ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SC/ST ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಭಾರತ್ ಬಂದ್

|
Google Oneindia Kannada News

Recommended Video

ಎಸ್ ಸಿ ಎಸ್ ಟಿ ದೌರ್ಜನ್ಯ ಕಾಯ್ದೆ ತಿದ್ದುಪಡಿಗೆ ವಿರೋಧ: ಭಾರತ್ ಬಂದ್ ಗೆ ಕರೆ | Oneindia Kannada

ಭೋಪಾಲ್, ಸೆಪ್ಟೆಂಬರ್ 06: ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದಲಿತ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿವೆ.

ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಬಂದ್ ಬಿಸಿ ಹೆಚ್ಚಿದ್ದು, ಸುಮಾರು 35 ಕ್ಕೂ ಹೆಚ್ಚು ದಲಿತ ಸಂಘಟನೆಗಳು ಬಂದ್ ಗೆ ಕರೆನೀಡಿವೆ.

ಆಗಸ್ಟ್ 9 ರಂದು ದಲಿತ ಸಂಘಟನೆಗಳಿಂದ ಭಾರತ್ ಬಂದ್, ಯಾಕಾಗಿ?ಆಗಸ್ಟ್ 9 ರಂದು ದಲಿತ ಸಂಘಟನೆಗಳಿಂದ ಭಾರತ್ ಬಂದ್, ಯಾಕಾಗಿ?

ಈ ಎರಡು ರಾಜ್ಯಗಳ ಕೆಲವು ಶಾಲಾ ಕಾಲೇಜುಗಳಿಗೆ ಸುರಕ್ಷತೆಯ ದೃಷ್ಟಿಯಿಂದ ರಜಾಘೋಷಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಾಮಾಜಿಕವಾಗಿ ಹಿಂದುಳಿದಿದ್ದು, ಅವರ ಮೇಲೆ ನಿರಂತರ ಹಿಂಸೆ ನಡೆಯುತ್ತಿದೆ ಎಂಬುದನ್ನು ಮನಗಂಡಿದ್ದ 1989ರ ಸರ್ಕಾರ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ 1989 ಅನ್ನು ಜಾರಿಗೆ ತಂದಿತ್ತು. ಇದರನ್ವಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ವ್ಯಕ್ತಿ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ದೂರು ನೀಡಿದ್ದೇ ಆದಲ್ಲಿ, ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಲಾಗುತ್ತಿತ್ತು ಮತ್ತು ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.

Dalit outfits call Bharat bandh on Sep 6

ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿತ ಸುಪ್ರೀಂ ಕೋರ್ಟ್ ಈ ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅಂತೆಯೇ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗಿದ್ದು ಅದಕ್ಕಾಗಿ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಆಗಸ್ಟ್ 9 ರಂದು ಬಂದ್ ಗೆ ಕರೆನೀಡಲಾಗಿತ್ತಾದರೂ, ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದರಿಂದ ಬಂದ್ ಅನ್ನು ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಇಂದು ಮತ್ತೊಮ್ಮೆ ಬಂದ್ ಗೆ ಕರೆನೀಡಲಾಗಿದೆ.

ಎಸ್‌ಸಿ, ಎಸ್‌ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂಕೋರ್ಟ್ ಅನುಮತಿಎಸ್‌ಸಿ, ಎಸ್‌ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿ: ಸುಪ್ರೀಂಕೋರ್ಟ್ ಅನುಮತಿ

ಆದರೆ ಬಂದ್ ಬಿಸಿ ಉತ್ತರ ಭಾರತದ ಕೆಲವು ರಾಜ್ಯಗಳಿಗಷ್ಟೇ ಸೀಮಿತವಾಗಿದೆ.

English summary
Dalit outfits call Bharat bandh on Sep 6th to oppose SC/ST act. The Schedule Caste and Schedule Tribes (Prevention of Atrocities) Amendment Bill, 2018 was passed in Lok Sabha on August 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X