ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಡ ಕವಿದ ಬಾನು,ಇಣುಕುವ ಸೂರ್ಯ, ಪಕ್ಷಿಯ ಸ್ವಚ್ಛಂದ ಹಾರಾಟ

By Nayana
|
Google Oneindia Kannada News

ಬೆಂಗಳೂರು, ಜು.6: ಈ ಬಾರಿಯ ಮುಂಗಾರು ದೇಶಾದ್ಯಂತ ಉತ್ತಮ ಮಳೆಯನ್ನು ತಂದಿದೆ. ದೆಹಲಿ, ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯ ಜತೆಗೆ ಆ ಮೋಡಗಳನ್ನು ನೋಡುವುದೇ ಒಂದು ರೀತಿಯ ಸೊಗಸು, ಸುತ್ತಲೂ ಮೋಡ ಅದರ ಮಧ್ಯೆ ಎಲ್ಲೋ ಸಂದಿಯಿಂದ ಇಣುಕಿ ನೋಡುವ ಸೂರ್ಯ, ಹಕ್ಕಿಗಳ ಹಾರಾಟ ಎಲ್ಲವೂ ಚೆಂದ.

ಇನ್ನು ಇದರ ಮಧ್ಯೆ ಮಳೆಯಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ, ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲವೂ ಸಮುದ್ರದಂತೆ ಕಾಣುತ್ತಿದೆ.ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮೆಂಚಿ ನದಿ ತುಂಬಿ ಹರಿಯುತ್ತಿದೆ. ಭೋಪಾಲ್‌, ಕೊಲ್ಕತ್ತ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಭಾರಿ ಮಳೆಯಾಗುತ್ತಿದೆ.

ಕರ್ನಾಟಕ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ ಕರ್ನಾಟಕ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ಇನ್ನು ಭಿರ್ಭುಮ್‌ನಲ್ಲಿ 164ನೇ ಹುಲ್‌ ಉತ್ಸವದ ಪ್ರಯುಕ್ತ ಅಲ್ಲಿನ ನಿವಾಸಿಗಳು ಗೋಪಾಲ್‌ನಗರದ ತುಂಬಾ ಮೆರವಣಿಗೆ ನಡೆಸಿದರು. ದೆಹಲಿಯ ಲಜ್‌ಪತ್‌ ನಗರದ ಬಳಿ ಮೆಟ್ರೋದ ಬೌಂಡರಿ ವಾಲ್‌ ಕುಸಿದು ಕುಸಿದಿರುವ ಪರಿಣಾಮ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಭಾರಿ ಮಳೆಯಿಂದಾಗಿ ಬಂಡರಿ ವಾಲ್ ಕುಸಿದಿದೆ ಎಂದು ತಿಳಿದುಬಂದಿದೆ.

ಆಗಸದಲ್ಲಿ ಮೋಡಗಳೊಂದಿಗೆ ಹಕ್ಕಿಯ ಒಡನಾಟ

ಆಗಸದಲ್ಲಿ ಮೋಡಗಳೊಂದಿಗೆ ಹಕ್ಕಿಯ ಒಡನಾಟ

ದೆಹಲಿಯಲ್ಲಿ ಕಳೆದ ಎರಡು ವಾರಗಳಿಂದ ಭಾರಿ ಮಳೆ ಸುರಿಯುತ್ತಿದೆ. ಇದರ ಮಧ್ಯೆ ಕವಿದ ಮೋಡಗಳ ನಡುವೆ ಇಣುಕುವ ಸೂರ್ಯನ ಮಧ್ಯದಲ್ಲಿ ಹಕ್ಕಿಯ ಹಾರಾಟ ಮನಸ್ಸಿಗೆ ಆನಂದ ನೀಡುವಂತಿತ್ತು.

ಚಿತ್ರಗಳು : ದೇಶದಲ್ಲಿ ಮುಂಗಾರು ಮಳೆಯ ಚಿತ್ತಾರ

ಗಿಶನ್‌ಗಂಜ್‌ನಲ್ಲಿ ಉಕ್ಕಿದ ಮೆಂಚಿ ನದಿ

ಗಿಶನ್‌ಗಂಜ್‌ನಲ್ಲಿ ಉಕ್ಕಿದ ಮೆಂಚಿ ನದಿ

ಕಿಶನ್‌ಗಂಜ್‌ನಲ್ಲಿ ಸುರಿದ ಅತಿಯಾದ ಮಳೆಗೆ ಅಲ್ಲಿರುವ ಮೆಂಚಿ ನದಿಯು ತುಂಬಿ ಹರಿದಿದ್ದು, ರಸ್ತೆಯು ನದಿಯಾಗಿ ಮಾರ್ಪಾಡಾಗಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಸ್ಥಳೀಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಕಪ್ಪಾ ಮಳೆ, ನೆನೆದು ಸುಸ್ತಾಯ್ತು

ಸಾಕಪ್ಪಾ ಮಳೆ, ನೆನೆದು ಸುಸ್ತಾಯ್ತು

ದೆಹಲಿಗೆ ಮುಂಗಾರು ಪ್ರವೇಶಿಸಿ ಒಂದು ತಿಂಗಳಾಗಿದೆ, ಇದೀಗ ಕಳೆದ ಎರಡು ವಾರಗಳಿಂದ ಭಾರಿ ಮಳೆಯನ್ನು ಅಲ್ಲಿನ ಜನತೆ ಕಾಣುತ್ತಿದೆ. ಈ ಮಳೆಯಲ್ಲಿ ವ್ಯಕ್ತಿಯೊಬ್ಬ ನೆನೆಯುತ್ತಿರುವ ದೃಶ್ಯವನ್ನು ನೋಡಬಹುದು.

ಮಳೆಯಲ್ಲಿ ಬೈಕ್‌ ಸವಾರಿ

ಮಳೆಯಲ್ಲಿ ಬೈಕ್‌ ಸವಾರಿ

ಭೋಪಾಲ್‌ನಲ್ಲಿ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ ಆ ನೀರಿನಲ್ಲಿ ವ್ಯಕ್ತಿಯೊಬ್ಬ ಬೈಕ್‌ ಓಡಿಸಿಕೊಂಡು ಹೋಗುತ್ತಿರುವ ಚಿತ್ರವನ್ನು ನೀವಿಲ್ಲ ನೋಡಬಹುದು.

ದೆಹಲಿಯಲ್ಲಿ ಮೆಟ್ರೋ ಬೌಂಡರಿ ವಾಲ್‌ ಕುಸಿತ

ದೆಹಲಿಯಲ್ಲಿ ಮೆಟ್ರೋ ಬೌಂಡರಿ ವಾಲ್‌ ಕುಸಿತ

ನವದೆಹಲಿಯಲ್ಲಿ ಅತಿಯಾದ ಮಳೆಯಿಂದಾಗಿ ಲಜ್‌ಪತ್‌ ನಗರದ ಬಳಿ ಮೆಟ್ರೋ ಬೌಂಡರಿ ವಾಲ್‌ ಕುಸಿದಿದ್ದು, ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು.

English summary
A squall with wind speeds going up to 61 km per hour accompanied by heavy rain hit the Capital on Thursday afternoon. The squall that was at its peak between 3.34 p.m. and 3.36 p.m. brought down visibility on the roads and caused traffic jams due to water logging. Several roads were blocked due to broken branches and uprooted trees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X