ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 1: ದೇಶ, ವಿದೇಶಗಳ ಚುಟುಕು ಸುದ್ದಿ ಅಪ್ಡೇಟ್

|
Google Oneindia Kannada News

ಬೆಂಗಳೂರು, ಡಿ.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

8:00- ಕರ್ನಾಟಕದಲ್ಲಿ ಇಂದು 1,330 ಹೊಸ ಕೋವಿಡ್-19 ಪ್ರಕರಣ ಪತ್ತೆ, 886 ಪ್ರಕರಣಗಳು ಚೇತರಿಕೆ ಕಂಡಿದ್ದು, 14 ಸಾವುಗಳು ಸಂಭವಿಸಿವೆ. ಒಟ್ಟು ಪ್ರಕರಣಗಳು: 8,86,227; ಒಟ್ಟು ಚೇತರಿಕೆ ಪ್ರಕರಣಗಳು: 8,50,707; ಒಟ್ಟು ಸಾವುಗಳು: 11,792; ಸಕ್ರಿಯ ಪ್ರಕರಣಗಳು: 23,709.

6:00: ಟೆಕ್ಸಾಸ್ ರಸ್ತೆಯಲ್ಲಿ ಇನ್ಸ್ಟಾಗ್ರಾಂ ಸೆಲೆಬ್ರಿಟಿ ಎನಿಸಿಕೊಂಡಿದ್ದ 26 ವರ್ಷದ ಮಹಿಳೆ ಅಲೆಕ್ಸಿಸ್ ಶಾರ್ಕಿ ಅವರ ಶವ ನಗ್ನವಾಗಿ ಪತ್ತೆಯಾಗಿದೆ. ಕಳೆದ ವಾರದಿಂದ ಮಹಿಳೆ ನಾಪತ್ತೆಯಾಗಿದ್ದರು.

5:30- ಸಂಗೀತಾ ಶ್ರೀವಾಸ್ತವ ಅವರು ಅಲಹಾಬಾದ್ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಮಹಿಳಾ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

5:00- ಹಡಗು ಮೂಲಕ ಹಾರಿ ಬಿಡಬಹುದಾದ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆಯಾಗಿದೆ.

4:45- ಹರ್ಯಾಣ ಗಡಿಯಲ್ಲಿನ ರೈತರ ಸಂಘಟನೆಗಳ ಪ್ರತಿಭಟನೆಗೆ ಭೀಮ್ ಆರ್ಮಿ ಬೆಂಬಲ ವ್ಯಕ್ತಪಡಿಸಿದೆ.

4:30- ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ 4 ಗಂಟೆ ತನಕ ಶೇ 30ರಷ್ಟು ಮತದಾನ ದಾಖಲಾಗಿದೆ.

3:00- ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಲು ಮುಂದಾದ 32ಕ್ಕೂ ಅಧಿಕ ರೈತ ಸಂಘಟನೆಗಳು

2:45- ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಹತ್ಯೆ ಮಾಡಲಾಗಿದೆ ಎಂಬ ಗಾಳಿ ಸುದ್ದಿಯನ್ನು ಹೈದರಾಬಾದ್ ಪೆಲೆಸ್ ಆಯುಕ್ತ ವಿಶ್ವನಾಥ್ ಅಲ್ಲಗೆಳೆದಿದ್ದಾರೆ

2:30- ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಸಂದೀಪ್ ಕಠಾರಿಯಾರನ್ನು ಸಿಇಒ ಆಗಿ ನೇಮಿಸಿದ ಬಾಟಾ ಸಂಸ್ಥೆ.

2:10- ಶಿವಸೇನಾ ಸೇರ್ಪಡೆಗೊಂಡ ನಟಿ ಊರ್ಮಿಳಾ ಮಾತೋಂಡ್ಕರ್, ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ, ಈ ಮುಂಚೆ ಕಾಂಗ್ರೆಸ್ ಟಿಕೆಟ್ ನಿಂದ ಚುನಾವಣೆ ಎದುರಿಸಿದ ಸೋಲು ಕಂಡಿದ್ದರು.

1;30-ರೈತರಿಗೆ ಬೆಂಬಲ ನೀಡಲು ನಿರ್ಧರಿಸಿದ ಹರ್ಯಾಣ ಶಾಸಕ ಸೋಂಬೀರ್ ಸಾಂಗ್ವಾನ್ ಅವರು ನಿಗಮ ಮಂಡಳೀ ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ.

Recommended Video

RBI Introduces New 50 Rupees Notes | Oneindia Kannada

12:45: ಅರಬ್ಬೀ ಸಮುದ್ರದ ಕಡಲಿಗೆ ಇಳಿದ 6 ಮೀನುಗಾರರು ಬೋಟ್ ಸಮೇತ ನಾಪತ್ತೆ. ಸುಮಾರು 16 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. 22 ಮೀನುಗಾರರಿದ್ದ ಬೋಟ್ ಮಗಚಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

12:30: ಕೇಂದ್ರ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಕಾನೂನು ಜಾರಿಗೊಳಿಸಿದೆ, ಕೃಷಿ ವಿಧೇಯಕ, ಕಾರ್ಮಿಕ ಕಾಯ್ದೆಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಕರ್ತರಿಂದ ಪ್ರತಿಭಟನೆ.

