• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ದಿನದ ಸುದ್ದಿಗಳೇನು? ದೇಶ, ವಿದೇಶಗಳ ಕ್ಷಣಕ್ಷಣದ ಮಾಹಿತಿ

|

ಬೆಂಗಳೂರು, ನ. 26: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

9:30- ಕರ್ನಾಟಕದಲ್ಲಿ ಇಂದು 1505 ಹೊಸ ಕೋವಿಡ್ ಪ್ರಕರಣಗಳು ಪತ್ತೆ, ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 8,79,560, ಇಂದು ರಾಜ್ಯದಲ್ಲಿ 12 ಜನರು ಸಾವು, ಒಟ್ಟು ಮೃತಪಟ್ಟವರು 11,726, ಇಂದು ಡಿಸ್ಚಾರ್ಜ್ ಆದವರು 1067, ಇದುವರೆಗೂ ಗುಣಮುಖಗೊಂಡವರು 8,42,499. ಒಟ್ಟು ಸಕ್ರಿಯ ಪ್ರಕರಣಗಳು 25,316. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 409

5:50-ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುಜರಾತ್ ನ ಭರೂಚ ಜಿಲ್ಲೆಯ ಪಿರಮಾಣ್ ಗ್ರಾಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ದಿವಂಗತ ಅಹಮದ್ ಪಟೇಲ್ ಅವರ ನಿವಾಸಕ್ಕೆ ಗುರುವಾರ ತೆರಳಿ, ಅಹಮದ್ ಪಟೇಲ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

5:30-ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಗೆ ದೆಹಲಿ ಮೆಟ್ರೋ ಸಂಚಾರ ರದ್ದು

5-15: ಎಫ್ ಸಿ ಕೊಹ್ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮೊದಲ ಸಿಇಒ ನಿಧನ ಅವರಿಗೆ 96 ವರ್ಷ ವಯಸ್ಸಾಗಿತ್ತು.

5:00 ಲಾಭದ ಬುಕ್ಕಿಂಗ್ ಕಾರಣ ಬುಧವಾರ ಕುಸಿತಕ್ಕೆ ಕಾರಣವಾಗಿ ಭಾರತೀಯ ಷೇರುಪೇಟೆಯು ಗುರುವಾರ ಚೇತರಿಸಿಕೊಂಡಿದೆ. ಮಂಬೈ ಷೇರುಪೇಟೆ ಸೆನ್ಸೆಕ್ಸ್ 431 ಪಾಯಿಂಟ್ಸ್‌ ಏರಿಕೆ ದಾಖಲಿಸಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 100ಕ್ಕೂ ಅಧಿಕ ಪಾಯಿಂಟ್ಸ್‌ ಏರಿಕೆ ಕಂಡಿದೆ.

4:45: ಭಾರತೀಯ ಸಶಸ್ತ್ರ ಬಲದ ಸೈನಿಕರು ಕೊರೆಯುವ ಚಳಿ, ಹಿಮಪಾತದ ನಡುವೆ ಭಾರತೀಯ ಸಂವಿಧಾನ ದಿನಾಚರಣೆಯಲ್ಲಿ ತೊಡಗಿದ್ದರು. ಭಾರತದ ಸಂವಿಧಾನದ ಮೌಲ್ಯವನ್ನು ಸೇನೆ ಎತ್ತಿ ಹಿಡಿಯಲು ಬದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

4:25: ಬಹುಕೋಟಿ ರೋಷ್ನಿ ಭೂ ಹಗರಣದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ತಾಜ್ ಮೊಯಿದ್ದೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ.

4:00: ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಹರ್ಯಾಣದಲ್ಲಿ ಮೂವರು ಸದಸ್ಯರ ಸಮಿತಿ ಸ್ಥಾಪನೆ

3:45: ನವೆಂಬರ್ 28ರಂದು ಪ್ರಧಾನಿ ಮೋದಿ ಅವರು ಪುಣೆಯ ಸೆರಂ ಸಂಸ್ಥೆಗೆ ಭೇಟಿ ನೀಡಿ ಲಸಿಕೆ ಉತ್ಪಾದನೆ ಬಗ್ಗೆ ಪರಿಶೀಲಿಸಲಿದ್ದಾರೆ

3:30 ಕೊವಿಡ್ 19ರಿಂದ ಪುರುಷತ್ವಕ್ಕೆ ತೊಂದರೆಯಾಗಲಿದೆ ಎಂದು ಮಿಯಾಮಿ ವಿವಿಯಿಂದ ಹೊಸ ಸಂಶೋಧನಾ ವರದಿ ಬಹಿರಂಗ.

3:15: ಭರೂಚ್ : ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸಮಾಧಿ ನಿರ್ಮಾಣ

03:00: ದೇಶದ ವಿಮಾನಯಾನ ಸುರಕ್ಷತಾ ನಿಯಂತ್ರಕ ಪ್ರಾಧಿಕಾರ ಡಿಜಿಸಿಎ, ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಡಿಸೆಂಬರ್ 31ರವರೆಗೂ ವಿಸ್ತರಿಸಿದೆ. ಕೊರೊನಾ ವೈರಸ್ ಸೋಂಕು ತೀವ್ರಗೊಂಡ ಸಂದರ್ಭದಲ್ಲಿ ಲಾಕ್‌ಡೌನ್ ಜಾರಿಯಾದ ವೇಳೆ ಮಾರ್ಚ್ 23ರಂದು ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಅಮಾನತುಗೊಳಿಸಲಾಗಿತ್ತು.

