ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದರ್ಗಾಗೆ ಬಾಂಬ್ ಇಟ್ಟ ಅಪರಾಧಿಗೆ ಸಿಕ್ಕಿತು ಭವ್ಯ ಸ್ವಾಗತ

By Manjunatha
|
Google Oneindia Kannada News

ಭರೂಚ್, ಸೆಪ್ಟೆಂಬರ್ 06: ಅಜ್ಮೇರ್ ದರ್ಗಾ ಮೇಲೆ ಬಾಂಬ್ ದಾಳಿ ನಡೆಸಿ ಮೂವರ ಸಾವಿಗೆ ಕಾರಣವಾಗಿದ್ದ ಅಪರಾಧಿ ಜಾಮೀನಿನ ಮೇಳೆ ಹೊರಬಂದಾಗ ಆತನಿಗೆ ಭವ್ಯ ಸ್ವಾಗತ ನೀಡಲಾಗಿದೆ.

ಭವೇಶ್ ಪಟೇಲ್, 2007ರಲ್ಲಿ ಅಜ್ಮೇರ್ ದರ್ಗಾ ಮೇಲೆ ಬಾಂಬ್ ದಾಳಿ ನಡೆಸಿದ ಪ್ರಕರಣದಲ್ಲಿ ಅಪರಾಧಿಯೆಂದು ನಿರ್ಧಾರವಾದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆತ ನಿನ್ನೆ ಜಾಮೀನಿನ ಮೇಲೆ ಹೊರಬಂದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನಿಗೆ ಭವ್ಯ ಸ್ವಾಗತ ನೀಸಿದ್ದಾರೆ.

ಬಲಪಂಥೀಯ ಉಗ್ರರಿಗೆ ಬಿಜೆಪಿ ಬೆಂಬಲ: ದಿನೇಶ್‌ ಗುಂಡೂರಾವ್‌ ಆರೋಪಬಲಪಂಥೀಯ ಉಗ್ರರಿಗೆ ಬಿಜೆಪಿ ಬೆಂಬಲ: ದಿನೇಶ್‌ ಗುಂಡೂರಾವ್‌ ಆರೋಪ

ಆತ ಅಜ್ಮೇರ್‌ನ ಜೈಲಿನಿಂದ ತನ್ನ ಊರು ಭರೂಚ್‌ಗೆ ಆಗಮಿಸಿದ. ಜೈಲಿನಲ್ಲಿದ್ದಾಗ ಸ್ವಾಮೀಜಿಯಾಗಿ ಬದಲಾಗಿರುವ ಆತ ಕಾವಿ ಧರಿಸಿ ಊರಿಗೆ ಬಂದಿದ್ದ. ಆತನಿಗೆ ಹಾರ ಹಾಕಿ ಹೆಗಲ ಮೇಲೆ ಹೊತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ವಾಗತ ಮಾಡಿದರು. ರಸ್ತೆಗಳಲ್ಲಿ ಹಾಡು, ನೃತ್ಯಗಳು ಜೋರಾಗಿ ನಡೆದವು.

Darga bomb blast case convict get grand welcome from Hindu outfits

2007 ಅಕ್ಟೋಬರ್ 11 ರಂದು ಭವೇಶ್ ಪಟೆಲ್ ಮತ್ತು ಇನ್ನೂ ಮೂವರು ಅಜ್ಮೇರ್ ದರ್ಗಾ ಮುಂದೆ ಬಾಂಬ್ ಸ್ಫೋಟಿಸಿದ್ದರು. ಈ ಸ್ಫೋಟದಲ್ಲಿ ಮೂರು ಜನ ಮೃತಪಟ್ಟು, 15 ಮಂದಿ ಗಾಯಾಳುಗಳಾಗಿದ್ದರು.

Darga bomb blast case convict get grand welcome from Hindu outfits

ಕುಚ್ಚಿಗುಡ್ಡೆಯಲ್ಲಿ ಹಿಂದೂ ಮಹಿಳೆಯ ಅಂತಿಮ ವಿಧಿ ಪೂರೈಸಿದ ಮುಸ್ಲಿಂ ಯುವಕರುಕುಚ್ಚಿಗುಡ್ಡೆಯಲ್ಲಿ ಹಿಂದೂ ಮಹಿಳೆಯ ಅಂತಿಮ ವಿಧಿ ಪೂರೈಸಿದ ಮುಸ್ಲಿಂ ಯುವಕರು

ನಿನ್ನೆ ತಾನೆ ಬೆಂಗಳೂರಿನಲ್ಲಿ, ಗೌರಿ ಹತ್ಯೆ ಮಾಡಿದ ಆರೋಪಿ ಪರಶುರಾಮ್ ವಾಘ್ಮೋರೆಗೆ ಜಿಂದಾಬಾದ್ ಘೋಷಣೆಗಳನ್ನು ಕೂಗಲಾಗಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ, ಮುಸ್ಲಿಂ ವ್ಯಕ್ತಿಯನ್ನು ಜೀವಂತ ಸುಟ್ಟವನನ್ನು ಹೀರೋ ರೀತಿಯಲ್ಲಿ ಮೆರೆಸಲಾಗಿತ್ತು. ಈಗ ಹಿಂದೂ ಭಯೋತ್ಪಾದಕನೊಬ್ಬನಿಗೆ ಭವ್ಯ ಸ್ವಾಗತ ನೀಡಲಾಗಿದೆ. ಇದೆಲ್ಲಾ ಧಾರ್ಮಿಕ ಅಸಹಿಷ್ಣುತೆಯತ್ತ ಕೊಂಡು ಹೋಗುವ ಆತಂಕ ಎದುರಾಗಿದೆ.

English summary
Ajmer Darga bomb blast convict Bhavesh Patel released on bail from Rajastan Highcourt. He welomed in grand way by hindu outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X