12: 15: ಮಾಜಿ ಐಎಎಸ್ ಅಧಿಕಾರಿ ಸಂತೋಷ್ ಬಾಬು ಅವರು ಮಕ್ಕಳ್ ನೀತಿ ಮೈಯಂ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರು ಉಪಸ್ಥಿತರಿದ್ದು, ಸ್ವಾಗತಿಸಿದರು.

12: 00: ಅಕ್ರಮ ಆಸ್ತಿಗಳಿಕೆ ಪ್ರಕರಣ: ಶಿವಸೇನಾ ಶಾಸಕ ಪ್ರತಾಪ್ ಸರ್ ನಾಯಕ್ ಅವರ ಪುತ್ರ ವಿಹಾಂಗ್ ಸರ್ ನಾಯ್ಕ್ ಅವರಿಗೂ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗಾಗಿ ಸಮನ್ಸ್ ಜಾರಿ

11:45: ರೈತರ ಪರ ನಿಲ್ಲಲು ಇದು ಸಕಾಲ: ಕೇರಳ ಸಿಎಂ ಪಿಣರಾಯಿ ವಿಜಯನ್

11: 30- ''ಸಚಿವರಾಗಲು ಅನರ್ಹ ಎಂಬ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದರಿಂದ ನನಗೆ ಮುಜುಗರವಾಗಿಲ್ಲ. ನನ್ನ ಎಂಎಲ್‌ಸಿ ಸ್ಥಾನ ಅಬಾಧಿತ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ'' ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.

11:00- ತಮಿಳುನಾಡಿನಲ್ಲಿ ವನ್ನಿಯಾರ್ ಸಮುದಾಯಕ್ಕೆ ಶೇ 20ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಮಂಗಳವಾರ ಬೆಳಿಗ್ಗೆ ಪ್ರತಿಭಟನಾಕಾರರು ಚಲಿಸುವ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Daily Roundup December 01- Latest News And Updates On State, National and International

10-45- ಬೆಳಗ್ಗೆ 9.41ರ ವೇಳೆಗೆ ಉತ್ತರಾಖಂಡ್ ರಾಜ್ಯದ ಹರಿದ್ವಾರದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ 3.9 ರಷ್ಟು ತೀವ್ರತೆ ಕಂಡು ಬಂದಿದೆ.

10: 30- ಡಾಲರ್ ಎದುರು ರುಪಾಯಿ ಮೌಲ್ಯ- 16 ಪೈಸೆ ಏರಿಕೆ ಕಂಡು 73.89 ರು ಪ್ರತಿ ಡಾಲರ್ ನಂತೆ ಆರಂಭಿಕ ವಹಿವಾಟು ನಡೆಸಿದೆ.

10:15- ಭಾರತದಲ್ಲಿ ಒಂದೇ ದಿನ 31118 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆ, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 94,62,810ಕ್ಕೆ ಏರಿಕೆ, 24 ಗಂಟೆಗಳಲ್ಲಿ ಮಂದಿ 482 ಬಲಿ, ಸಾವಿನ ಸಂಖ್ಯೆ 1,37,621ಕ್ಕೆ ಏರಿಕೆ, ದೇಶದಲ್ಲಿ ಈವರೆಗೂ 88,89,585 ಸೋಂಕಿತರು ಗುಣಮುಖ.

10:00- ವಿದೇಶಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ವಿವಿಗಳು ಬಾಗಿಲು ತೆರೆದಿವೆ. ಕೊವಿಡ್ 19 ದೆಸೆಯಿಂದ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ.

9:45- ಕ್ರೊಯೇಷಿಯಾದ ಪ್ರಧಾನಿ ಆಂಡ್ರೆ ಪ್ಲೆಂಕೊವಿಚ್ ಅವರಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಐಸೋಲೇಷನ್ ವಾಸ ಮುಂದುವರೆಸಲಾಗಿದೆ.

9:30- ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸಲಹೆಗಾರರಾಗಿದ್ದ ಸ್ಕಾಟ್ ಅಟ್ಲಾಸ್ ರಾಜೀನಾಮೆ.

9:15: ನಾಗಪುರದ ಶಿಕ್ಷಕರ ಪದವೀಧರ ಚುನಾವಣೆಯಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ.

9:00- ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಪಂಚಾರಿಯಲ್ಲಿ ಡಿಡಿಸಿ ಚುನಾವಣೆಯ ಎರಡನೇ ಹಂತದ ಮತದಾನ ಜಾರಿಯಲ್ಲಿದೆ.

8:30-ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ.

Daily Roundup December 01- Latest News And Updates On State, National and International

8:15-ಸಿಂಘು ಗಡಿಯನ್ನು ಇನ್ನೂ ಮುಕ್ತಗೊಳಿಸಿಲ್ಲ-ದೆಹಲಿ ಸಂಚಾರ ವಿಭಾಗದ ಪೊಲೀಸರ ಸ್ಪಷ್ಟನೆ. ರೈತರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಗಡಿ ಬಂದ್ ಮಾಡಲಾಗಿದೆ. ಮುಕರ್ಬಾ ಚೌಕ್ ಹಾಗೂ ಜಿಟಿಕೆ ರಸ್ತೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ.

8:00-150 ಸ್ಥಾನಗಳಿಗಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಇಂದು ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದೆ.

English summary
Daily Roundup December 01: We are covering the top news and updates about political, national, international, cinema, sports, business and covid-19. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X