01:18: ನಿವಾರ್ ಭೀತಿ ಇನ್ನಿಲ್ಲ, ಕ್ಷೀಣವಾದ ಚಂಡಮಾರುತದ ಅಬ್ಬರ, ತಮಿಳುನಾಡಿನ ಉತ್ತರ ಕರಾವಳಿ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದು, ನೈಋತ್ಯದ ಕಡೆಗೆ ಸಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ

   IND vs AUS 1st ODI Preview:Team India ಮಾರ್ಚ್ ತಿಂಗಳ ನಂತರ ಇದೇ ಮೊದಲು ನಾಳಿನ ಪಂದ್ಯದಲ್ಲಿ |Oneindia Kannada

   12:00 ನ.26ರಂದು ರಾತ್ರಿ ಚಂಡಮಾರುತ ಪತನವಾಗಲಿದೆ, ಪುದುಚೇರಿಯನ್ನು ದಾಟಿದೆ ಎಂದು ಐಎಂಡಿ ವರದಿ. ಸುಮಾರು ಒಂದು ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

   11:51: ಬಿಲಾವಲ್ ಭುಟ್ಟೋ ಜರ್ದಾರಿ ಅವರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್ ಎಂಬ ವರದಿ ಬಂದಿದೆ.

   11:30-ಪಂಜಾಬ್ -ಹರ್ಯಾಣ ಗಡಿ ಪ್ರದೇಶದಲ್ಲಿ ರೈತರಿಂದ ಪ್ರತಿಭಟನೆ, ರಸ್ತೆ ತಡೆ, ಪೊಲೀಸರಿಂದ ಪ್ರತಿಭಟನಾ ನಿರತರನ್ನು ಚದುರಿಸಲು ಭಾರಿ ಪ್ರಮಾಣದಲ್ಲಿ ನೀರು ಪ್ರಯೋಗ

   11:00- ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಸ್ಮರಣಾರ್ಥ ಗೋವಾದಲ್ಲಿ ಪ್ರತಿಮೆ ನಿರ್ಮಾಣ.

   10:30 -ಬಿಲಾವಲ್ ಭುಟ್ಟೋ ಜರ್ದಾರಿ ಅವರಿಗೆ ಕೊರೊನಾವೈರಸ್ ಸೋಂಕು ಪಾಸಿಟಿವ್ ಎಂಬ ವರದಿ ಬಂದಿದೆ.

   10:00-ಪಂಢಾರಪುರ ದೇಗುಲಕ್ಕೆ ತೆರಳಿ ಕೊವಿಡ್ 19 ಲಸಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್.

   9:30 : ನ್ಯೂಜಿಲೆಂಡ್ ಸರಣಿ ಆಡಲು ತೆರಳಿರುವ ಪಾಕಿಸ್ತಾನ 6 ಕ್ರಿಕೆಟರ್ ಗಳಿಗೆ ಕೊವಿಡ್ 19 ಪಾಸಿಟಿವ್ ಬಂದಿದೆ.

   9:15-ಮುಂದಿನ ಮೂರು ಗಂಟೆಗಳಲ್ಲೇ ಚಂಡಮಾರುತದ ಆರ್ಭಟ ಕೊನೆಗೊಳ್ಳುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

   9:00-ಸೂಡನ್ ದೇಶದ ಮಾಜಿ ಪ್ರಧಾನಿ ಸಾದಿಕ್ ಅಲ್ ಮಹದಿ(84) ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಈ ದೇಶದ ಕೊನೆಯ ಚುನಾಯಿತ ಪ್ರಧಾನಿಯಾಗಿದ್ದರು.

   8:38: ಐಎಂಎ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಗ್ ಅವರನ್ನು ಜೈಲಿನಿಂದ ಜಯದೇವ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಬೇಗ್ ಅವರ ಅನಾರೋಗ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ.

   07:58: ಬಿರ್ಭುಮ್ ಜಿಲ್ಲೆಯಲ್ಲಿ ಸಮಾವೇಶಕ್ಕೆ ತೆರಳುತ್ತಿದ್ದ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಆರೋಪಿಸಿದ್ದಾರೆ. ಇನ್ನು ಮುಂದೆ ಬೀದಿಗೆ ಇಳಿಯುವ ಸಂದರ್ಭದಲ್ಲಿ ಬಿದಿರಿನ ದೊಣ್ಣೆಗಳನ್ನು ಹಿಡಿದುಕೊಂಡು ಬನ್ನಿ. ಅಗತ್ಯಬಂದಾಗ ಅವರಿಗೆ ತಿರುಗಿ ಬಾರಿಸಬಹುದು ಎಂದು ಬಿಜೆಪಿ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.

   07:39: ಅಮೆರಿಕದಲ್ಲಿ ಕೋವಿಡ್‌ಗೆ 2302 ಮಂದಿ ಬಲಿ

   07:17: ಚೆನ್ನೈನಲ್ಲಿ ಪ್ರವಾಹ ಭೀತಿ: ಫ್ಲೈ ಓವರ್‌ ಮೇಲೆ ವಾಹನ ಪಾರ್ಕ್ ಮಾಡಿದ ಜನ

   8.00: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪತ್ರಿಕಾಗೋಷ್ಠಿ ನಡೆಸಿದ್ದು, ಕೊರೊನಾ ಲಸಿಕೆಗಳ ಕುರಿತು ಮಾಹಿತಿ ನೀಡಿದೆ. 2021ರ ಜುಲೈ ಒಳಗೆ 300-400 ಮಿಲಿಯನ್ ಕೊರೊನಾ ಲಸಿಕೆ ಉತ್ಪಾದಿಸಲಾಗುವುದು ಎಂದು ತಿಳಿಸಿದೆ.

   English summary
   Daily Roundup 26 November: We are covering the top news and updates about political, national, international, cinema, sports, business and covid-19. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X