ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿಗೆ 'ದಲಿತ ಮಿತ್ರ' ಪ್ರಶಸ್ತಿ: ದಲಿತರಿಂದಲೇ ವಿರೋಧ

|
Google Oneindia Kannada News

ಲಕ್ನೋ, ಏಪ್ರಿಲ್ 14: ಉತ್ತರ ಪ್ರದೇಶದ ಅಂಬೇಡ್ಕರ್ ಮಹಾಸಭಾವು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಲಿತ ಮಿತ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲು ಆಡಿಕೊಳ್ಳುವವರ ಬಾಯಿಗೆ ಆಹಾರವಾದ ಗೋರಖಪುರದ ಯೋಗಿ ಸೋಲು

"ಯೋಗಿ ಆದಿತ್ಯನಾಥ್ ದಲಿತರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮ ಜೀವನ ಮಟ್ಟ ಸುಧಾರಿಸುವಲ್ಲಿ ಶ್ರಮವಹಿಸಿದ್ದಾರೆ. ಅವರು ಖಂಡಿತ ಇನ್ನೂ ಉನ್ನತ ಸ್ಥಾನವನ್ನು ಒಂದಲ್ಲ ಒಂದು ದಿನ ಪಡೆದೇ ಪಡೆಯುತ್ತಾರೆ" ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಲಾಲ್ಜಿ ಪ್ರಸಾದ್ ನಿರ್ಮಲ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಆದರೆ ಯೋಗಿ ಆದಿತ್ಯನಾಥ್ ರನ್ನು ಹಲವು ಬಾರಿ ದಲಿತ ವಿರೋಧಿ ಎಂದು ಕರೆದಿರುವ ಅನೇಕರು ಈ ಪ್ರಶಸ್ತಿಗೆ ಯೋಗಿ ಸೂಕ್ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

Dalit Mitra Award to Yogi Adityanath

ಯೋಗಿ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ದಲಿತ ನಾಯಕರಾದ ಎಸ್ ಆರ್ ದಾರಾಪುರಿ, ನಿವೃತ್ತ ಐಎಎಸ್ ಅಧಿಕಾರಿ ಚಂದ್ರಾ, ಗಜೋಧರ್ ಪ್ರಸಾದ್, ಎನ್ ಎಸ್ ಚೌರಾಸಿಯಾ ಪೊಲೀಸರು ವಶಕ್ಕೆ ಪಡೆದರು.

ಉ.ಪ್ರ: ಜೀವ ಉಳಿಯಲು ಪೊಲೀಸ್ ಠಾಣೇಲಿ ಮಲಗ್ತೀವಂತಾರೆ ಕ್ರಿಮಿನಲ್ ಗಳುಉ.ಪ್ರ: ಜೀವ ಉಳಿಯಲು ಪೊಲೀಸ್ ಠಾಣೇಲಿ ಮಲಗ್ತೀವಂತಾರೆ ಕ್ರಿಮಿನಲ್ ಗಳು

"ಯೋಗಿ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವ ಕುರಿತು ನಮ್ಮ ವಿರೀಧವಿದೆ. ಆದರೆ ಪ್ರಶಸ್ತಿಗೆ ಆಯ್ಕೆ ಮಾಡುವ ಮುನ್ನ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಮಹಾಸಭಾ ಯೋಚನೆಯನ್ನೇ ಮಾಡಿಲ್ಲ. ರಾಜ್ಯದಲ್ಲಿ ದಲಿತರ ಮೇಲೆ ಒಂದು ವರ್ಷದಿಂದ ನಿರಂತರ ದೌರ್ಜನ್ಯ ನಡೆಯುತ್ತಿರುವಾಗ ಯೋಗಿ ಆದಿತ್ಯನಾಥ್ ಅವರಿಗೆ ಇಂಥ ಪ್ರಶಸ್ತಿ ನೀಡುವುದು ಸೂಕ್ತವಲ್ಲ ಎಂಬುದು ನಮ್ಮ ಅಭಿಪ್ರಾಯ" ಎಂದು ಎಸ್ ಆರ್ ದಾರಾಪುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬೇಡ್ಕರ್ ಮಹಾಸಭಾ ಉತ್ತರ ಪ್ರದೇಶದ ಅತೀ ದೊಡ್ಡ ದಲಿತ ಸಂಘತನೆಯಾಗಿದ್ದು, ಅಂಬೇಡ್ಕರ್ ಅವರ ಸಾಕಷ್ಟು ಅನುಯಾಯಿಗಳು ಸಂಘಟನೆಯ ಭಾಗವಾಗಿದ್ದಾರೆ.

English summary
Ambedkar Mahasabha in Uttara Pradesh has decided to give Dalit Mitr(Friend) award to chief minister of the state Yogi Adityanath. But some dalits protested against this honour ti Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X