾತ್ರೆ ತಯಾರಿಕೆಗೆ ಅನುಮತಿ ಪಡೆದಿರುವ ಕಂಪೆನಿ ಸನ್ ಫಾರ್ಮ, ಸಂಸ್ಥೆಯು ಇದನ್ನು ಜನರಿಗೆ ಕೈಗೆಟಕುವ ದರದಲ್ಲಿ ಮೊಲ್ಕ್ಸ್ವಿರ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಸನ್ ಫಾರ್ಮಾ, ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ನ್ಯಾಟ್ಕೋ, ಹೆಟೆರೊ ಫಾರ್ಮಾ ಮತ್ತು ಅರಬಿಂದೋ ಫಾರ್ಮಾ ಸೇರಿದಂತೆ ಎಂಟು ಕಂಪನಿಗಳು ಔಷಧದ ಜೆನೆರಿಕ್ ಆವೃತ್ತಿಗಳನ್ನು ಉತ್ಪಾದಿಸಲು ಸ್ವಯಂಪ್ರೇರಿತ ಪರವಾನಗಿ ಒಪ್ಪಂದಗಳಿಗೆ ಸಹಿ ಹಾಕಿವೆ. ಈಗ ಆರ್‌ಇಯುಗೆ ಅರ್ಜಿ ಸಲ್ಲಿಸಿದ್ದಾರೆ.

ಮುಂದಿನ ವಾರ ಈ ಔಷಧಿಯ ನಿರ್ಬಂಧಿತ ತುರ್ತುಬಳಕೆಗೆ ಅನುಮತಿಯನ್ನು ಕೇಂದ್ರದ ಪ್ರಾಧಿಕಾರ ನೀಡಬಹುದು ಎಂದು ಕೇಂದ್ರ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ತಿಳಿಸಿದೆ. ಭಾರತದಲ್ಲಿ ಸುಮಾರು 700 ರೋಗಿಗಳ ಅಂಕಿಅಂಶಗಳನ್ನು ಅಂತಿಮ ಹಂತದಲ್ಲಿ ಪರಿಶೀಲಿಸಲು ಮುಂದಾಗಿದೆ.

ಮಾಲ್ನುಫಿರಾವಿರ್, ಕೋವಿಡ್ 19 ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಮೊದಲು ಅಭಿವೃದ್ಧಿಪಡಿಸಲಾದ ಮೌಖಿಕ ಔಷಧವಾಗಿದೆ. ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾದ 775 ರೋಗಿಗಳಿಗೆ ಮಾಲ್ನುಫಿರಾವಿರ್ ಮಾತ್ರೆ ನೀಡಲಾಗಿತ್ತು. ಇವರಲ್ಲಿ ಶೇ 7.3ರಷ್ಟು ಮಂದಿ ಮಾತ್ರವೇ ಆಸ್ಪತ್ರೆಗೆ ದಾಖಲಾಗುವಷ್ಟು ಕೋವಿಡ್ ತೀವ್ರವಾಗಿತ್ತು. ಆದರೆ ಇವರಲ್ಲಿ ಯಾರಿಗೂ ಮಾರಣಾಂತಿಕ ಸೋಂಕು ಉಂಟಾಗಿರಲಿಲ್ಲ ಎಂದು ಆರಂಭಿಕ ಪ್ರಯೋಗಗಳ ವರದಿ ತಿಳಿಸಿದೆ.

ಫೈಜರ್‌ನ ಕ್ಲಿನಿಕಲ್ ಪ್ರಯೋಗದಲ್ಲಿ ಪಾಕ್ಸ್ಲೋವಿಡ್ ಮಾತ್ರೆಯು ಶೇ 89ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ತಿಳಿಸಿದೆ. ಲಘು ಮತ್ತು ಮಧ್ಯಮ ಪ್ರಮಾಣದ ಕೋವಿಡ್ 19 ಲಕ್ಷಣಗಳಿರುವ 1,219 ರೋಗಿಗಳಿಗೆ ಈ ಮಾತ್ರೆ ನೀಡಲಾಗಿದೆ. ಇದರಲ್ಲಿ ಆಸ್ಪತ್ರೆಗೆ ದಾಖಲಾಗುವುದು ಹಾಗೂ ಸಾವಿನ ಸಾಧ್ಯತೆಗಳು ಶೇ 89ರಷ್ಟು ಕಡಿಮೆಯಾಗಿದೆ. ಪಾಕ್ಸ್ಲೋವಿಡ್ ಪಡೆದುಕೊಂಡ ಶೇ 0.8ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 28 ದಿನಗಳ ಚಿಕಿತ್ಸೆ ಬಳಿಕ ಯಾರೂ ಮೃತಪಟ್ಟಿಲ್ಲ.

English summary
With data on over 700 patients submitted, the emergency-use approval to American pharmaceutical giant Merck’s anti-Covid pill Molnupiravir is likely to be given soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X