• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೆಡಿಟ್ ಕಾರ್ಡ್ ಕಂಪನಿ ಕೆಲಸ: ತಿಂಗಳಿಗೆ 64 ಲಕ್ಷ ರೂ. ವೇತನ ಘೋಷಿಸಿದ ಸಿಇಓ!

|
Google Oneindia Kannada News

ನವದೆಹಲಿ, ಆಗಸ್ಟ್ 12: ಡಾನ್ ಪ್ರೈಸ್ ಎಂಬ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಅದಕ್ಕೆ ಕಾರಣವಾಗಿರುವುದೇ ಅದೊಂದು ಉದ್ಯೋಗ ಕೊಡುಗೆಯ ಟ್ವೀಟ್.

CEO ಕೇವಲ ದುರ್ಬಲರ ಪರವಾಗಿ ನಿಲ್ಲಲು ಪ್ರಯತ್ನಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಕಂಪನಿ ಆಗಿರುವ ಗ್ರಾವಿಟಿ ಪೇಮೆಂಟ್ಸ್‌ನ ಸಿಇಒ ಆಗಿರುವ ಡಾನ್ ಪ್ರೈಸ್, ತನ್ನ ಉದ್ಯೋಗಿಗಳ ಕನಿಷ್ಠ 64 ಲಕ್ಷ ರೂಪಾಯಿ ವೇತನ ನೀಡುವುದಾಗಿ ಘೋಷಿಸಿದ್ದಾರೆ.

ಉದ್ಯೋಗಿಗಳನ್ನು ಏಕೆ ವಜಾಗೊಳಿಸಿದೆ; ಕಣ್ಣೀರು ಹಾಕಿದ ಸಿಇಓ ವಾಲೇಕ್!ಉದ್ಯೋಗಿಗಳನ್ನು ಏಕೆ ವಜಾಗೊಳಿಸಿದೆ; ಕಣ್ಣೀರು ಹಾಕಿದ ಸಿಇಓ ವಾಲೇಕ್!

ಕೇವಲ 64 ಲಕ್ಷ ರೂಪಾಯಿ ವೇತನವೊಂದೇ ಆಗಿದ್ದರೆ ಸುದ್ದಿ ಅಷ್ಟು ಟ್ರೆಂಡ್ ಆಗುತ್ತಿರಲಿಲ್ಲವೇನೋ. ಆದರೆ ಈ ಕಂಪನಿಯ ಉದ್ಯೋಗಿಗಳು ತಾವು ಇಚ್ಛಿಸಿದ ಸ್ಥಳದಲ್ಲಿ ಇದ್ದುಕೊಂಡು ಕಂಪನಿಯ ಕೆಲಸವನ್ನು ಮಾಡುವುದಕ್ಕೆ ಅವಕಾಶ ನೀಡಲಾಗುವುದು ಎಂದು ಸಿಇಓ ಬರೆದುಕೊಂಡಿದ್ದಾರೆ.

ಸಿಇಓ ನೀಡಿರುವ ಬಂಪರ್ ಕೊಡುಗೆಯಿಂದ ಟ್ವಿಟ್ಟರ್ ಅಂಗಳಲ್ಲಿ ಡಾನ್ ಪ್ರೈಸ್ ಹೆಸರು ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ಅವರು ಮಾಡಿರುವ ಟ್ವೀಟ್ ಏನು? ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅವರು ನೀಡಿರುವ ಆಫರ್ ಏನು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಒಂದು ಉದ್ಯೋಗಕ್ಕಾಗಿ 300 ಅರ್ಜಿಗಳು

ಒಂದು ಉದ್ಯೋಗಕ್ಕಾಗಿ 300 ಅರ್ಜಿಗಳು

ಟ್ವೀಟ್‌ನಲ್ಲಿ ತಮ್ಮ ಕಂಪನಿಯು ಜನರು ಎಲ್ಲಿ ಬೇಕಾದರೂ ಕೆಲಸ ಮಾಡಲು ಅನುಮತಿಸುತ್ತದೆ. ಇದರ ಜೊತೆಗೆ ಇತರೆ ಸಂಪೂರ್ಣ ಪ್ರಯೋಜನಗಳು, ಪಾವತಿಸುವ ರಜೆ ಇತ್ಯಾದಿಗಳನ್ನು ಸಹ ನೀಡುತ್ತದೆ ಎಂದು ಡಾನ್ ಪ್ರೈಸ್ ಹೇಳಿದ್ದಾರೆ. ಒಂದು ಹುದ್ದೆಗೆ ಬರೋಬ್ಬರಿ 300ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಬೇರೆ ಕಂಪನಿಗಳ ಕುರಿತು ಡಾನ್ ಪ್ರೈಸ್ ಹೇಳಿದ್ದೇನು?

ಬೇರೆ ಕಂಪನಿಗಳ ಕುರಿತು ಡಾನ್ ಪ್ರೈಸ್ ಹೇಳಿದ್ದೇನು?

"ತಮ್ಮ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕಂಪನಿಗಳು ವಿನಾಕಾರಣ ದೂಷಿಸುತ್ತವೆ. ಯಾರೊಬ್ಬರೂ ಕೆಲಸ ಮಾಡುವುದೇ ಇಲ್ಲ ಎನ್ನುವಂತೆ ಹೇಳುತ್ತವೆ. ಅದು ವೇತನ ಹೆಚ್ಚಳ ಮಾಡದಿರುವುದಕ್ಕೆ ಕಂಪನಿಗಳ ಒಂದು ಮಾರ್ಗವಾಗಿದೆ," ಎಂದು ಡಾನ್ ಪ್ರೈಸ್ ಹೇಳಿದರು. ಸಿಇಒ ಆಗಿ ತನ್ನ ಉದ್ಯೋಗಿಗಳ ಸಮಯ ಮತ್ತು ಶ್ರಮವನ್ನು ಗೌರವಿಸುವಂತೆ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಡಾನ್ ಪ್ರೈಸ್ ಟ್ವೀಟಿಗೆ ಜನರ ರಿಯಾಕ್ಷನ್ ಹೇಗಿದೆ?

