ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕಾಸು ಸೇವೆ ಒದಗಿಸುವ ಅಂಚೆ ಇಲಾಖೆಯ ಜೀವನಾಡಿ ಡಾಕ್ ಸೇವಕ್

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಕೇಂದ್ರ ಸರಕಾರವು ಸೆಪ್ಟೆಂಬರ್ 2018ರಲ್ಲಿ ಭಾರತ ಪೋಸ್ಟ್ ಪೇಮಂಟ್ಸ್ ಬ್ಯಾಂಕ್ (ಐಪಿಪಿಬಿ) ಆರಂಭಿಸಿದೆ. ಅಂಚೆ ಇಲಾಖೆಯು ದೇಶದ 650 ಜಿಲ್ಲೆಗಳಲ್ಲಿ ಐಪಿಪಿಬಿ ಶಾಖೆಗಳನ್ನು ಆರಂಭಿಸಿದೆ. 1.5 ಲಕ್ಷ ಅಂಚೆ ಕಚೇರಿ ಮತ್ತು 3 ಲಕ್ಷ ಪೋಸ್ಟ್ ಮೆನ್ ಅಥವಾ 'ಗ್ರಾಮೀಣ್ ಡಾಕ್ ಸೇವಕ್ಸ್'ಗೆ ಸ್ಮಾರ್ಟ್ ಫೋನ್ಸ್, ಡಿಜಿಟಲ್ ಉಪಕರಣ ನೀಡಲಾಗಿದೆ.

ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸೇವೆ ಒದಗಿಸಲು ಈ ಉಪಕರಣಗಳನ್ನು ನೀಡಲಾಗಿದೆ.

ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ

ಐಪಿಪಿಬಿಯ ಅನುಕೂಲಗಳು:
* ಹಣ ವರ್ಗಾವಣೆ

* ಸರಕಾರದ ಅನುಕೂಲಗಳ ವರ್ಗಾವಣೆ

* ಬಿಲ್ ಪಾವತಿ

* ಹೂಡಿಕೆ

* ಇನ್ಷೂರೆನ್ಸ್

Postal

ಐಪಿಪಿಬಿ ಅಡಿಯಲ್ಲಿ ಪೋಸ್ಟ್ ಮೆನ್ ಗಳು ಈ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಡಿಜಿಟಲ್ ವ್ಯವಹಾರಗಳನ್ನು ಪೂರೈಸಲು ಐಪಿಪಿಬಿ ಆರಂಭ ಮಾಡಿದೆ. ಇದರ ಜತೆಗೆ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ, ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಯೋಜನಾ ಮುಂತಾದ ಯೋಜನೆಗಳನ್ನು ಸಹ ತಲುಪಿಸಲು ಇದರಿಂದ ಅನುಕೂಲವಾಗುತ್ತದೆ.

ಹಳ್ಳಿಹಳ್ಳಿಗಳಲ್ಲಿ ಪ್ರತಿ ಮನೆ, ಪ್ರತಿ ರೈತ ಹಾಗೂ ಸಣ್ಣ ಸಣ್ಣ ಸಂಸ್ಥೆಗಳಿಗೆ ಆರ್ಥಿಕ ಸೇವೆಗಳನ್ನು ತಲುಪಿಸಲು ಐಪಿಪಿಬಿಗೆ ಮೂರು ಲಕ್ಷ ಡಾಕ್ ಸೇವಕ್ಸ್ ಇದ್ದಾರೆ. ಮುಂದಿನ ಕೆಲವೇ ತಿಂಗಳಲ್ಲಿ ಐಪಿಪಿಬಿಯು ದೇಶದ ಒಂದೂವರೆ ಲಕ್ಷ ಅಂಚೆ ಕಚೇರಿಗಳನ್ನು ತಲುಪಲಿವೆ.

English summary
Government launched the India Post Payments Bank (IPPB) in the month of September 2018. The postal department has opened IPPB branches across 650 districts in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X