ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾದಿಂದ ದೀಪಾವಳಿ ಹಬ್ಬದ ಸಾಲು, 11 ದಿನ ಬ್ಯಾಂಕ್ ಬಂದ್!

|
Google Oneindia Kannada News

ನವದೆಹಲಿ, ಸೆ. 28: ಭಾದ್ರಪದ, ಆಶ್ವಯುಜ ಮಾಸದ ಹಬ್ಬ ಹರಿದಿನಗಳಿರುವುದರಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಸಿಗಲಿದೆ. ದಸರಾ ಹಬ್ಬದಿಂದ ದೀಪಾವಳಿ ತನಕ ಬ್ಯಾಂಕ್ ರಜೆ ಬಗ್ಗೆ ಗ್ರಾಹಕರು ತಿಳಿದುಕೊಳ್ಳುವುದು ಒಳ್ಳೆಯದು. ಇದಲ್ಲದೆ ಭಾರತದ ಬ್ಯಾಂಕ್ ಗಳಿಗೆ ಭಾನುವಾರ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಪ್ರತಿ ತಿಂಗಳು ರಜೆ ಇರುತ್ತದೆ.

ಸೆಪ್ಟೆಂಬರ್ 29ರಿಂದ ನವರಾತ್ರಿ ಶುರುವಾಗಲಿದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಒಟ್ಟಾರೆ 11 ದಿನ ರಜೆ ಸಿಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಮಾಡಿರುವ ರಜೆ ಪಟ್ಟಿಯಲ್ಲೇ 11 ದಿನ ರಜೆ ಇದೆ. ಇದಲ್ಲದೆ, ಸಾಂದರ್ಭಿಕ ರಜೆ, ಬ್ಯಾಂಕ್ ಉದ್ಯೋಗಿಗಳ ರಜೆ, ಆಯಾ ರಾಜ್ಯಕ್ಕೆ ಅನುಗುಣವಾಗಿ ರಜೆ ಎಲ್ಲವೂ ಸೇರಿಸಿದರೆ, ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕುಗಳು ಕಾರ್ಯ ನಿರ್ವಹಿಸುವ ದಿನಗಳು 15 ಮೀರುವುದಿಲ್ಲ.

ಅಕ್ಟೋಬರ್ ತಿಂಗಳುಗಳಲ್ಲಿ ಬ್ಯಾಂಕಿಗೆ ತೆರಳುವ ಮುನ್ನ ರಜಾ ದಿನಗಳ ಪಟ್ಟಿ ನೋಡಿ. ಭಾನುವಾರ ಹಾಗೂ ಶನಿವಾರದ ರಜೆ ಪಟ್ಟಿ ನೋಡಿ, ಬ್ಯಾಂಕಿಗೆ ತೆರಳುವುದು ಉತ್ತಮ, ತುರ್ತು ವಹಿವಾಟಿದ್ದರೆ ಮುಂಚಿತವಾಗಿಯೇ ಮಾಡಿಕೊಳ್ಳುವುದು ಸೂಕ್ತ.

Dasara to Deepavali Banks Holidays list in October

* ಅಕ್ಟೋಬರ್ 2(ಬುಧವಾರ) ಗಾಂಧಿ ಜಯಂತಿ,
* ಅಕ್ಟೋಬರ್ 6 (ಭಾನುವಾರ)
* ಅಕ್ಟೋಬರ್ 7 (ಸೋಮವಾರ) (ಮಹಾನವಮಿ/ಆಯುಧ ಪೂಜೆ)
* ಅಕ್ಟೋಬರ್ 8 (ಮಂಗಳವಾರ) ವಿಜಯದಶಮಿ 3 ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ.
* ಅಕ್ಟೋಬರ್ 12 ಎರಡನೇ ಶನಿವಾರ ರಜೆ
* ಅಕ್ಟೋಬರ್ 13 ಭಾನುವಾರ
* ಅಕ್ಟೋಬರ್ 20 ಭಾನುವಾರ.

* ಅಕ್ಟೋಬರ್ 26 ನಾಲ್ಕನೇ ಶನಿವಾರ
* ಅಕ್ಟೋಬರ್ 27(ಭಾನುವಾರ) ಭಾನುವಾರ ಪ್ಲಸ್ ದೀಪಾವಳಿ

* ಅಕ್ಟೋಬರ್ 28 ಕೆಲವು ರಾಜ್ಯಗಳಿಗೆ ಗೋವರ್ಧನ ಪೂಜೆಗೆಂದು ರಜೆ ಇದೆ.
* ಅಕ್ಟೋಬರ್ 29 ರಂದು ಬಲಿಪಾಡ್ಯಮಿ, ಭೈಯಾ ದೂಜ್ ಬ್ಯಾಂಕ್ ರಜೆ

ಇದಲ್ಲದೆ ನವೆಂಬರ್ 01ರಂದು (ಶುಕ್ರವಾರ) ಕನ್ನಡ ರಾಜ್ಯೋತ್ಸವ ಬರಲಿದ್ದು, ರಜೆ ಪರ್ವ ಮುಂದುವರೆಯಲಿದೆ.

English summary
Banks to remain closed on the occasion of Deepawali, Dasara and other festivals or national event in the month of October. Bank Holidays 2019: Indian banks are closed on Sundays every week and second and fourth Saturdays of every month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X