ಡಾನ್ ಪ್ರೈಸ್ ಟ್ವೀಟಿಗೆ ಜನರ ರಿಯಾಕ್ಷನ್ ಹೇಗಿದೆ?

"80ರ ದಶಕದಲ್ಲಿ ನಾನು ರೆಸ್ಟೊರೆಂಟ್‌ಗಳಲ್ಲಿ ಅಡುಗೆ ಮಾಡುವವನಾಗಿ ಗಂಟೆಗೆ 9-11 ಡಾಲರ್ ವೇತನವನ್ನು ಪಡೆದುಕೊಳ್ಳುತ್ತಿದ್ದೆ. ಅಂದು ಅಷ್ಟರಲ್ಲಿ ನಾವು ಸಿಯಾಟಲ್‌ನ ಕ್ಯಾಪ್ಟಿಟಲ್ ಹಿಲ್‌ನಲ್ಲಿ ಅಪಾರ್ಟ್ಮೆಂಟ್ ಅನ್ನು ಖರೀದಿಸಬಹುದು. ಆದರೆ 13-15 ಡಾಲರ್ ವೇತನದಿಂದ ಈ ದಿನಗಳಲ್ಲಿ ಕನಿಷ್ಠ ಕೆಲಸಗಾರನಿಗೆ ಮನೆ ಬಾಡಿಗೆಯನ್ನು ಕಟ್ಟುವುದಕ್ಕೆ ಆಗುವುದಿಲ್ಲ," ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

"ನೀವೂ ಚೆನ್ನಾಗಿ ಪಾವತಿಸಬಹುದು ಮತ್ತು ಲಾಭವನ್ನೂ ಉಳಿಸಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು," ಎಂದಿದ್ದಾರೆ.

"ನೀವು ನೀಡಿರುವ ಉದಾಹರಣೆಯು ತುಂಬಾ ಪರಿಪೂರ್ಣವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ದೀರ್ಘಾವಧಿಯ ವಹಿವಾಟಿನ ಕುರಿತು ಎಲ್ಲರೂ ಮಾತನಾಡುತ್ತಾರೆ. ಆದರೆ ಅದೇ ನೀತಿ ಇಂದಿಗೂ ಕೆಲಸ ಮಾಡುತ್ತದೆಯೇ? ತಮ್ಮ ನೀತಿಗಳು ಉತ್ತಮವಾಗಿವೆಯೇ ಅಥವಾ ಕೆಟ್ಟದಾಗಿವೆಯೋ ಎಂಬುದನ್ನು ನಿರ್ಧರಿಸುವುದಕ್ಕೆ ಮೊದಲು ಅಂಥ ವ್ಯಕ್ತಿಗಳು ಪರಾಮರ್ಶೆ ಮಾಡಿಕೊಳ್ಳಬೇಕು," ಎಂದು ಕ್ರೇಗ್ ಗೋರ್ಸುಚ್ ಬರೆದಿದ್ದಾರೆ.

ನೀವು 64 ಲಕ್ಷ ವೇತನ ನೀಡುವುದಾದರೆ ನಿಮಗೆಷ್ಟು ಲಾಭ?

ನೀವು 64 ಲಕ್ಷ ವೇತನ ನೀಡುವುದಾದರೆ ನಿಮಗೆಷ್ಟು ಲಾಭ?

"ನಿಮ್ಮ ಕಂಪನಿಯು ಇದನ್ನು ನಿಭಾಯಿಸಬಲ್ಲದು, ಆದರೆ ಅನೇಕರಿಗೆ ಸಾಧ್ಯವಿಲ್ಲ" ಎಂದು ಪ್ಯಾಂಥರ್ಸ್ ಬ್ರೇವ್ಸ್ ವ್ಯಸನಿ ಕಾಮೆಂಟ್ ಮಾಡಿದ್ದಾರೆ.

"ಉದ್ಯೋಗಿಗಳನ್ನು ಹುಡುಕಲು ಸಾಧ್ಯವಾಗದ ಪ್ರತಿಯೊಂದು ವ್ಯಾಪಾರವು ತಮ್ಮ ಅರ್ಜಿದಾರರನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಬೇಡಿ. ನೀವು 64 ಲಕ್ಷ ರೂಪಾಯಿ ಪಾವತಿಸಬಹುದು ಎಂಬುದು ಪ್ರಭಾವಶಾಲಿಯಾಗಿದೆ, ಆದರೆ ನೀವು ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿಯನ್ನು ಹೊಂದಿದ್ದೀರಿ; ಇದು ನಿಮ್ಮ ಕಂಪನಿ ಎಷ್ಟು ಲಾಭದಾಯಕವಾಗಿದೆ ಎಂಬುದನ್ನು ತೋರಿಸುತ್ತದೆ," ಎಂದು ಬರೆದುಕೊಂಡಿದ್ದಾರೆ.

English summary
Discription: Dan Price Company offers minimum 60 Lakhs wage job: Why CEO Tweet viral in Social Media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X