ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 27: ದೇಶ, ವಿದೇಶಗಳ ಚುಟುಕು ಸುದ್ದಿ ರೌಂಡಪ್

|
Google Oneindia Kannada News

ಬೆಂಗಳೂರು, ನ. 27: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.11:15-ಜನವರಿ 16ರಿಂದ ವಾರಕ್ಕೆ ಮೂರಾವರ್ತಿಯಂತೆ ಮುಂಬೈನಿಂದ ಲಂಡನ್ ನಗರಕ್ಕೆ ವಿಮಾನಯಾನ ಘೋಷಿಸಿದ ವಿಸ್ತಾರ ಏರ್ ಲೈನ್ಸ್.

11:00- ಕರ್ನಾಟಕ ಸರ್ಕಾರ 2020-21 ನೇ ವರ್ಷವನ್ನು ಕನ್ನಡ ಕಾಯಕ ವರ್ಷಾಚರಣೆ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.

10:45-ಆಸ್ಟ್ರೇಲಿಯಾದ ವೈನ್ ಮೇಲೆ 200% ತೆರಿಗೆ ಹೇರಿದ ಚೀನಾ. ವಾಣಿಜ್ಯ ಸಮರ ಮುಂದುವರೆಸಿರುವ ಚೀನಾ, ಆಸ್ಟ್ರೇಲಿಯಾದ ಅನೇಕ ಉತ್ಪನ್ನಗಳ ಮೇಲೆ ನಿರ್ಬಂಧ ವಿಧಿಸಿದೆ.

10-20- ಸುಮಾರು 26 ಮಿಲಿಯನ್ ಡೋಸ್ ಕೊರೊನಾ ವೈರಸ್ ಟ್ರಯಲ್ ಆಸ್ಟ್ರಾಜೆನಿಕಾ ಲಸಿಕೆ ಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದ ಥೈಲ್ಯಾಂಡ್. ಆಕ್ಸ್ ಫರ್ಡ್ ವಿವಿಯಿಂದ ಆಸ್ಟ್ರಾಜೆನಿಕಾ ಲಸಿಕೆ ತಯಾರಿಸಲಾಗುತ್ತಿದೆ.

9-45-ಅಹಮದಾಬಾದ್, ಪುಣೆ ಹಾಗೂ ಹೈದರಬಾದ್ ನಲ್ಲಿ ತಯಾರಾಗುತ್ತಿರುವ ಕೊವಿಡ್ 19 ಲಸಿಕೆಗಳನ್ನು ಶನಿವಾರದಂದು ಪರಿಶೀಲಿಸಲಿರುವ ಪ್ರಧಾನಿ ಮೋದಿ.

8:30-ಟೋಕಿಯೋ ಒಲಿಂಪಿಕ್ಸ್ ಗಾಗಿ ಕೊರೊನಾವೈರಸ್ ಪರೀಕ್ಷೆ ಆರಂಭ. ಮುಂದಿನ ಮಾರ್ಚ್ ತಿಂಗಳಿನಿಂದ ಪ್ರಾಯೋಗಿಕವಾಗಿ ಕಾರ್ಯಕ್ರಮಗಳು ಶುರು.

8:00: ಕೋವಿಡ್ 19 ಕಾರಣದಿಂದ ಪ್ರೀಮಿಯರ್ ಬಾಡ್ಮಿಂಟನ್ ಲೀಗ್ ಸೀಸನ್ 6 ಮುಂದೂಡಿಕೆ.

7:30-ಮಾಸ್ಕ್ ಧರಿಸದಿದ್ದರೆ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದಲ್ಲಿ 250 ರು ಹಾಗೂ ಇತರೆ ಪ್ರದೇಶಗಳಲ್ಲಿ 100 ರು ದಂಡ ವಿಧಿಸಲಾಗುವುದು ಎಂದು ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಆದೇಶ.6: 20: ರೈತ ಸಂಘಟನೆಗಳು ಪ್ರತಿಭಟನೆ ನಿಲ್ಲಿಸಿದರೆ ಮಾತನಾಡಲು ಸಾಧ್ಯ ಎಂದ ಕೃಷಿ ಸಚಿವ ನರೇಂದ್ರ ಸಿಂಗ್

6:00- ನಿವಾರ್ ಚಂಡಮಾರುತದ ಆರ್ಭಟಕ್ಕೆ ಮೃತಪಟ್ಟವರ ಸಂಖ್ಯೆ 4ಕ್ಕೇರಿಕೆ. 2000ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ವಿಪತ್ತು ನಿರ್ವಹಣಾ ನಿಧಿಯಿಂದ 2 ಲಕ್ಷ ರು ಘೋಷಣೆ.
5:30 ಗುರು ನಾನಕ್ ದೇವ್ ಅವರ 551ನೇ ಜಯಂತಿ ಅಂಗವಾಗಿ ಪಾಕಿಸ್ತಾನಕ್ಕೆ ಭಾರತದಿಂದ 600 ಸಿಖ್ ಸಮುದಾಯದವರು ತೆರಳಿದ್ದಾರೆ.
5:00: ಆಸ್ಟ್ರಾಜೆನಿಕಾ ಲಸಿಕೆ ಮಾಹಿತಿ ಕದಿಯಲು ಉತ್ತರ ಕೊರಿಯಾದ ಹ್ಯಾಕರ್ ಗಳಿಂದ ಯತ್ನ ಎಂಬ ಸುದ್ದಿ ಬಂದಿದೆ.
4:45-ಪಶ್ಚಿಮ ಬೆಂಗಾಳದ ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ಅಧಿಕಾರಿ ರಾಜೀನಾಮೆ ಸಲ್ಲಿಕೆ. ಸಂಜೆ ಬಿಜೆಪಿ ಸೇರ್ಪಡೆ ಖಚಿತ.

4: 00- ಬಿಹಾರದ ರಾಜ್ಯಸಭೆ ಉಪ ಚುನಾವಣೆಗೆ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ.

03:00: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಮತ್ತು ಅವರಿಗೆ ತಡೆಯೊಡ್ಡುತ್ತಿರುವ ಪೊಲೀಸರ ನಡುವಿನ ಸಂಘರ್ಷ ಶುಕ್ರವಾರವೂ ಮುಂದುವರಿದಿದೆ. ಪಂಜಾಬ್ ಮತ್ತು ಹರಿಯಾಣದಿಂದ ಬಂದ ಸಾವಿರಾರು ರೈತರು ಪಾಣಿಪತ್‌ನಲ್ಲಿ ಸೇರಿದ್ದು, ಅಲ್ಲಿಂದ ಜತೆಯಾಗಿ ರಾಜಧಾನಿ ದೆಹಲಿಯತ್ತ ಹೊರಡುತ್ತಿದ್ದಾರೆ.

01:00: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ರೈತರು ಮತ್ತು ಅವರಿಗೆ ತಡೆಯೊಡ್ಡುತ್ತಿರುವ ಪೊಲೀಸರ ನಡುವಿನ ಸಂಘರ್ಷ ಶುಕ್ರವಾರವೂ ಮುಂದುವರಿದಿದೆ. ಪಂಜಾಬ್ ಮತ್ತು ಹರಿಯಾಣದಿಂದ ಬಂದ ಸಾವಿರಾರು ರೈತರು ಪಾಣಿಪತ್‌ನಲ್ಲಿ ಸೇರಿದ್ದು, ಅಲ್ಲಿಂದ ಜತೆಯಾಗಿ ರಾಜಧಾನಿ ದೆಹಲಿಯತ್ತ ಹೊರಡುತ್ತಿದ್ದಾರೆ.

12:00: ಕೊರೊನಾ ವೈರಸ್ ಸೋಂಕು ಇಳಿಮುಖವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಸಿಗಲಿದೆ ಎಂಬ ಭರವಸೆಗಳು ಸದ್ಯಕ್ಕೆ ನೆಮ್ಮದಿ ನೀಡಿದೆ. ಲಾಕ್‌ಡೌನ್‌ಗಳು, ಕ್ವಾರೆಂಟೈನ್, ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಹೆಚ್ಚಿನ ಆಸ್ಪತ್ರೆಗಳು ಮುಂತಾದ ಯಾವ ಕ್ರಮಗಳಿಂದಲೂ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇವುಗಳಿಂದ ಸೋಂಕಿನ ಹರಡುವಿಕೆ ವೇಗ ಮತ್ತು ಸಾವಿನ ಸಂಖ್ಯೆಗಳನ್ನು ಒಂದಷ್ಟು ಕಡಿಮೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ಈಗಿರುವ ಒಂದೇ ಒಂದು ನಿರೀಕ್ಷೆಯೆಂದರೆ ಲಸಿಕೆ.

11:30: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆ ಶುಕ್ರವಾರ ಕೂಡ ಮುಂದುವರಿದಿದ್ದು ದೆಹಲಿ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

11:01: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಮಂಡಲಂ-ಮಕರವಿಳಕ್ಕು ಅವಧಿಯಲ್ಲಿ ಬರುತ್ತಿರುವ ಭಕ್ತರ ಗರಿಷ್ಠ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲು ಅನುಮತಿ ನೀಡಲಾಗಿದೆ.

10: 30- ದೆಹಲಿಯ ಸಿಂಘು ಗಡಿಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಜೋರಾಗಿದ್ದು, ದೆಹಲಿ ಪೊಲೀಸರು ರೈತರನ್ನು ಬಂಧಿಸಲು ಮುಂದಾಗಿದ್ದಾರೆ. ಮೈದಾನಗಳನ್ನು ಜೈಲಿನಂತೆ ಪರಿವರ್ತಿಸಲು ಸರ್ಕಾರ ಅನುಮತಿ ಕೋರಿದ್ದಾರೆ.

10:00- NCR ಪ್ರದೇಶಕ್ಕೆ ದೆಹಲಿಯಿಂದ ಮೆಟ್ರೋ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಆದರೆ, ಗುರುಗ್ರಾಮದಿಂದ ನೋಯ್ಡಾ ರೈಲು ಸಂಚರಿಸುತ್ತಿದೆ.

9:30: ಭಾರತದಲ್ಲಿ 43,082 ಕೊರೊನಾ ಸೋಂಕಿತರು ಪತ್ತೆ, ಒಂದೇ ದಿನದಲ್ಲಿ 492 ಮಂದಿ ಸಾವು, ಒಟ್ಟು ಪ್ರಕರಣಗಳು 93,09,788, ಸಕ್ರಿಯ ಪ್ರಕರಣಗಳು 4,55,ಹಾಗೂ ಇದುವರೆಗೆ ಡಿಸ್ಚಾರ್ಜ್ ಆದವರು 87,18,517.

9:00-ಜೋ ಬೈಡನ್ ಅವರು ಎಲೆಕ್ಟರೋಲ್ ಕಾಲೇಜ್ ಮತಗಳಲ್ಲಿ ಗೆಲುವು ಸಾಧಿಸಿದರೆ ನಾನು ಶ್ವೇತಭವನ ತೊರೆಯುವೆ ಎಂದ ಡೊನಾಲ್ಡ್ ಟ್ರಂಪ್.

8:30-ನೇಪಾಳಕ್ಕೆ 2,000 ಡೋಸೇಜ್ ರೆಮ್ಡೆಸಿವಿರ್ ಲಸಿಕೆ ಹಾಗೂ ಅಗತ್ಯ ಔಷಧಗಳನ್ನು ಉಡುಗೊರೆಯಾಗಿ ನೀಡಿದ ಭಾರತ.

8:15:-268 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಮರಳಿದ ಟೀಂ ಇಂಡಿಯಾ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಸಿಡ್ನಿಯಲ್ಲಿ ಈಗ ಆರಂಭ.

Daily Roundup 27 November- Latest News And Updates On State, National and International

Recommended Video

Hardik Pandya ಕೇವಲ ಬ್ಯಾಟ್‌ನಿಂದಲೇ ಪಂದ್ಯ ಗೆಲ್ಲಿಸ ಬಲ್ಲರು | Oneindia Kannada

8:00-ರಾಜ್ ಕೋಟ್ ಕೊವಿಡ್ 19 ಆಸ್ಪತ್ರೆಯ ಐಸಿಯುವಿನಲ್ಲಿ ಅಗ್ನಿ ದುರಂತ, 5 ಮಂದಿ ರೋಗಿಗಳು ಮೃತ, 33 ಮಂದಿಗೆ ಗಾಯ. ಘಟನೆ ಬಗ್ಗೆ ತನಿಖೆಗೆ ಗುಜರಾತ್ ಸಿಎಂ ವಿಜಯ್ ರೂಪಾನಿ ಆದೇಶ.

English summary
Daily Roundup 27 November: We are covering the top news and updates about political, national, international, cinema, sports, business and covid-19. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X